ಚಾಮರಾಜನಗರ: ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ತೆಗೆದುಕೊಟ್ಟಿಲ್ಲವೆಂದು ಬಾಲಕಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲದ ಬಸ್ತೀಪುರ ಬಡಾವಣೆಯ ಬಸವರಾಜು ಎಂಬವವರ ಮಗಳು ಹರ್ಷಿತಾ (12) ಮೃತ ದುರ್ದೈವಿ. ಈಕೆಯು ಹಬ್ಬಕ್ಕೆ ಹೊಸ ಬಟ್ಟೆ ತೆಗೆದುಕೊಡಿ ಎಂದು ಕೇಳಿದಾಗ ಆಕೆಯ ಪೋಷಕರ ಸಂಬಳವಾದ ಬಳಿಕ ಎಲ್ಲರೂ ಸೇರಿ ಬಟ್ಟೆ ತೆಗೆದುಕೊಳ್ಳೋಣ ಎಂದು ಹೇಳಿದ್ದಾರೆ. ಅಷ್ಟಕ್ಕೇ ಬೇಸರಗೊಂಡು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಬಿಗಿದುಕೊಂಡು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.