ETV Bharat / state

ಯಳಂದೂರಲ್ಲಿ 12 ಟನ್​​ ಅಕ್ಕಿ ವಶ.. ಚಾಮರಾಜನಗರದಲ್ಲಿ ಗೃಹಿಣಿ ಕೊಲೆ ಆರೋಪ

ಕಾರು ಹಾಗೂ ಪಿಕಪ್ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 12 ಟನ್ ಅಕ್ಕಿಯನ್ನು ಯಳಂದೂರು ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಯಳಂದೂರಲ್ಲಿ 12 ಟನ್​​ ಅಕ್ಕಿ ವಶ
ಯಳಂದೂರಲ್ಲಿ 12 ಟನ್​​ ಅಕ್ಕಿ ವಶ
author img

By

Published : Mar 26, 2023, 4:55 PM IST

ಯಳಂದೂರಲ್ಲಿ 12 ಟನ್​​ ಅಕ್ಕಿ ವಶ

ಚಾಮರಾಜನಗರ: ಅಕ್ರಮವಾಗಿ ಸಾಗಿಸುತ್ತಿದ್ದ 12 ಟನ್​ ಅಕ್ಕಿಯನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಬಳೆಪೇಟೆಯಲ್ಲಿ ಅಕ್ಕಿ ಸಾಗಣೆಯ ಖಚಿತ ಮಾಹಿತಿ ಮೇರೆಗೆ ಯಳಂದೂರು ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ ವೇಳೆ ಕಾರು ಹಾಗೂ ಪಿಕ್​ ಅಪ್​ ವಾಹನಗಳಲ್ಲಿ ತುಂಬಿದ್ದ ನೂರಾರು ಚೀಲ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಇನ್ನು, ಈ ದಾಳಿಯಲ್ಲಿ 12 ಟನ್ ಅಕ್ಕಿ ವಶಪಡಿಸಿಕೊಂಡಿದ್ದು, ಒಂದು ಕಾರು ಹಾಗೂ ಎರಡು ಪಿಕ್ ಅಪ್ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಯಳಂದೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಗೃಹಿಣಿ ಶವ ಪತ್ತೆ : ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಮೂಡ್ನಾಕೂಡು ಗ್ರಾಮದಲ್ಲಿ ನಡೆದಿದೆ. ಮೂಡ್ನಾಕೂಡು ಗ್ರಾಮದ ಮಹೇಶ್ ಎಂಬುವರ ಪತ್ನಿ ಶಾಲಿನಿ (22) ಮೃತರು. ಶಾಲಿನಿ ಅವರ ಮೃತದೇಹ ಮನೆಯ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.

ಕೆಲವೇ ವರ್ಷದ ಹಿಂದೆ ಮದುವೆಯಾಗಿರುವ ಶಾಲಿನಿಯನ್ನು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿ ಬಾವಿಗೆ ಎಸೆದಿದ್ದಾರೆ ಎಂದು ಮೃತ ಶಾಲಿನಿ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ತಪ್ಪಿತಸ್ಥರ ಬಂಧನ ಆಗುವವರೆಗೆ ಮೃತದೇಹ ತೆಗೆಯಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಸ್ಥಳಕ್ಕೆ ಚಾಮರಾಜನಗರ ಡಿವೈಎಸ್​ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಭೇಟಿ ನೀಡಿದ್ದಾರೆ. ಅವರು ಕುಟುಂಬದವರ ಮನವೊಲಿಸಿದರೂ ಒಪ್ಪುತ್ತಿಲ್ಲ. ಶಾಲಿನಿ ತಂದೆ ಶಾಂತಪ್ಪ ಮತ್ತು ಚಿಕ್ಕಮ್ಮ ಚಿನ್ನಮ್ಮ ಅವರು ಮೊದಲು ತಪ್ಪಿತಸ್ಥರನ್ನು ಬಂಧಿಸಿ ಎಂದು ಮನವಿ ಮಾಡಿದ್ದಾರೆ.

ಶಾಲಾ ಮಕ್ಕಳ ಮೇಲೆ ಜೇನು ದಾಳಿ : ಗುಂಡ್ಲುಪೇಟೆ ಪಟ್ಟಣದ ಮಡಹಳ್ಳಿ ರಸ್ತೆಯಲ್ಲಿರುವ ಮಾನಸ ವಿದ್ಯಾಸಂಸ್ಥೆಯಲ್ಲಿ ಐವರು ವಿದ್ಯಾರ್ಥಿನಿಯರಿಗೆ ಹೆಜ್ಜೇನು ಕಚ್ಚಿರುವ ಘಟನೆ ನಡೆದಿದೆ.

ಇದನ್ನೂ ಓದಿ : ರಾಜ್ಯದಲ್ಲಿ ಮುಂದಿನ 4 ದಿನ ಗುಡುಗು ಮಿಂಚು ಸಹಿತ ಪೂರ್ವ ಮುಂಗಾರು ಆಲಿಕಲ್ಲು ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಕಾಲೇಜಿನಲ್ಲಿ ಪಾಠ ಮಾಡುತ್ತಿದ್ದ ವೇಳೆ ಶಾಲೆ ಆವರಣದಲ್ಲಿರುವ ಟ್ಯಾಂಕ್‍ನಲ್ಲಿ ಗೂಡು ಕಟ್ಟಿಕೊಂಡಿರುವ ಜೇನುಗಳು ಮೇಲೆದ್ದು, ವಿದ್ಯಾರ್ಥಿನಿಯರಿಗೆ ಕಚ್ಚಿವೆ. ತಕ್ಷಣ ವಿದ್ಯಾರ್ಥಿನಿಯರನ್ನು ಪಟ್ಟಣದ ಕಬ್ಬಹಳ್ಳಿ ಸಾಹುಕಾರ್ ಕೆ ಸಿ ಸುಬ್ಬಣ್ಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆ ನಂತರ ವಿದ್ಯಾರ್ಥಿನಿಯರು ಮನೆಗೆ ತೆರಳಿದರು. ಎಲ್ಲರೂ ಆರೋಗ್ಯದಿಂದ ಇದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ : ಗದಗ: ದಾಖಲೆ ಇಲ್ಲದ ಹಣ, ಬಟ್ಟೆ ವಶಕ್ಕೆ ಪಡೆದ ಪೊಲೀಸರು

ಮಾನಸ ವಿದ್ಯಾಲಯ ಆವರಣದಲ್ಲಿ ಪುರಸಭೆಗೆ ಸೇರಿದ ಓವರ್ ಹೆಡ್ ಟ್ಯಾಂಕ್ ಇದ್ದು, ಟ್ಯಾಂಕ್‍ನಲ್ಲಿ ಎರಡು ಕಡೆಗಳಲ್ಲಿ ಹೆಜ್ಜೇನು ಗೂಡು ಮಾಡಿಕೊಂಡಿವೆ. ಶಾಲೆ ಮತ್ತು ಕಾಲೇಜಿನಲ್ಲಿ ನೂರಾರು ವಿದ್ಯಾರ್ಥಿಗಳು ಕಲಿಯುತ್ತಿದ್ದು, ಜೇನು ಗೂಡು ಇರುವ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಜೇನು ನೊಣಗಳಿಂದ ಕಚ್ಚಿಸಿಕೊಂಡ್ರೂ ಸಿಹಿ ಹಂಚಿದ್ದೇನೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.