ಚಾಮರಾಜನಗರ: ರಸ್ತೆ ಮಧ್ಯೆದಲ್ಲಿ ನಿಂತಿದ್ದ ಆನೆ ಒಂದನ್ನು ಕಂಡ ಬೈಕ್ ಸವಾರರು ಆನೆ ಹೋಗುವವರೆಗೆ ನಿಂತರೆ ಬಳಿಕ ಒಂದಾದ ಬಳಿಕ ಒಂದರಂತೆ 11 ಆನೆಗಳು ಮರಿಗಳೊಂದಿಗೆ ರಸ್ತೆ ದಾಟಿ ವಾಹನ ಸವಾರರನ್ನು ರೋಮಾಂಚನಗೊಳಿಸಿದ ಘಟನೆ ಚಾಮರಾಜನಗರ - ತಾಳವಾಡಿ ರಸ್ತೆಯಲ್ಲಿ ನಡೆದಿದೆ.
ತಮಿಳುನಾಡಿನ ತಾಳವಾಡಿ ರಸ್ತೆಯಲ್ಲಿ ಒಂದಾದ ಬಳಿಕ ಒಂದರಂತೆ 11 ಆನೆಗಳು ರಸ್ತೆ ದಾಟಿದ್ದು ಬೈಕ್ ಸವಾರರೊಬ್ಬರು ವಿಡಿಯೋ ಸೆರೆ ಹಿಡಿದಿರುವುದು ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಮೊದಲು ಸಲಗವೊಂದು ರಸ್ತೆ ಬಳಿ ಬಂದು ನಿಂತಿತ್ತು. ಇದಾದ ಬಳಿಕ ಹಿಂದೆ ಮೂರು ಮರಿಗಳೊಂದಿಗೆ ಆನೆ ಹಿಂಡು ಘೀಳಿಡುತ್ತಾ ರಸ್ತೆ ದಾಟಿದ್ದನ್ನು ಕಂಡು ವಾಹನ ಸವಾರರು ಥ್ರಿಲ್ ಆಗಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಆಹಾರ ಮತ್ತು ನೀರಿನ ಅಭಾವ ಇರುವುದರಿಂದ ನೀರಿನ ಮೂಲ ಹಿಡಿದು ಆನೆಗಳು ವಲಸೆ ಹೋಗುವುದು ಸಾಮಾನ್ಯವಾಗಿದೆ. ಬೆಂಗಳೂರು - ಕೊಯಮತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇತ್ತೀಚಿಗೆ ಹಿಂಡು ಹಿಂಡಾಗಿ ಆನೆಗಳು ರಸ್ತೆ ದಾಟುವುದನ್ನು ಹಗಲು ಹೊತ್ತಿನಲ್ಲೇ ನಿತ್ಯ ಕಾಣಬಹುದಾಗಿದೆ.
ಇದನ್ನೂ ಓದಿ: VIDEO - ಹಕ್ಕಿಯ ಗೂಡಿಗೆ ಲಗ್ಗೆ ಹಾಕಿದ ಕೆರೆ ಹಾವು.. ಮರಿ ಉಳಿಸಿಕೊಳ್ಳಲು ತಾಯಿ ಹಕ್ಕಿ ಕಾದಾಟ!