ETV Bharat / state

ಚಾಮರಾಜನಗರ: ಚಿನ್ನ ಕದ್ದ ಆರೋಪಿಗೂ ಸೋಂಕು, ಆತಂಕದಲ್ಲಿ ಪೊಲೀಸರು!

ಜಿಲ್ಲೆಯಲ್ಲಿಂದು ಬರೋಬ್ಬರಿ 105 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದೆ. ಈ ಪೈಕಿ ಕಳ್ಳತನ ಪ್ರಕರಣದ ಆರೋಪಿಗೂ ಸೋಂಕು ದೃಢಪಟ್ಟಿದ್ದು ಪೊಲೀಸರಲ್ಲಿ ನಡುಕ ಹುಟ್ಟಿಸಿದೆ.

Chamrajnagara corona cases
Chamrajnagara corona cases
author img

By

Published : Aug 19, 2020, 8:42 PM IST

ಚಾಮರಾಜನಗರ: ಜಿಲ್ಲೆಯಲ್ಲಿಂದು ಬರೋಬ್ಬರಿ 105 ಮಂದಿಗೆ ಕೊರೊನಾ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 1787ಕ್ಕೆ ಏರಿಕೆಯಾಗಿದೆ.

ಚಾಮರಾಜನಗರ ತಾಲೂಕಿನ 36, ಗುಂಡ್ಲುಪೇಟೆಯ‌ 11, ಕೊಳ್ಳೇಗಾಲದ 35, ಹನೂರು 11, ಯಳಂದೂರು ತಾಲೂಕಿನ 10 ಕೋವಿಡ್ ಪ್ರಕರಣಗಳು ಇಂದು ವರದಿಯಾಗಿದೆ. ಮತ್ತೊಂದೆಡೆ, 111 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 397ಕ್ಕೆ ಇಳಿಕೆಯಾಗಿದ್ದು, 159 ಮಂದಿ ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಮುಂದುವರೆಸಿದ್ದಾರೆ. 1085 ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ.

ಕಳ್ಳತನ ಆರೋಪಿಗೆ ಕೊರೊನಾ: ಕೊಳ್ಳೇಗಾಲ ತಾಲೂಕಿನ ಮಾಂಬಳ್ಳಿ ಠಾಣೆಯ ಪೊಲೀಸರು ಕಳ್ಳತನ ಪ್ರಕರಣದಡಿ ಬಂಧಿಸಿ ಕರೆತಂದಿದ್ದ ಆರೋಪಿಗೆ ಆ್ಯಂಟಿಜೆನ್ ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದಿದ್ದು ಪೊಲೀಸರಲ್ಲಿ ನಡುಕ ಹುಟ್ಟಿಸಿದೆ. ಇನ್ನೂ, ಠಾಣೆಯ ಪಿಎಸ್ಐ ವಾಹನ ಚಾಲಕನಿಗೆ, ಸಿಪಿಐ ಕಚೇರಿಯ ಮಹಿಳಾ ಸಿಬ್ಬಂದಿಗೆ ವೈರಸ್ ವಕ್ಕರಿಸಿರುವ ಹಿನ್ನೆಲೆ ಎರಡು ಠಾಣೆಗಳನ್ನು ಸಹ ಸೀಲ್ ಡೌನ್ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.