ಚಾಮರಾಜನಗರ: ಅರ್ಜಿದಾರರಿಗೆ ನಿಗದಿತ ಅವಧಿಗೆ ಮಾಹಿತಿ ನೀಡದ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಅವರಿಗೆ ರಾಜ್ಯ ಮಾಹಿತಿ ಹಕ್ಕುಗಳ ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ.
![Chamarajanagar](https://etvbharatimages.akamaized.net/etvbharat/prod-images/kn-cnr-03-tahasildar-av-ka10038_26092021135736_2609f_1632644856_1004.jpg)
ಚಾಮರಾಜನಗರ ತಾಲೂಕಿನ ಪುಣಜನೂರು ಗ್ರಾಮದ ರಂಗಸ್ವಾಮಿ ನಾಯಕ ಅವರು ಗ್ರಾಮದ ಸರ್ವೆ ನಂ.35ರಲ್ಲಿ 4.06 ಎಕರೆ, ಸರ್ವೆ ನಂ.38/1ಪಿ ರಲ್ಲಿ 2.20 ಎಕರೆ ಜಮೀನು ಖಾತೆ ಆಗದಿರುವ ಬಗ್ಗೆ ಹೈಕೋರ್ಟ್ ತರಲಾಗಿರುವ ಮಧ್ಯಂತರ ತಡೆಯಾಜ್ಞೆಯ ಆದೇಶದ ಪ್ರತಿಯನ್ನು ದೃಢೀಕರಿಸಿ ಮಾಹಿತಿ ನೀಡುವಂತೆ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದರು.
ಈ ಬಗ್ಗೆ ಮಾಹಿತಿ ನೀಡದ ಕಾರಣ 2019ರ ಏಪ್ರಿಲ್ 10ರಂದು ರಾಜ್ಯ ಮಾಹಿತಿ ಹಕ್ಕುಗಳ ಆಯೋಗಕ್ಕೆ ಮೇಲ್ಮನವಿಯನ್ನೂ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಆಯೋಗ ಮಾಹಿತಿ ನೀಡುವಂತೆ ಆರು ಬಾರಿ ಆದೇಶಿಸಿತ್ತು. ಆದರೂ ಮಾಹಿತಿ ನೀಡದ ಕಾರಣಕ್ಕೆ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿಗೆ ದಂಡ ವಿಧಿಸಿದೆ. ದಂಡದ ಹಣವನ್ನು ಎರಡು ಕಂತುಗಳಲ್ಲಿ ವೇತನದಲ್ಲಿ ಕಡಿತಗೊಳಿಸಿ ವರದಿ ಸಲ್ಲಿಸುವಂತೆ ಮಾಹಿತಿ ಆಯೋಗದ ಕಾರ್ಯದರ್ಶಿ ಸೂಚಿಸಿದ್ದಾರೆ.
ಇದನ್ನೂ ಓದಿ: ಗಡಿಭಾಗದಲ್ಲಿ ಬಸ್ ಮೇಲೆ ಸಲಗ ದಾಳಿ, ಗ್ಲಾಸ್ ಪುಡಿ-ಪುಡಿ.. ಪ್ರಯಾಣಿಕರು, ಚಾಲಕ ಕಕ್ಕಾಬಿಕ್ಕಿ- Video