ETV Bharat / state

ಪ್ರಧಾನಿ ಮೋದಿ ಬರೀ ಸುಳ್ಳು ಭಾಷಣ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್ - undefined

ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಹಿಂದುಳಿದ ವರ್ಗಗಳಿಗೆ ಒಂದು ಸೀಟ್ ನೀಡಿಲ್ಲ. ಜೊತೆಗೆ ಪತ್ರಕರ್ತರನ್ನು ಉದ್ದೇಶಿಸಿ ಮೋದಿ ಅವರು ಒಂದು ದಿನವೂ ಮಾತನಾಡಿಲ್ಲ. ಬರೀ ಸುಳ್ಳು ಭಾಷಣಗಳನ್ನು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಟೀಕಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್
author img

By

Published : Apr 13, 2019, 9:47 AM IST

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದು, ದೇಶದಲ್ಲಿ ಅವರ ಸಾಧನೆ ಏನು ಇಲ್ಲವೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ​ಗುಂಡೂರಾವ್ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಪ್ರಮುಖ ವಿಚಾರಗಳನ್ನು ನಾನು ಮೋದಿ ಅವರಲ್ಲಿ ಕೇಳುತ್ತೇನೆ, ಅವರು ಉತ್ತರ ಕೊಡಬೇಕು. ಮಂಡ್ಯ ಸ್ವತಂತ್ರ ಅಭ್ಯರ್ಥಿ ಬಗ್ಗೆ ಬೆಂಬಲ ಸೂಚಿಸಿ ಭಾಷಣ ಮಾಡಿದ್ದಾರೆ. ಅದ್ರೆ ಅಂಬರೀಶ್ ಅವರ ಹೆಸರು ಬಳಸಿ ಅಲ್ಲಿಯ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದೀರಾ?. ಇಲ್ಲಿ ತೇಜಸ್ವಿ ಅನಂತ್ ಕುಮಾರ್ ಅವರನ್ನು ಯಾಕೆ ಮರೆತಿದ್ದೀರಾ?. ಅನಂತ್ ಕುಮಾರ್ ಅವರು ನಿಮಗಿಂತಲೂ ದೊಡ್ಡ ನಾಯಕರಾಗಿದ್ದರು. ಅವರ ಬಗ್ಗೆ ಎಲ್ಲೂ ಯಾಕೆ ಉಲ್ಲೇಖ, ಸ್ಮರಣೆ ಮಾಡುತ್ತಿಲ್ಲ?. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2 ಜಿ ಹಗರಣ ನಡೆದಿದ್ದು ಎಂದು ಭಾಷಣ ಮಾಡಿದ ಪ್ರಧಾನಿ ಅವರು, ಅವರದೇ ಸರ್ಕಾರ ಇತ್ತು ಯಾಕೆ ಅದು ಹಗರಣವೆಂದು ಪತ್ತೆ ಮಾಡಲಿಲ್ಲ. ನೀವು ರಾಫೆಲ್ ಹಗರಣದ ಕುರಿತು ಏಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು.

ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಹಿಂದುಳಿದ ವರ್ಗಗಳಿಗೆ ಒಂದು ಸೀಟ್ ನೀಡಿಲ್ಲ. ಸಬ್ ಕಾ ಸಾಥ್​ ಸಬ್​ ಕಾ ವಿಕಾಸ್ ಬರಿ ಭಾಷಣಕ್ಕೆ ಸೀಮಿತ. ಪತ್ರಕರ್ತರನ್ನು ಉದ್ದೇಶಿಸಿ ಮೋದಿ ಅವರು ಒಂದು ದಿನವೂ ಮಾತನಾಡಿಲ್ಲ. ಬರೀ ಸುಳ್ಳು ಭಾಷಣಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಮೋದಿ ಭಾಷಣದಲ್ಲಿ ಎಲ್ಲೂ ಕೂಡ ಅವರ ಸಾಧನೆ ಮತ್ತು ಅಭಿವೃದ್ದಿ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್​ನ್ನು ತೆಗಳುವುದೇ ಅವರ ಕೆಲಸವಾಗಿದೆ. ಕೇವಲ ಭಾಷಣವಲ್ಲದೆ ಮುಖ್ಯ ವಿಚಾರಗಳ ಬಗ್ಗೆ ಕೂಡ ಮಾತನಾಡಬೇಕು ಎಂದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ 428 ಸೈನಿಕರು ಅಸುನೀಗಿದ್ದಾರೆ. ದೇಶದಲ್ಲಿ ಅನೇಕ ದಾಳಿಗಳಾಗಿವೆ. ಬಿಜೆಪಿ ಅವಧಿಯಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಕಾಶ್ಮೀರದಲ್ಲಿ ದಿನನಿತ್ಯ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಮೋದಿ ಉತ್ತರ ಕೊಡಬೇಕು. ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ. ಎಲ್ಲ ಕಡೆ ಮೋದಿ ಸುಳ್ಳು ಭಾಷಣಗಳನ್ನು ಮಾಡ್ತಿದ್ದಾರೆ. ನನ್ನ ಪ್ರಶ್ನೆಗಳಿಗೆ ಮೋದಿ ಉತ್ತರ ಕೊಡಲು ಆಗುವುದಿಲ್ಲ. ಆದರೂ, ಜನರಿಗಾಗಿ ನಾನು ಮೋದಿ ಅವರಿಗೆ ಪ್ರಶ್ನೆ ಕೇಳುತ್ತಿದ್ದೇನೆ. ಮೋದಿ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ ಎಂದುಕೊಂಡಿದ್ದೇನೆ ಎಂದು ವಾಗ್ದಾಳಿ ನಡೆಸಿದರು. ಹಾಸನದಲ್ಲಿ ಒಬ್ಬ ಅರ್ಚಕರ ಮನೆ ಮೇಲೆ ದಾಳಿ ಮಾಡಿದ್ದಾರೆ. ನಿನ್ನೆ ನಮ್ಮ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮನೆ ಮೇಲೆ ದಾಳಿ ಮಾಡಿದ್ದಾರೆ. ಪುಟ್ಟರಂಗ ಶೆಟ್ಟಿ ಮೇಲೆ ದಾಳಿ ಮಾಡಿದ್ದಾರೆ. ಹೀಗೆ ಚುನಾವಣೆ ಸಂದರ್ಭದಲ್ಲಿ ಸರ್ಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಐಟಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಕೇಳಿ ಒಂದು ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಹಂಪಿ ಉತ್ಸವವನ್ನು ನಮ್ಮ ಸರ್ಕಾರ ಮಾಡಿದೆ. ಮೋದಿ ಅವರು ಕೇವಲ ಸುಳ್ಳು ಹೇಳುತ್ತಿದ್ದಾರೆ. ಅವರ ಭಾಷಣದಲ್ಲಿ ಹುರುಳಿಲ್ಲ. ಕೇಂದ್ರ ಸರ್ಕಾರ ಏನು ಮಾಡಿದೆ ಅನ್ನೋದನ್ನು ಹೇಳಲಿ. ಅದು ಬಿಟ್ಟು ಸುಳ್ಳು ಹೇಳೋದು ಬೇಡ. ರಾಜ್ಯದಲ್ಲಿನ ಐಟಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಕೇವಲ ಕಾಂಗ್ರೆಸ್, ಜೆಡಿಎಸ್ ಮುಖಂಡರನ್ನು ಟಾರ್ಗೆಟ್ ಮಾಡಿ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಐಟಿ ಇಲಾಖೆ ಎದುರಿಗೆ ಪ್ರತಿಭಟನೆ ಮಾಡಿದ್ದಕ್ಕಾಗಿ ಐಟಿ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೌದು ನೋಟಿಸ್ ನೀಡಿದೆ. ನಾವು ಕಾನೂನಾತ್ಮಕವಾಗಿ ಉತ್ತರ ಕೊಡುತ್ತೇವೆ . ವಿಪಕ್ಷಗಳನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ಮಾಡಿದ್ದು ತಪ್ಪು. ಅದಕ್ಕಾಗಿ ನಾವು ಪ್ರತಿಭಟನೆ ಮಾಡಿರುವುದು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದಕ್ಕೆ ಅವಕಾಶ ಇದೆ ಎಂದು ಹೇಳಿದರು. ಚುನಾವಣೆ ಸಂದರ್ಭದಲ್ಲಿ ಇವಿಎಂ ಯಂತ್ರ ದುರುಪಯೋಗ ಪಡಿಸಿಕೊಳ್ಳಬಹುದು. ಎಲೆಕ್ಟ್ರಿಕ್ ಯಂತ್ರ ದುರುಪಯೋಗವಾಗುವ ಸಾಧ್ಯತೆ ಜಾಸ್ತಿ ಆಗಿದೆ. ಆಂಧ್ರಪ್ರದೇಶದಲ್ಲಿ ಅದು ಸಾಬೀತಾಗಿದೆ. ಇವಿಎಂ ಬಳಿಸುತ್ತಿದ್ದ ರಾಷ್ಟ್ರಗಳು ಈಗ ಬ್ಯಾಲೆಟ್ ಪೇಪರ್ ಬಳಸುತ್ತಿವೆ. ಇದನ್ನು ನಾವು ಮೊದಲಿಂದಲೂ ಹೇಳಿಕೊಂಡು ಬಂದಿದ್ದೇವೆ ಎಂದರು.

Intro:ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದು, ದೇಶದಲ್ಲಿ ಅವರ ಸಾಧನೆ ಏನು ಇಲ್ಲವೆಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ ದಿನೇಶ್ದ ಗುಂಡೂರಾವ್ ಅವರು, ಮೋದಿ ಅವರಿಗೆ ಕೆಲವು ಪ್ರಶ್ನೆಗಳನ್ನು ಹಾಕಿದ್ದಾರೆ. Body:ಕೆಪಿಸಿಸಿ ಕಚೇರಿಯಲ್ಲಿ ಇಂದು ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಪ್ರಮುಖ ವಿಚಾರಗಳನ್ನು ನಾನು ಮೋದಿ ಅವರನ್ನು ಕೇಳುತ್ತೇನೆ. ಅವರು ಉತ್ತರ ಕೊಡಬೇಕು. ಮಂಡ್ಯ ಅಭ್ಯರ್ಥಿ ಬಗ್ಗೆ ಬೆಂಬಲ ಸೂಚಿಸಿ ಭಾಷಣ ಮಾಡಿದ್ದಾರೆ . ಅಂಬರೀಶ್ ಅವರ ಹೆಸರು ಬಳಸಿ ಅಲ್ಲಿಯ ಅಭ್ಯರ್ಥಿ ಬಗ್ಗೆ ಬೆಂಬಲ ಸೂಚಿಸಿದ್ದೀರ. ಇಲ್ಲಿ ತೇಜಸ್ವಿ ಅನಂತ್ ಕುಮಾರ್ ಅವರನ್ನು ಯಾಕೆ ಮರೆತಿದ್ದೀರಾ?. ಅನಂತ್ ಕುಮಾರ್ ಅವರು ನಿಮಗಿಂತಲೂ ದೊಡ್ಡ ನಾಯಕರಾಗಿದ್ದರು. ಅವರ ಬಗ್ಗೆ ಎಲ್ಲೂ ಯಾಕೆ ಉಲ್ಲೇಖ, ಸ್ಮರಣೆ ಮಾಡುತ್ತಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 2 ಜಿ ಹಗರಣ ನಡೆದಿದ್ದು ಎಂದು ಭಾಷಣ ಮಾಡಿದ ಪ್ರಧಾನಿ ಅವರು, ಅವರದೇ ಸರ್ಕಾರ ಇತ್ತು ಯಾಕೆ ಅದು ಹಗರಣವೆಂದು ಪತ್ತೆ ಮಾಡಲಿಲ್ಲ. ನೀವು ರಾಫೆಲ್ ಹಗರಣದ ಕುರಿತು ಅವರು ಏಕೆ ಮಾತನಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ಸಬ್ ಕಾ ಸಾತ್ ಸಪ್ಕಾ ವಿಕಾಸ್ ಎಂದು ಮೋದಿ ಅವರು ಹೇಳುತ್ತಿದ್ದಾರೆ. ಆದರೆ, ಅದು ಯಾವುದೂ ಆಗಿಲ್ಲ. ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಹಿಂದುಳಿದ ವರ್ಗಗಳಿಗೆ ಒಂದು ಸೀಟ್ ನೀಡಿಲ್ಲ. ಸಬ್ ಕಾ ಸಾತ್ ಸಪ್ಕಾ ವಿಕಾಸ್ ಬರಿ ಭಾಷಣಕ್ಕೆ ಸೀಮಿತ. ಪತ್ರಕರ್ತರನ್ನು ಉದ್ದೇಶಿಸಿ ಮೋದಿ ಅವರು ಒಂದು ದಿನವೂ ಮಾತನಾಡಿಲ್ಲ. ಬರೀ ಸುಳ್ಳು ಭಾಷಣಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಮೋದಿ ಭಾಷಣದಲ್ಲಿ ಎಲ್ಲೂ ಕೂಡ ಅವರ ಸಾಧನೆ ಮತ್ತು ಅಭಿವೃದ್ದಿ ಬಗ್ಗೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ನ್ನು ತೆಗೆಳುವುದೇ ಅವರ ಕೆಲಸವಾಗಿದೆ. ಕೇವಲ ಭಾಷಣವಲ್ಲದೆ ಮುಖ್ಯ ವಿಚಾರಗಳ ಬಗ್ಗೆ ಮಾತನಾಡಬೇಕು. ಮೊನ್ನೆ ಮಂಡ್ಯ ಪಕ್ಷೇತರ ಅಭ್ಯರ್ಥಿಯ ಬಗ್ಗೆ ಮೋದಿ ಮಾತನಾಡಿದ್ದಾರೆ. ಅಂಬರೀಷ್ ರನ್ನು ಹೊಗಳಿದ್ದಾರೆ. ಅದು ಹೋಗಲಿ, ಬಿಜೆಪಿ ಪಕ್ಷವನ್ನು ಕಟ್ಟಿದ ಅನಂತ್ ಕುಮಾರ್ ಅವರನ್ನು ಏಕೆ ಮರೆತರು. ತೇಜಸ್ವಿನಿ ಅನಂತ್ ಕುಮಾರ್ ಸಾಮಾಜಿಕ ಕೆಲಸ ಮಾಡ್ತಿದ್ದಾರೆ. ತೇಜಸ್ವಿನಿ ಅವರ ಬಗ್ಗೆ ಎಲ್ಲೂ ಯಾಕೆ ಉಲ್ಲೇಖ ಮಾಡ್ತಿಲ್ಲ. ಈ ಬಗ್ಗೆ ಮೋದಿ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ 428 ಸೈನಿಕರು ಅಸುನೀಗಿದ್ದಾರೆ. ದೇಶದಲ್ಲಿ ಅನೇಕ ದಾಳಿಗಳಾಗಿವೆ. ಬಿಜೆಪಿ ಅವಧಿಯಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಕಾಶ್ಮೀರದಲ್ಲಿ ದಿನನಿತ್ಯ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಮೋದಿ ಉತ್ತರ ಕೊಡಬೇಕು. ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ. ಎಲ್ಲ ಕಡೆ ಮೋದಿ ಸುಳ್ಳು ಭಾಷಣಗಳನ್ನು ಮಾಡ್ತಿದ್ದಾರೆ. ನನ್ನ ಪ್ರಶ್ನೆಗಳಿಗೆ ಮೋದಿ ಉತ್ತರ ಕೊಡಲು ಆಗುವುದಿಲ್ಲ. ಆದರೂ, ಜನರಿಗಾಗಿ ನಾನು ಮೋದಿ ಅವರಿಗೆ ಪ್ರಶ್ನೆ ಕೇಳುತ್ತಿದ್ದೇನೆ. ನಾಳೆ ಮೋದಿ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ ಎಂದುಕೊಂಡಿದ್ದೇನೆ ಎಂದು ವಾಗ್ದಾಳಿ ನಡೆಸಿದರು.
ಇವತ್ತು ಐಟಿ ಇಲಾಖೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಾಸನದಲ್ಲಿ ಒಬ್ಬ ಅರ್ಚಕರ ಮನೆ ಮೇಲೆ ದಾಳಿ ಮಾಡಿದ್ದಾರೆ. ನಿನ್ನೆ ನಮ್ಮ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮೇಲೆ ದಾಳಿ ಮಾಡಿದ್ದಾರೆ. ಪುಟ್ಟರಂಗ ಶೆಟ್ಟಿ ಮೇಲೆ ದಾಳಿ ಮಾಡಿದ್ದಾರೆ. ಹೀಗೆ ಚುನಾವಣೆ ಸಂದರ್ಭದಲ್ಲಿ ಸರ್ಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಐಟಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಕೇಳಿ ಒಂದು ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಬಿ.ಎಸ್. ಯಡಿಯೂರಪ್ಪ ಡೈರಿ ಬಿಡುಗಡೆ ಸಂಬಂಧ ಸೂಕ್ತ ರಕ್ಷಣೆ ಕೋರಿ ಈಶ್ವರಪ್ಪನವರ ಮಾಜಿ ಪಿಎ ವಿನಯ್ ಪೊಲೀಸರಿಗೆ ಮನವಿ ವಿಚಾರಕ್ಕೆ ಪ್ರತಿಕ್ರಿಯಿಸಿದ ದಿನೇಶ್ ಗುಂಡೂರಾವ್, ಬಿಎಸ್ ವೈ ಡೈರಿ ವಿನಯ್ ಬಳಿ ಇದೆ ಎಂದು ಯಡಿಯೂರಪ್ಪ ಪಿಎ ಸಂತೋಷ ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ವಿನಯ್ ಅವರಿಗೆ ನೊಟೀಸ್ ಕೊಟ್ಟಿದ್ದಾರೆ. ಈಗ ಯಡಿಯೂರಪ್ಪನವರ ಓರಿಜನಲ್ ಡೈರಿ ಪೊಲೀಸರಿಗೆ ಕೊಡುತ್ತಿದ್ದಾರೆ. ಇದು ಹೈ- ಪ್ರೊಫೈಲ್ ಪ್ರಕರಣ. ಹೀಗಾಗಿ ಪೊಲೀಸರು ಈಶ್ವರಪ್ಪ ಮಾಜಿ ಪಿಎ ವಿನಯ್ ಗೆ ಭದ್ರತೆ ಕೊಡಬೇಕು. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ಐಟಿ ಇಲಾಖೆ ನಿರ್ದೇಶಕರು ಡೈರಿ ಫೇಕ್ ಅಂದಿದ್ದರು. ವಿನಯ್ ಡೈರಿ ಬಿಡುಗಡೆ ಮಾಡಿದ ಮೇಲೆ ಸತ್ಯಾಂಶ ಗೊತ್ತಾಗಲಿದೆ. ಪೊಲೀಸರು ತಕ್ಷಣವೇ ವಿನಯ್ ಗೆ ಸೂಕ್ತ ಭದ್ರತೆ ಕೊಡಬೇಕೆಂದು ಆಗ್ರಹಿಸಿದರು.
ಹಂಪಿ ಉತ್ಸವವನ್ನು ನಮ್ಮ ಸರ್ಕಾರ ಮಾಡಿದೆ. ಮೋದಿ ಅವರು ಕೇವಲ ಸುಳ್ಳು ಹೇಳುತ್ತಿದ್ದಾರೆ. ಅವರ ಭಾಷಣದಲ್ಲಿ ಹುರುಳಿಲ್ಲ. ಕೇಂದ್ರ ಸರ್ಕಾರ ಏನು ಮಾಡಿದೆ ಅನ್ನೋದನ್ನು ಹೇಳಲಿ. ಅದು ಬಿಟ್ಟು ಸುಳ್ಳು ಹೇಳೋದು ಬೇಡ. ಹಂಪಿ ಉತ್ಸವ ಅಷ್ಟೇ ಅಲ್ಲ. ಸಾಕಷ್ಟು ಉತ್ಸವವನ್ನು ಹಿಂದಿನ ನಮ್ಮ ಸರ್ಕಾರ ಮಾಡಿದೆ. ಈ ಸರ್ಕಾರದಲ್ಲೂ ಹಂಪಿ ಉತ್ಸವ ಮಾಡಿದೆ ಎಂದು ಹೇಳಿದರು.
ರಾಜ್ಯದಲ್ಲಿನ ಐಟಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಕೇವಲ ಕಾಂಗ್ರೆಸ್, ಜೆಡಿಎಸ್ ಮುಖಂಡರನ್ನು ಟಾರ್ಗೆಟ್ ಮಾಡಿ ಐಟಿ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಐಟಿ ಇಲಾಖೆ ಎದುರಿಗೆ ಪ್ರತಿಭಟನೆ ಮಾಡಿದ್ದಕ್ಕಾಗಿ ಐಟಿ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೌದು ನೋಟಿಸ್ ನೀಡಿದೆ ನಾವು ಕಾನೂನಾತ್ಮಕವಾಗಿ ಉತ್ತರ ಕೊಡುತ್ತೇವೆ . ವಿಪಕ್ಷಗಳನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ಮಾಡಿದ್ದು ತಪ್ಪು. ಅದಕ್ಕಾಗಿ ನಾವು ಪ್ರತಿಭಟನೆ ಮಾಡಿರುವುದು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದಕ್ಕೆ ಅವಕಾಶ ಇದೆ ಎಂದು ಹೇಳಿದರು.
ಚುನಾವಣೆ ಸಂದರ್ಭದಲ್ಲಿ ಇವಿಎಂ ಯಂತ್ರ ದುರುಪಯೋಗ ಪಡಿಸಿಕೊಳ್ಳಬಹುದು. ಎಲೆಕ್ಟ್ರಿಕ್ ಯಂತ್ರ ದುರುಪಯೋಗವಾಗುವ ಸಾಧ್ಯತೆ ಜಾಸ್ತಿ ಆಗಿದೆ. ನಿನ್ನೆ ಆಂದ್ರಪ್ರದೇಶದಲ್ಲಿ ಅದು ಸಾಬೀತಾಗಿದೆ. ಇವಿಎಂ ಬಳಿಸುತ್ತಿದ್ದ ರಾಷ್ಟ್ರಗಳು ಈಗ ಬ್ಯಾಲೆಟ್ ಪೇಪರ್ ಬಳಸುತ್ತಿವೆ. ಇದನ್ನು ನಾವು ಮೊದಲಿಂದಲೂ ಹೇಳಿಕೊಂಡು ಬಂದಿದ್ದೇವೆ ಎಂದರು.
Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.