ಬೆಂಗಳೂರು: ನಮ್ಮ ನಾಯಕರ ಜೊತೆ ಮಾತುಕತೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ನಮ್ಮ ನಾಯಕರು ಸಹ ಬಂದಿದ್ದಾರೆ. ಸಭೆಯಲ್ಲಿ ಅನೇಕ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ. ಸಂಜೆ ಜೆಡಿಎಸ್ ಸಭೆ ಕೂಡ ನಡೆಯಲಿದೆ. ನಮ್ಮ ನಾಯಕರೆಲ್ಲರೂ ಬಂದಿದ್ದಾರೆ. ಅವರ ಜೊತೆ ಮಾತುಕತೆ ನಡೆಸಿ ಮುಂದಿನ ಬೆಳವಣಿಗೆ ಬಗ್ಗೆ ತಿಳಿಸುತ್ತೇವೆ ಎಂದು ಸಚಿವ ಡಿಕೆಶಿ ಸ್ಪಷ್ಟಪಡಿಸಿದರು.