ETV Bharat / state

ಬೆಂಗಳೂರು‌ ದಕ್ಷಿಣ ಕ್ಷೇತ್ರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ

ಇಂದು ಬೆಳಗ್ಗೆ ಚುರುಕಿನಿಂದ ಆರಂಭಗೊಂಡಿದ್ದ ಬಸವನಗುಡಿ ಹಾಗು ಪದ್ಮನಾಭನಗರ ಕ್ಷೇತ್ರದ ಮತದಾನ ಪ್ರಕ್ರಿಯೆ ಬೆಳಗ್ಗೆ 11 ಗಂಟೆ ನಂತರ ಮಂದಗತಿಯಲ್ಲಿ ಸಾಗಿತು. ಸಂಜೆ ವೇಳೆ ಕೂಡ ಚುರುಕಿನ ಮತದಾನ ಆಗಲಿದೆ ಎನ್ನುವ ನಿರೀಕ್ಷೆ ಹುಸಿಯಾಯಿತು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಳೆದ ಬಾರಿಯ ರೀತಿಯಲ್ಲಿಯೇ ಮಂದಗತಿಯಲ್ಲಿ ಮುಕ್ತಾಯವಾಯಿತು.

ಬೆಂಗಳೂರು‌ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ
author img

By

Published : Apr 18, 2019, 9:18 PM IST

ಬೆಂಗಳೂರು: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಬೆಂಗಳೂರು‌ ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ‌ ಬಸವನಗುಡಿ, ಪದ್ಮನಾಭನಗರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗ್ಗೆ ಚುರುಕಿನಿಂದ ಆರಂಭವಾಗಿದ್ದ ಬಸವನಗುಡಿ ಹಾಗೂ ಪದ್ಮನಾಭನಗರ ಕ್ಷೇತ್ರದ ಮತದಾನ ಪ್ರಕ್ರಿಯೆ ಬೆಳಗ್ಗೆ 11 ಗಂಟೆ ನಂತರ ಮಂದಗತಿಯಲ್ಲಿ ಸಾಗಿತು. ಸಂಜೆ ವೇಳೆ ಕೂಡ ಚುರುಕಿನ ಮತದಾನ ಆಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಕಳೆದ ಬಾರಿಯ ರೀತಿಯಲ್ಲಿಯೇ ಈ ಬಾರಿಯೂ ಮತದಾನ ಮಂದಗತಿಯಲ್ಲಿ ಮುಕ್ತಾಯವಾಯಿತು.

ಬೆಂಗಳೂರು‌ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ

ಈ ಎರಡೂ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಯಿತು. ಮತದಾರರು ಯಾರೂ ಮತಗಟ್ಟೆ ಆವರಣದಲ್ಲಿ ಇಲ್ಲದೆ ಖಾಲಿ ಖಾಲಿ ಹೊಡೆದ ಕಾರಣ 6 ಗಂಟೆಗೆ ಸರಿಯಾಗಿ ಚುನಾವಣಾ ಸಿಬ್ಬಂದಿ ಮತಗಟ್ಟೆಗಳನ್ನು ಮುಚ್ಚಿದರು.

ಮತದಾನ ಮುಗಿದ ನಂತರ ಎಲ್ಲಾ ಮತ ಯಂತ್ರಗಳಿಗೆ ಸೀಲ್ ಹಾಕಿ, ಪೆಟ್ಟಿಗೆಯಲ್ಲಿರಿಸಿ ಬಿಗಿ ಭದ್ರತೆ ಮೂಲಕ ಸ್ಟ್ರಾಂಗ್ ರೂಂಗೆ ಮಷಿನ್​ಗಳನ್ನು ರವಾನಿಸಿದರು. ಮೇ 23 ರಂದು ಮತ ಎಣಿಕೆ ದಿನ ಇವಿಎಂ ಮಷಿನ್​ಗಳನ್ನ ಆಯಾ ಪಕ್ಷಗಳ ಏಜೆಂಟರ್ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಅಲ್ಲಿಯವರೆಗೂ ಪೊಲೀಸ್ ಹಾಗೂ ಮಿಲಿಟರಿ ಸರ್ಪಗಾವಲಿನಲ್ಲಿ ಮಧ್ಯೆ ಭದ್ರತೆ ಕಲ್ಪಿಸಲಾಗುತ್ತದೆ.

Intro:ಮತದಾನಕ್ಕೆ ನೀರಸ ಪ್ರತಿಕ್ರಿಯೆ: ಮತಯಂತ್ರಕ್ಕೆ ಸೀಲ್ ಹಾಕುತ್ತಿರುವ ಸಿಬ್ಬಂದಿ!

ಬೆಂಗಳೂರು: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿದ್ದು ಬೆಂಗಳೂರು‌ ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ‌ ಬಸವನಗುಡಿ,ಪದ್ಮನಾಭನಗರದಲ್ಲಿ ಮತದಾನಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಹುತೇಕ ಮತಗಟ್ಟೆಗಳ ಮತಯಂತ್ರಕ್ಕೆ ಸೀಲ್ ಹಾಕುವ ಪ್ರಕ್ರಿಯೆ ಮುಕ್ತಾಯವಾಯಿತು.

ಹೌದು, ಮುಂಜಾನೆ ಚುರುಕಿನಿಂದ ಆರಂಭಗೊಂಡ ಬಸವನಗುಡಿ ಹಾಗು ಪದ್ಮನಾಭನಗರ ಕ್ಷೇತ್ರದ ಮತದಾನ ಬೆಳಗ್ಗೆ 11 ಗಂಟೆ ನಂತರ ಮಂದಗತಿಯಲ್ಲಿ ಸಾಗಿತು.ಸಂಜೆ ವೇಳೆ ಕೂಡ ಚುರುಕಿನ ಮತದಾನ ಆಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದ್ದು ಕಳೆದ ಬಾರಿಯ ರೀತಿಯಲ್ಲಿಯೂ ಮಂದಗತಿಯಲ್ಲಿ ಮುಕ್ತಾಯವಾಯಿತು.

ಈ ಎರಡೂ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಿದ್ದು ಮತದಾರರು ಯಾರೂ ಮತಗಟ್ಟೆ ಆವರಣದಲ್ಲಿ ಇಲ್ಲದೆ ಮತಗಟ್ಟೆಗಳು ಖಾಲಿ ಖಾಲಿ ಹೊಡೆ್ ಕಾರಣ 6 ಗಂಟೆಗೆ ಸರಿಯಾಗಿ ಚುನಾವಣಾ ಸಿಬ್ಬಂದಿ ಮತಗಟ್ಟೆಗಳನ್ನು ಮುಚ್ಚಿದರು.

ಮತದಾನ ಮುಗಿದ ಎಲ್ಲಾ ಮತ ಯಂತ್ರಗಳನ್ನ ಸೀಲ್ ಹಾಕಿ ಪೆಟ್ಟಿಗೆಯಲ್ಲಿ ಇರಿಸಿ ಭದ್ರ ಮಾಡುತ್ತಿರುವ ಚುನಾವಣಾ ಸಿಬ್ಬಂದಿ ಪೊಲೀಸ್ ಬಿಗಿ ಭದ್ರತೆ ಮೂಲಕ ಸ್ಟ್ರಾಂಗ್ ರೂಮ್ಗೆ ಇವಿಎಂ ಮೆಷಿನ್ಗಳನ್ನು ರವಾನೆ ಮಾಡುತ್ತಿದ್ದಾರೆ.ಮೇ 23 ರಂದು ಮತ ಏಣಿಕೆ ದಿನ ಇವಿಎಮ್ ಮೇಷನ್ ಗಳನ್ನ ಅಧಿಕಾರಿಗಳು ಪಕ್ಷಗಳ ಏಜೆಂಟರ್ ಸಮ್ಮುಖದಲ್ಲಿ ತೆರೆಲಾಗುತ್ತದೆ.ಅಲ್ಲಿಯವರೆಗೂ ಪೊಲೀಸ್ ಹಾಗೂ ಮಿಲಿಟರಿ ಸರ್ಪಗಾವಲಿನಲ್ಲಿ ಇವಿಎಂ ಮೆಷಿನ್ ಗಳಿಗೆ ಭದ್ರತೆ ಕಲ್ಪಿಸಲಾಗುತ್ತದೆ.

Body:....Conclusion:

For All Latest Updates

TAGGED:

Voting
ETV Bharat Logo

Copyright © 2024 Ushodaya Enterprises Pvt. Ltd., All Rights Reserved.