ETV Bharat / state

ಐಎಂಎ ಬಹುಕೋಟಿ ವಂಚನೆ ಪ್ರಕರಣ: ಓರ್ವ‌ ಮೌಲ್ವಿ ಎಸ್ಐಟಿ ವಶಕ್ಕೆ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಯಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ನಾಲ್ವರು ಮೌಲ್ವಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಐಎಂಎ
author img

By

Published : Jul 2, 2019, 6:32 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಯಲ್ಲಿ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ಈ ಪ್ರಕರಣದಲ್ಲಿ ನಾಲ್ವರು ಮೌಲ್ವಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಈ ಹಗರಣದಲ್ಲಿ ಮನ್ಸೂರ್​ ಜೊತೆ ನಾಲ್ವರು ಮೌಲ್ವಿಗಳಿದ್ದು, ಇದರಲ್ಲಿ ಒಬ್ಬ ಮಸೀದಿಗೆ ನಮಾಜ್​ಗೆ ಬರುತ್ತಿದ್ದ ಜನರಿಗೆ ಮೈಂಡ್ ವಾಶ್ ಮಾಡಿ ಧರ್ಮದ ಹೆಸರಿನಲ್ಲಿ ಐಎಂಎಗೆ ಹಣ ಹೂಡಿಕೆ ಮಾಡುವಂತೆ ಸಲಹೆ ನೀಡುತ್ತಿದ್ದ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗಿದೆ.

ಮನ್ಸೂರ್ ಮೌಲ್ವಿಗಳನ್ನು ಬಳಸಿಕೊಂಡು ಬಡವರಿಂದ ಐಎಂಎಗೆ ಹಣ ಹೂಡಿಕೆ ಮಾಡಿಸಿದ್ದಾನೆ.​​ ಇದಕ್ಕಾಗಿ ಮೌಲ್ವಿಗಳಿಗೆ ಲಕ್ಷಾಂತರ ರೂಪಾಯಿ ಹಣ ಸುರಿದಿದ್ದಾನೆ. ಅಷ್ಟೇ ಅಲ್ಲದೇ ಮೌಲ್ವಿಗಳಿಗೆ ಶಿವಾಜಿನಗರ ಸೇರಿದಂತೆ ವಿವಿಧೆಡೆ ಮನೆ ಕೂಡ ಕಟ್ಟಿಸಿ ಕೊಟ್ಟಿದ್ದಾನೆ ಎಂದು ಎಸ್​ಐಟಿ ಮೂಲಗಳು ತಿಳಿಸಿವೆ.

ಮೌಲ್ವಿಯ ಮೊಬೈಲ್​ ಕಾಲ್​ ವಿವರ, ಆತ ನಡೆಸಿದ ವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಲ್ಲದೆ, ಅಗತ್ಯವಿದ್ದರೆ ಮೌಲ್ವಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಎಸ್ಐಟಿಯ ಉನ್ನತ ಮೂಲಗಳು ತಿಳಿಸಿವೆ.

Intro:ಐಎಂಎ ಬಹುಕೋಟಿ ವಂಚನೆ ಪ್ರಕರಣ
ಓರ್ವ‌ ಮೌಲ್ವಿ ಎಸ್ಐಟಿ ವಶಕ್ಕೆ

ಬೆಂಗಳೂರು
Bhavya

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆಯಲ್ಲಿ ಮತ್ತೊಂದು ರೋಚಕ ವಿಚಾರ ಬೆಳಕಿಗೆ ಬಂದಿದೆ.ಐಎಂಎ ಹಗರಣದಲ್ಲಿ ಮನ್ಸೂರು ಜೊತೆ ನಾಲ್ಕು ಮೌಲ್ವಿಗಳು ಇದ್ದು ಈ ಮೌಲ್ವಿಗಳು ಮಸೀದಿಗೆ ನಮಾಜ್ಗೆ ಬಂದ ಅಮಾಯಕ. ಜನರ ಮೈಂಡ್ ವಾಶ್ ಮಾಡಿ ಧರ್ಮದ ಹೆಸರಿನಲ್ಲಿ ಐಎಂಎಗೆ ಹಣ ಹೂಡಿಕೆ ಮಾಡುವಂತೆ ಸಲಹೆ ನೀಡ್ತಿದ್ದ ವಿಚಾರ ತನಿಖೆಯಲ್ಲಿ ಬಯಾಲಾಗಿದೆ.

ಹಾಗೆ ಮನ್ಸೂರ್ ಮೌಲ್ವಿಗಳನ್ನ ಬಳಸಿಕೊಂಡು ಬಡವರಿಂದ ಐಎಂಎಗೆ ಹಣ ಹೂಡಿಕೆ ಮಾಡಿಸಿದ್ದಾನೆ. ಹೀಗಾಗಿ ಮನ್ಸೂರು ಮೌಲ್ವಿಗಳಿಗೆ ಸಹಾಯದ ರೀತಿ ಮಸೀದಿಗೆ ಲಕ್ಷಾಂತರ ರೂಪಾಯಿ ಹಣ ಸುರಿದಿದ್ದಾನೆ. ಅಷ್ಟಲ್ಲದೇ ಮೌಲ್ವಿಗಳಿಗೆ ಶಿವಾಜಿನಗರ ಸೇರಿದಂತೆ ವಿವಿಧ ಕಡೆ ಅಮಯಾಕರ ಹಣದಲ್ಲಿ ಆರೋಪಿ ಮನ್ಸೂರ್ ಮನೆ ಕೂಡ ಕಟ್ಟಿ ಕೊಟ್ಡಿದ್ದಾನೆ.

ಎಸ್ ಐಟಿಯಿಂದ ಮೌಲ್ವಿ ತನಿಕೆ ಚುರುಕು

ಎಸ್ಐಟಿ ತನಿಕೆಯಲ್ಲಿ ಮೌಲ್ವಿಗಳು ಭಾಗಿಯಾದ ವಿಚಾರ ಬಯಾಲಾದ ಹಿನ್ನೆಲೆ ಒಟ್ಟು ನಾಲ್ಕು ಜನ ಮೌಲ್ವಿಗಳ ವಿಚಾರಣೆ ನಡೆಸಲು ನಿರ್ಧಾರ ಮಾಡಿ ಸದ್ಯ ಓರ್ವ ‌ಮಾಲೂರು ಮೂಲದ ಮೌಲ್ವಿಯನ್ನ ವಶಕ್ಕೆ ಪಡೆದು ವಿಚಾರಣೆನಡೆಸುತ್ತಿದ್ದಾರೆ.ಪ್ರಾಥಮಿಕವಾಗಿ‌ ಮೌಲ್ವಿಯ ಮೊಬೈಲ್ ಕಾಲ್ ಡಿಟೇಲ್ ಮತ್ತು ವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕಿ
ಅವಶ್ಯಕತೆ ಬಿದ್ದರೆ ಮೌಲ್ವಿಯ ಬಂಧಿಸುವ ಸಾಧ್ಯತೆ ಎಂದು
ಎಸ್ಐಟಿಯ ಉನ್ನತ ಮೂಲಗಳು ತಿಳಿಸಿವೆ.Body:KN_BNG_07_2_IMA_7204498Conclusion:KN_BNG_07_2_IMA_7204498

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.