ETV Bharat / state

ಎಂ.ಬಿ.ಪಾಟೀಲ್​​ ಒಬ್ಬ ಶತಮೂರ್ಖ ಗೃಹ ಸಚಿವ: ಶೋಭಾ ಕರಂದ್ಲಾಜೆ ಕಿಡಿ - undefined

ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಬಿಜೆಪಿ ಅಹೋರಾತ್ರಿ ಧರಣಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಪಾಲ್ಗೊಂಡು ಜಿಂದಾಲ್​ಗೆ ಭೂಮಿ ಮಾರಾಟ ಮಾಡುತ್ತಿರುವ ವಿಚಾರವಾಗಿ ಗೃಹ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಶೋಭಾ ಕರಂದ್ಲಾಜೆ
author img

By

Published : Jun 15, 2019, 8:38 PM IST

ಬೆಂಗಳೂರು: ಎಂ.ಬಿ.ಪಾಟೀಲ್ ಒಬ್ಬ ಶತಮೂರ್ಖ ಗೃಹ ಸಚಿವ. ಇಂತಹ ಗೃಹ ಸಚಿವರು ಈ ರಾಜ್ಯದಲ್ಲಿರೋದು ದುರದೃಷ್ಟಕರ ಎಂದು ಸಂಸದೆ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಎಂ.ಬಿ.ಪಾಟೀಲ್ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಬಿಜೆಪಿ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡ ಅವರು, ಐಎಂಎ ಜ್ಯುವೆಲ್ಲರ್ಸ್​ನಿಂದ ವಂಚ‌ನೆಗೊಳಗಾದ ಮಹಿಳೆಯರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಹಣ ಹೂಡಿಕೆ ಮಾಡಿದ್ದ ಮಹಿಳೆಯರು ಕಂಪನಿ ನೀಡಿರುವ ದಾಖಲೆಗಳನ್ನು ನೀಡಿ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ಐಎಂಎ ಹಗರದಲ್ಲಿ ಸಚಿವ ಜಮೀರ್ ಖಾನ್ ಪಾಲುದಾರ. ಹೀಗಾಗಿ ಸಿಎಂ ಕುಮಾರಸ್ವಾಮಿ ಸಂಪುಟದಿಂದ ಜಮೀರ್ ಖಾನ್​ರನ್ನ ಕೈ ಬಿಡಬೇಕು. ರೋಷನ್ ಬೇಗ್ ಅವರ ಮೇಲೂ ಆರೋಪವಿದೆ. ನಾನು ದೆಹಲಿಗೆ ಹೋದ ಬಳಿಕ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಮನವಿ ಮಾಡುತ್ತೇನೆ ಎಂದರು.

ಜಿಂದಾಲ್​ಗೆ ಭೂಮಿ ಮಾರಾಟ ಮಾಡುವ ತೀರ್ಮಾನ ಯಡಿಯೂರಪ್ಪ ಅವಧಿಯಲ್ಲಾಗಿತ್ತು ಎಂಬ ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿಕೆಗೆ ಕಿಡಿಕಾರಿದ ಸಂಸದೆ ಶೋಭಾ ಕರಂದ್ಲಾಜೆ, ಅವರೊಬ್ಬ ಶತಮೂರ್ಖ ಗೃಹ ಸಚಿವ. ಇಂತಹ ಶತಮೂರ್ಖ ಗೃಹ ಸಚಿವ ಈ ರಾಜ್ಯದಲ್ಲಿರೋದು ದುರದೃಷ್ಟಕರ. ಕೈಗಾರಿಕೆಗಳಿಗೆ ಭೂಮಿ ಕೊಡುವಾಗ ಲೀಸ್ ಕಂ ಸೇಲ್ ಒಪ್ಪಂದ ಮಾಡ್ಕೋತಾರೆ. ಇಂತಹ ಕನಿಷ್ಠ ವಿಚಾರವೂ ಗೊತ್ತಿಲ್ಲದ ಎಂ.ಬಿ.ಪಾಟೀಲ್ ಒಬ್ಬ ಮೂರ್ಖ ಮಂತ್ರಿ ಎಂದು ವಾಗ್ದಾಳಿ ನಡೆಸಿದರು.

ಅಂದು ಭೂಮಿ ಕೊಡುವಾಗ ಸಿಎಂ ಆಗಿದ್ದ ಕುಮಾರಸ್ವಾಮಿ ಅವರೇ ಈಗ ನಿಮ್ಮ ಜೊತೆ ಇದ್ದಾರೆ. ಜಿಂದಾಲ್​ಗೆ ಯಾಕೆ ಭೂಮಿ ಕೊಟ್ರಿ ಅಂತ ಅವರನ್ನೇ ಕೇಳಿ. ಜಿಂದಾಲ್ ಒಪ್ಪಂದದ ಫೈಲ್ ವಿಧಾನಸೌಧದಲ್ಲಿ ಇದೆ. ಅದನ್ನ ಯಡಿಯೂರಪ್ಪ ಮನೆಗೆ ತಂದಿಟ್ಕೊಂಡಿಲ್ಲ. ಆ ಫೈಲ್ ತೆರೆದು ಒಮ್ಮೆ ಓದಿ ಎಂದು ಟಾಂಗ್ ನೀಡಿದರು.

ಇನ್ನು ಪ್ರತ್ಯೇಕ ಲಿಂಗಾಯತ ಧರ್ಮ‌ ಮಾಡಲು ಹೋಗಿ ಕೈ ಸುಟ್ಕೊಂಡ್ರಿ. ಈಗ ಮತ್ತೊಮ್ಮೆ ಅಂತಹ ಪರಿಸ್ಥಿತಿ ತಂದ್ಕೋ ಬೇಡಿ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್​ಗೆ ಶೋಭಾ ತಿರುಗೇಟು ನೀಡಿದ್ರು.

Intro:ಬೆಂಗಳೂರು:ಎಂ.ಬಿ ಪಾಟೀಲ್ ಒಬ್ಬ ಶತಮೂರ್ಖ ಗೃಹ ಸಚಿವ ಇಂಥ ಶತಮೂರ್ಖ ಗೃಹ ಸಚಿವ ಈ ರಾಜ್ಯದಲ್ಲಿರೋದು ದುರಾದೃಷ್ಟಕರ ಎಂದು ಸಂಸದೆ ಶೋಭಾ ಕರಂದ್ಲಾಜೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.Body:

ಮೌರ್ಯ ವೃತ್ತದಲ್ಲಿ ನಡೆಯುತ್ತಿರುವ ಬಿಜೆಪಿ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡ ಶೋಭಾ ಕರಂದ್ಲಾಜೆ ಐಎಂಎ ಜ್ಯುವೆಲ್ಲರ್ಸ್ ನಿಂದ ವಂಚ‌ನೆಗೊಳಗಾದ ಮಹಿಳೆಯರೊಂದಿಗೆ ಮಾತುಕತೆ ನಡೆಸಿದರು.ಈ ವೇಳೆ ಹಣ ಹೂಡಿಕೆ ಮಾಡಿದ್ದ ಸಂಬಂದ ಕಂಪನಿ ನೀಡಿರುವ ದಾಖಲೆಗಳನ್ನು ನೀಡಿದ ಸಂತ್ರಸ್ತರು ನ್ಯಾಯಕೊಡಿಸುವಂತೆ ಮನವಿ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ,ಐಎಂಎ ಹಗರದಲ್ಲಿ ಸಚಿವ ಜಮೀರ್ ಖಾನ್ ಪಾಲುದಾರ ಹೀಗಾಗಿ ಸಿಎಂ ಕುಮಾರಸ್ವಾಮಿ ಸಂಪುಟದಿಂದ ಜಮೀರ್ ಖಾನ್ ರನ್ನ ಕೈ ಬಿಡಬೇಕು ರೋಷನ್ ಬೇಗ್ ಅವರ ಮೇಲೂ ಆರೋಪ ಇದೆ ಇವರೆಲ್ಲ ಪಾಲುದಾರರು, ಮತ ಹಾಕಿಸಿಕೊಂಡವರು.ಮತ ಹಾಕಿಸಿಕೊಂಡವರು ಅನ್ಯಾಯವಾದಾಗ ನಮ್ಮ ಜೊತೆ ನಿಲ್ಲಬೇಕು ತಿಂದಿರೋ ಬಿರಿಯಾನಿ ಕಕ್ಕಿಸಬೇಕು ಆದರೆ ಬೆಂಗಳೂರಿಗೆ ಬರುವ ಫ್ರಾಡ್ ಗಳಿಗೆ ಆಶ್ರಯ ನೀಡಿ ಬಿರಿಯಾನಿಯನ್ನೂ ತಿನ್ನಿಸುತ್ತಾರೆ
ನಾನು ದೆಹಲಿಗೆ ಹೋದ ಬಳಿಕ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಮನವಿ ಮಾಡುತ್ತೇನೆ ಎಂದರು.

ಜಿಂದಾಲ್ ಗೆ ಭೂಮಿ ಮಾರಾಟ ಮಾಡುವ ತೀರ್ಮಾನ ಯಡಿಯೂರಪ್ಪ ಅವಧಿಯಲ್ಲಾಗಿತ್ತು ಎಂಬ ಗೃಹ ಸಚಿವ ಎಂ ಬಿ ಪಾಟೀಲ್ ಹೇಳಿಕೆಗೆ ಕಿಡಿಕಾರಿದ ಸಂಸದೆ ಶೋಭಾ ಕರಂದ್ಲಾಜೆ ಅವರೊಬ್ಬ ಒಬ್ಬ ಶತಮೂರ್ಖ ಗೃಹ ಸಚಿವ ಇಂಥ ಶತಮೂರ್ಖ ಗೃಹ ಸಚಿವ ಈ ರಾಜ್ಯದಲ್ಲಿರೋದು ದುರಾದೃಷ್ಟಕರ ಕೈಗಾರಿಕೆಗಳಿಗೆ ಭೂಮಿ ಕೊಡುವಾಗ ಲೀಸ್ ಕಂ ಸೇಲ್ ಒಪ್ಪಂದ ಮಾಡ್ಕೋತಾರೆ ಇಂಥ ಕನಿಷ್ಟ ವಿಚಾರವೂ ಗೊತ್ತಿಲ್ಲದ ಎಂ ಬಿ ಪಾಟೀಲ್ ಒಬ್ಬ ಮೂರ್ಖ ಮಂತ್ರಿ ಎಂದು ವಾಗ್ದಾಳಿ ನಡೆಸಿದರು.

ಅಂದು ಭೂಮಿ ಕೊಡಿವಾಗ ಸಿಎಂ ಆಗಿದ್ದ ಕುಮಾರಸ್ವಾಮಿ ಅವರೇ ಈಗ ನಿಮ್ ಜೊತೆ ಇದಾರೆ ಜಿಂದಾಲ್ ಗೆ ಭೂಮಿ ಕೊಟ್ರಿ ಅಂತ ಅವರನ್ನೇ ಕೇಳಿ,ಜಿಂದಾಲ್ ಒಪ್ಪಂದದ ಫೈಲ್ ವಿಧಾನಸೌಧದಲ್ಲಿ ಇದೆ ಅದನ್ನೇನು ಯಡಿಯೂರಪ್ಪ ಮನೆಗೆ ತಂದಿಟ್ಕೊಂಡಿಲ್ಲ ಆ ಫೈಲ್ ತೆರೆದು ಒಮ್ಮೆ ಓದಿ ಎಂದು ಟಾಂಗ್ ನೀಡಿದರು.

ಪ್ರತ್ಯೇಕ ಲಿಂಗಾಯತ ಧರ್ಮ‌ ಮಾಡಲು ಹೋಗಿ ಕೈ ಸುಟ್ಕೊಂಡ್ರಿ ಈಗ ಮತ್ತೊಮ್ಮೆ ಅಂಥ ಪರಿಸ್ಥಿತಿ ತಂದ್ಕೋಬೇಡಿ ಎಂದು ಗೃಹ ಸಚಿವ ಎಂ ಬಿ ಪಾಟೀಲ್ ಗೆ ಶೋಭಾ ತಿರುಗೇಟು ನೀಡಿದ್ರು.
Conclusion:ಪ್ರಶಾಂತ್ ಕುಮಾರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.