ಬೆಂಗಳೂರು: ನಗರದ ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಬುಧವಾರಸಂಜೆ ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದರು.
![rizwan](https://etvbharatimages.akamaized.net/etvbharat/images/2896931_794_08d4bcf0-8085-4fe7-9b39-4cd962e74666.png)
ಸಂಜೆ 7.30ಕ್ಕೆ ಬೆಂಗಳೂರಿನಲ್ಲಿರುವ ವಿಜಯನಗರದ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಕ್ಕೆ ರಿಜ್ವಾನ್ ಭೇಟಿ ನೀಡಿ,ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.
![rizwan](https://etvbharatimages.akamaized.net/etvbharat/images/kn_bng_07_03_rijwan_visit_bgs_photo4_9020923_mahesh_0304digital_01705_175.jpeg)
ಒಂದು ಗಂಟೆ ಕಾಲ ಶ್ರೀಗಳ ಜೊತೆ ಸಮಾಲೋಚನೆ ನಡೆಸಿದ ರಿಜ್ವಾನ್ ತಮ್ಮ ಕೇಂದ್ರ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚಿದ್ದು, ಗೆಲುವಿಗೆ ತಮ್ಮ ಆಶೀರ್ವಾದ ಬೇಕು ಎಂದು ಮನವಿ ಮಾಡಿದ್ದಾರೆ.
ಮಂಗಳವಾರವಷ್ಟೇಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣ ಬೈರೇಗೌಡ ಕೂಡ ಆದಿಚುಂಚನಗಿರಿ ಮಠಕ್ಕೆ ಭೇಟಿಕೊಟ್ಟಿದ್ದರು.