ಬೆಂಗಳೂರು : ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ವಿರುದ್ಧ ಎನ್ಬಿಡಬ್ಲೂ ಜಾರಿ ಮಾಡಿ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.
ಚೆಕ್ ಬೌನ್ಸ್ ಆರೋಪ ಪ್ರಕರಣದಲ್ಲಿ ಚಿಂಚನಸೂರ್ ವಿರುದ್ಧ ಅಂಜನಾ ಶಾಂತವೀರ್ ಚಿಂಚನಸೂರ್ ದೂರು ದಾಖಲಿಸಿದ್ದರು. ಈ ವಿಚಾರ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಅನೇಕ ಬಾರಿ ನೋಟಿಸ್ ನೀಡಿದ್ರೂ ಚಿಂಚನಸೂರ್ ವಿಚಾರಣೆಗೆ ಗೈರಾಗಿದ್ದರು.
ಈ ಹಿನ್ನೆಲೆ ನ್ಯಾಯಾಧೀಶ ರಾಮಚಂದ್ರ ಡಿ. ಹುದ್ದಾರ, ಚಿಂಚನಸೂರ್ ಅವರನ್ನು ಬಂಧಿಸಿ ಮೇ 2ನೇ ತಾರೀಖು ಕೋರ್ಟ್ಗೆ ಹಾಜರು ಪಡಿಸುವಂತೆ ಪೊಲೀಸರಿಗೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.