ETV Bharat / state

ಟಿಕೆಟ್​​ಗಾಗಿ ಪೈಪೋಟಿ: ಸಿದ್ದರಾಮಯ್ಯ ಜೊತೆ ಸತೀಶ್‍ ಜಾರಕಿಹೊಳಿ ಚರ್ಚೆ

author img

By

Published : Mar 22, 2019, 10:13 AM IST

ಬೆಳಗಾಗಾವಿ ಲೋಕಸಭಾ ಅಖಾಡಕ್ಕಿಳಿಯಲು ಭಾರಿ ಪೈಪೋಟಿ. ಕೈ ಟಿಕೆಟ್​ಗಾಗಿ ನಾಯಕರ ಕಸರತ್ತು. ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚರ್ಚಿಸಿದ ಸತೀಶ್ ಜಾರಕಿಹೊಳಿ.

ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಚಿವ ಸತೀಶ್ ಜಾರಕಿಹೋಳಿ ಭೇಟಿ ಮಾಡಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಸುದೀರ್ಘ ಚರ್ಚೆ ನಡೆಸಿದರು.

ಕುಂದಾನಗರಿಟಿಕೆಟ್​ಗಾಗಿ ಚನ್ನರಾಜ್ ಹೆಬ್ಬಾಳ್ಕರ್ ಹಾಗೂ ಅಶೋಕ ಪಟ್ಟಣ್ ನಡುವೆ ಭಾರಿ ಪೈಪೋಟಿ ನಡೆದಿದೆ. ತನಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಬಳಿ ಅಶೋಕ್ ಪಟ್ಟಣ್ ಮನವಿ ಮಾಡಿದ್ದಾರೆ. ಇಂದುಸತೀಶ್ ಜಾರಕಿಹೊಳಿ ಕೂಡ ಅಶೋಕ್ ಪಟ್ಟಣ್ ಅವರನ್ನೇ ಬೆಂಬಲಿಸಿ ಮಾತನಾಡಿದ್ದಾರೆ ಎನ್ನಲಾಗಿದೆ. ಇಂದು ದಿಲ್ಲಿಗೆ ತೆರಳಿ ವರಿಷ್ಠರ ಜೊತೆ ಚರ್ಚಿಸುತ್ತೇನೆ ಎಂದು ಮಾಜಿ ಸಿಎಂ ಭರವಸೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಸಚಿವ ಸತೀಶ್ ಜಾರಕಿಹೊಳಿ ಆಗಮಿಸಿರುವುದು.

ಸಚಿವಸತೀಶ್‍ ಜಾರಕಿಹೊಳಿ ಈ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಕಾಂಗ್ರೆಸ್‍-ಜೆಡಿಎಸ್‍ ಒಮ್ಮತದ ಅಭ್ಯರ್ಥಿ ಗೆಲ್ಲಿಸಿಕೊಳ್ಳುವುದು ಅತ್ಯಂತ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇದರಿಂದ ಸತೀಶ್‍ ಜಾರಕಿಹೊಳಿ ಅವರ ಇಂದಿನ ಚರ್ಚೆ ಅತ್ಯಂತ ಮಹತ್ವದ್ದಾಗಿ ಪರಿಣಮಿಸಿತ್ತು.

ಈಗಾಗಲೇ ವಿವಿಧ ಹಂತದಲ್ಲಿ ನಾಯಕರು ಅಭ್ಯರ್ಥಿ ಆಯ್ಕೆ ಸಂಬಂಧ ಮಾತನಾಡಿದ್ದಾರೆ. ಅಲ್ಲದೇ ಜಿಲ್ಲಾ ಮಟ್ಟದ ಎಲ್ಲಾ ನಾಯಕರು ಒಮ್ಮತದಿಂದ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಳ್ಳುವಂತೆ ಮಾಡುವುದೇ ಸವಾಲಾಗಿದೆ.ಮಾಜಿ ಸಚಿವ ರಮೇಶ್‍ ಜಾರಕಿಹೊಳಿ ಇದನ್ನು ಬೆಂಬಲಿಸುತ್ತಾರಾ ಅನ್ನುವ ಅನುಮಾನ ಕೂಡ ಇದೆ. ಈ ನಡುವೆ ಇಂದು ಸಿದ್ದರಾಮಯ್ಯರನ್ನು ಸಚಿವ ಸತೀಶ್‍ ಜಾರಕಿಹೊಳಿ ನಡೆಸಿದ ಭೇಟಿ ಹಲವು ವಿಧದಲ್ಲಿ ಮಹತ್ವ ಪಡೆದಿದೆ.

Intro:Body:

kn_bng_03_21_satish_meet_siddu_talk_script_9020923_mahesh_2103digital_01458_101

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.