ಬೆಂಗಳೂರು: ಫುಡ್ ಪ್ರಿಯರಿಗಾಗಿ ಆಗಸ್ಟ್ 2,3 ಹಾಗೂ 4ರಂದು ನಗರದ ನಾಯಂಡಹಳ್ಳಿ ಸಮೀಪದ ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ‘ಬೆಂಗಳೂರು ಫುಡ್ ಫೆಸ್ಟಿವಲ್-2019’ ನಡೆಯಲಿದೆ.
ಮೂರು ದಿನಗಳ ಕಾಲ ನಡೆಯುವ ಆಹಾರ ಮೇಳದಲ್ಲಿ ಸುಮಾರು 250ಕ್ಕೂ ಹೆಚ್ಚು ಬ್ರಾಂಡ್ ಮಳಿಗೆಗಳು ರುಚಿಕರವಾದ ತಿಂಡಿ ತಿನಿಸುಗಳನ್ನು ಆಹಾರ ಪ್ರಿಯರಿಗೆ ಉಣಬಡಿಸಲಿದೆ.
ಜೊತೆಗೆ ಈ ಆಹಾರ ಮೇಳದಲ್ಲಿ ಆಹಾರ ತಯಾರಿ ಹಾಗೂ ತಿನ್ನುವ ಸ್ಪರ್ಧೆ ಕೂಡ ನಡೆಯಲಿದೆ. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿ ದಿನ ಸಂಜೆ ನಡೆಯಲಿದ್ದು, ಕಿರುತೆರೆ ಹಾಗೂ ಹಿರಿತೆರೆ ನಟ-ನಟಿಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎಂದಿನಂತೆ ಈ ಬಾರಿಯೂ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಫುಡ್ ಫೆಸ್ಟಿವಲ್ನ ರಾಯಭಾರಿಯಾಗಿದ್ದಾರೆ.