ETV Bharat / state

ಮಣಿಪಾಲ್ ಸಂಸ್ಥೆಗೆ ವಂಚನೆ... ಖದೀಮನ ವಶಕ್ಕೆ ಖತಾರ್​ ರಾಜತಾಂತ್ರಿಕ ಕಚೇರಿ ಮೊರೆ

author img

By

Published : Mar 13, 2019, 3:28 PM IST

ವಿದೇಶದಲ್ಲಿ ತಲೆ ಮರಿಸಿಕೊಂಡಿರುವ ಆರೋಪಿ ಬಂಧನಕ್ಕೆ ನೆರವಾಗುವಂತೆ ವಿದೇಶಾಂಗ ಸಚಿವಾಲಯಕ್ಕೆ ಕಬ್ಬನ್​​ ಪಾರ್ಕ್​ ಪೊಲೀಸರು ಪತ್ರ ಬರೆದಿದ್ದು, ರಾಜತಾಂತ್ರಿಕ ಮುಖೇನ ಆಪಾದಿತನನ್ನು ಕರೆ ತರಲು ಮುಂದಾಗಿದೆ.

cheat

ಬೆಂಗಳೂರು: ಮಣಿಪಾಲ್ ಗ್ರೂಪ್ ಕಂಪನಿಗೆ ₹ 62 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರಿಸಿಕೊಂಡ ಆರೋಪಿಯ ವಶಕ್ಕೆ ರಾಜ್ಯ ಪೊಲೀಸ್ ಇಲಾಖೆಯು ರಾಜತಾಂತ್ರಿಕ ಮೊರೆ ಹೋಗಿದೆ.

ಈ ಪ್ರಕರಣದ ಪ್ರಮುಖ ಆಪಾದಿತ ಕತಾರ್ ಏರ್ ವೇಸ್ ಪೈಲೆಟ್ ವಿಶಾಲ್ ಸೋಮಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಆರೋಪಿ ಇರುವಿಕೆಯ ಬಗ್ಗೆ ಖಚಿತ‌ ಮಾಹಿತಿ ಇದ್ದರೂ ಕತಾರ್​ ಕಾನೂನುಗಳು ಮತ್ತು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದ ಅಡ್ಡಿಯಾಗಿದೆ. ಹೀಗಾಗಿ, ಕಬ್ಬನ್​ ಪಾರ್ಕ್​ ಪೊಲೀಸರು ಕೇಂದ್ರ ವಿದೇಶಾಂಗ ಇಲಾಖೆಗೆ ಈ ಕುರಿತು ಪತ್ರ ಬರೆದಿದ್ದು, ರಾಜತಾಂತ್ರಿಕ ಮುಖೇನ ಆಪಾದಿತನ ಬಂಧನಕ್ಕೆ ನೆರವಾಗುವಂತೆ ಕೋರಿದೆ.

ಏನಿದು ಪ್ರಕರಣ ?

ಸಂಸ್ಥೆಯಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಕೆಲಸಕ್ಕೆ ಸೇರಿಕೊಂಡು ಹಂತ ಹಂತವಾಗಿ ಬೆಳೆದು ಡಿಜಿಎಂ ಹುದ್ದೆಗೇರಿದ್ದ ಸಂದೀಪ್ ಈ ವಂಚನೆಯ ಮಾಸ್ಟರ್ ಮೈಂಡ್. ಕಂಪನಿಯ ಅಧ್ಯಕ್ಷ ಡಾ.ರಂಜನ್‌ ಪೈ ಮತ್ತು ಶ್ರುತಿ ಪೈ ಅವರ ಖಾಸಗಿ ಖಾತೆ ಮತ್ತು ಇವರಿಗೆ ಸೇರಿದ ನಾನಾ ಅಂತಾರಾಷ್ಟ್ರೀಯ ಕಂಪನಿಗಳ ಹಣವನ್ನು ಸಂದೀಪ್‌ ಗುರುರಾಜ್‌ ತನ್ನ ಹಾಗೂ ಪತ್ನಿ ಮತ್ತು ಸ್ನೇಹಿತರ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದರು. ಅದೇ ಹಣದಲ್ಲಿ ಪತ್ನಿ ಮತ್ತು ಸಂಬಂಧಿಕರನ್ನು ವ್ಯವಹಾರಿಕ ಪಾಲುದಾರರನ್ನಾಗಿ ಮಾಡಿಕೊಂಡಿದ್ದಲ್ಲದೆ, ಅವರದೇ ಹೆಸರಿನಲ್ಲಿ ನಿವೇಶನ, ಸ್ವತ್ತುಗಳನ್ನು ಖರೀದಿಸಿದ್ದರು. ಜತೆಗೆ ನಾನಾ ಕಂಪನಿಗಳನ್ನು ತೆರೆದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಬ್ಬನ್‌ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಅಮ್ರಿತಾ ಚೆಂಗಪ್ಪ, ಮೀರಾ ಚೆಂಗಪ್ಪ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಸದ್ಯ ಆಪಾದಿತರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಭಾರತ ಹಾಗೂ ಕತಾರ್ ನಡುವಿನ ದ್ವಿಪಕ್ಷೀಯ ಒಪ್ಪಂದ ಆಗದ ಹಿನ್ನೆಲೆ: ಬಹುಕೋಟಿ ವಂಚಿಸಿದ ಆರೋಪಿಗೆ ವರದಾನ

ಬೆಂಗಳೂರು: ಭಾರತ ಹಾಗೂ‌ ಕತಾರ್ ದೇಶಗಳ‌ ನಡುವೆ ದ್ವಿಪಕ್ಷೀಯ ಒಪ್ಪಂದ ಆಗದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಹುಕೋಟಿ ರೂ.ವಂಚಿಸಿ ಕತಾರ್ ನಲ್ಲಿ ಪೈಲಟ್ ಆಗಿರುವ ಆರೋಪಿಗೆ ವರದಾನವಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಸಾಮಾನ್ಯವಾಗಿ ಒಂದು ದೇಶವು ಇನ್ನೊಂದು ದೇಶದೊಂದಿಗೆ ರಾಜತಾಂತ್ರಿಕ ಅಥವಾ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ‌ ಹಾಕುವ ಪರಸ್ಪರ ಸಹಬಾಳ್ವೆ ಹಾಗೂ ಹೊಂದಾಣಿಕೆ ಮಾಡಿಕೊಳ್ಳುವುದೇ ಒಪ್ಪಂದ‌‌ ಮೂಲ ಉದ್ದೇಶವಾಗಿರಲಿದೆ. ಇದುವರೆಗೆ ಭಾರತ- ಕತಾರ್ ನಡುವಿನ ಒಪ್ಪಂದ ಆಗದ ಪರಿಣಾಮ ಬೆಂಗಳೂರಿನಲ್ಲಿ ಕೋಟ್ಯಂತರ ರೂ.ವಂಚಿಸಿದ ಆರೋಪಿಯೊಬ್ಬ ಕತಾರ್ ನಲ್ಲಿ ನೆಲೆಯೂರಿದ್ದಾನೆ. ಪೊಲೀಸರಿಗೆ ಆರೋಪಿ ಇರುವಿಕೆ ಬಗ್ಗೆ ಖಚಿತ‌ ಮಾಹಿತಿ ಇದ್ದರೂ ಅಲ್ಲಿನ‌ ಕಾನೂನುಗಳೇ ಅಡ್ಡಿಯಾಗಿವೆ. ಈ ಸಂಬಂಧ ಕೇಂದ್ರ ವಿದೇಶಾಂಗ ಇಲಾಖೆಗೆ ಪತ್ರ ಬರೆಯಲು ಕಬ್ಬನ್ ಪಾರ್ಕ್ ಪೊಲೀಸರು  ಮುಂದಾಗಿದ್ದಾರೆ.

ಏನಿದು ಪ್ರಕರಣ ? 

ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯ ಜೆ.ಡಬ್ಲ್ಯೂ ಮೆರಿಯಟ್ ನಲ್ಲಿರುವ ಮಣಿಪಾಲ್ ಎಜುಕೇಷನ್ ಮತ್ತು ಮೆಡಿಕಲ್ ಗ್ರೂಪ್ ಹಾಗೂ ಮಣಿಪಾಲ್ ಇಂಟಿಗ್ರೇಟೆಡ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಪೈನಾನ್ಸ್ ಡಿಪಾರ್ಟಮೆಂಟ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಸಂದೀಪ್ ಗುರುರಾಜ್ ಮಾಲೀಕನಿಗೆ ಬರೋಬ್ಬರಿ 62 ಕೋಟಿ ವಂಚಿಸಿರುವ ಪ್ರಕರಣ ಇದಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಛೇರ್ಮನ್ ಡಾ.ರಂಜನ್ ಪೈ ಮತ್ತು ಶೃತಿ ಪೈ ಅಕೌಂಟ್ ನಿಂದ ಬರೋಬ್ಬರಿ 62 ಕೋಟಿ ಹಣವನ್ನು ಟ್ರಾನ್ಸ್ ಫರ್ ಮಾಡಿಕೊಂಡು ವಂಚಿಸಿದ್ದಾನೆ. 
ಇನ್ನೂ ಅದೇ‌ ಕಂಪೆನಿಯಲ್ಲಿ‌‌ ಎಚ್ಆರ್ ಆಗಿ  ಕೆಲಸ ಮಾಡುತ್ತಿದ್ದ ಪ್ರಿಯತಮೆ ಅಮಿತ್ರಾ ಚೆಂಗಪ್ಪಗೆ 52 ಕೋಟಿಯಷ್ಟು ಹಣ ವರ್ಗಾವಣೆ ಮಾಡಿದ್ದ. ಈ ಹಣದಲ್ಲಿ‌‌ ಕತಾರ್ ನಲ್ಲಿ ಪೈಲಟ್ ಆಗಿರುವ ವಿಶಾಲ್ ಸೋಮಣ್ಣ ಚೆಂಗಪ್ಪ ಕೋಟ್ಯಂತರ ರೂ.ಟ್ರಾನ್ಸ್‌ಫರ್ ಮಾಡಿದ್ದಾನೆ.
ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೂ ಅರೆಸ್ಟ್ ಮಾಡಲಾಗದ ಪರಿಸ್ಥಿತಿ ಕಬ್ಬನ್ ಪಾರ್ಕ್ ಪೊಲೀಸರದ್ದು, ಇನ್ನೊಂದೆಡೆ ಕೋಟ್ಯಂತರ ರೂ. ಹಣ ಟ್ರಾನ್ಸ್ ಫರ್ ಮಾಡಿಸಿಕೊಂಡಿರುವ ವಿಶಾಲ್ ಸೋಮಣ್ಣನ ಕತಾರ್ ನ ದೋಹಾ ಬ್ಯಾಂಕ್ ನ ಮುಂಬೈ ಬ್ರಾಂಚ್ ನ ಅಧಿಕಾರಿಗಳಿಗೆ ವಂಚನೆ ಬಗ್ಗೆ ಪತ್ರ ಬರೆದಿದ್ದರೂ ಇದುವರೆಗೂ ಸಕರಾತ್ಮಕವಾಗಿ ಸ್ಪಂದಿಸಿಲ್ಲ. ಈ ನಡುವೆ ಬಂಧಿತ ಆರೋಪಿಗಳ ಜಾಮೀನು ಅರ್ಜಿ ತಿರಸ್ಕಾರವಾಗಿದ್ದು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
  
For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.