ETV Bharat / state

ಸಿದ್ದರಾಮಯ್ಯರನ್ನು ಸಿಎಂ ಮಾಡುವ ಯಾವುದೇ ಪ್ರಸ್ತಾವನೆ ಬಂದಿಲ್ಲ: ದಿನೇಶ್​​​ ಗುಂಡೂರಾವ್​​

ಕೆಲ ಜೆಡಿಎಸ್​​ ನಾಯಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಅವರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವ ಪ್ರಸ್ತಾವನೆ ಮುಂದಿಟ್ಟಿದ್ದಾರೆಂದು ಹೇಳಲಾಗಿದೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ದಿನೇಶ್​ ಗುಂಡೂರಾವ್​, ಇವೆಲ್ಲಾ ಸುಳ್ಳು. ಈ ಕುರಿತು ನಮ್ಮ ಪಕ್ಷ ಯಾವುದೇ ಪ್ರಸ್ತಾವನೆ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡುರಾವ್
author img

By

Published : Jul 22, 2019, 2:37 AM IST

ಬೆಂಗಳೂರು: ಇಂದು ಮೈತ್ರಿ ಸರ್ಕಾರ ವಿಶ್ವಾಸ ಮತಯಾಚನೆ ಮಾಡಲಿರುವ ಹಿನ್ನೆಲೆ ಸಿದ್ದರಾಮಯರನ್ನು ಮುಂದಿನ ಮುಖ್ಯಮಂತ್ರಿಯಾಗಿ ಮಾಡುವಂತೆ ಕೋರಿ ನಮ್ಮ ಪಕ್ಷ ಯಾವುದೇ ಪ್ರಸ್ತಾವನೆ ಸ್ವೀಕರಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡುರಾವ್ ಭಾನುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜೆಡಿಎಸ್​​ ನಾಯಕರಾದ ಜಿ.ಟಿ.ದೇವೇಗೌಡ, ಕೆ.ಎಲ್. ಶಿವಲಿಂಗೇಗೌಡ, ಸಾ.ರಾ.ಮಹೇಶ್​ ಹಾಗೂ ಸಿ.ಎಸ್​.ಪುಟ್ಟರಾಜು ಅವರೆಲ್ಲಾ ಸೇರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್​ರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸಿದ್ದರಾಮಯ್ಯರನ್ನು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರಂತೆ. ಆದರೆ ಇದನ್ನು ಸಿದ್ದರಾಮಯ್ಯ ನಿರಾಕರಿಸಿದ್ದಾರೆಂದು ಮೂಲಗಳು ತಿಳಿಸಿವೆ. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಗುಂಡೂರಾವ್, ಇವೆಲ್ಲಾ ಸುಳ್ಳು. ಆ ರೀತಿ ಯಾವುದೇ ಪ್ರಸ್ತಾವನೆಗಳಿಲ್ಲ ಎಂದು ಹೇಳಿದ್ದಾರೆ.

ಗುಂಡೂರಾವ್​ ಸೇರಿದಂತೆ ಇತರ ಕಾಂಗ್ರೆಸ್​ ನಾಯಕರು ಭಾನುವಾರ ಬೆಂಗಳೂರಿನ ತಾಜ್ ವಿವಾಂತ ಹೋಟೆಲ್​ನಲ್ಲಿ ನಡೆದ ಸಿಎಲ್​ಪಿ ಸಭೆಯಲ್ಲಿ ಪಾಲ್ಗೊಂಡಿದ್ದು, ಇದೇ ವೇಳೆ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ್​ ಖರ್ಗೆಯವರ ಜನ್ಮದಿನವನ್ನೂ ಆಚರಿಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ದಿನೇಶ್​ ಗುಂಡೂರಾವ್, ನಾವು ಶಾಸಕಾಂಗ ಪಕ್ಷದ ಅನೌಪಚಾರಿಕ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ್​ ಖರ್ಗೆ, ವೇಣುಗೋಪಾಲ್​, ಡಿಸಿಎಂ ಪರಮೇಶ್ವರ್​ ಎಲ್ಲರೂ ಉಪಸ್ಥಿತರಿದ್ದರು. ಶಾಸಕರೆಲ್ಲರೂ ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು. ಬಹಳ ವಿಶ್ವಾಸದೊಂದಿಗೆ ವಿಶ್ವಾಸ ಮತಯಾಚನೆಗೆ ಹೋಗುತ್ತಿದ್ದೇವೆ ಹಾಗೂ ನಾವು ಜಯಶಾಲಿಗಳಾಗಲಿದ್ದೇವೆ ಎಂಬ ನಂಬಿಕೆಯಿದೆ. ಅಲ್ಲದೇ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಏನಾಗಲಿದೆ ಎಂಬುದರ ಕುರಿತೂ ಚರ್ಚಿಸಿದ್ದೇವೆ ಎಂದಿದ್ದಾರೆ.

ಬಿಜೆಪಿಯ ಸಾವಿರ ಕೋಟಿ 'ಆಪರೇಷನ್​ ಕಮಲ' ಬಹಿರಂಗ:

ಸೋಮವಾರ ಸದನದಲ್ಲಿ ಬಿಜೆಪಿಯ ಸಾವಿರ ಕೋಟಿಯ 'ಆಪರೇಷನ್​ ಕಮಲ'ವನ್ನು ಬಹಿರಂಗಪಡಿಸಲಿದ್ದೇವೆ. ಮುರಳೀಧರ್​ ರಾವ್​​ ಮಾತಾಡಿರುವ ಆಡಿಯೋ ತುಣುಕನ್ನು ಕೂಡ ಕೇಳಿದ್ದೇವೆ. ಅಲ್ಲದೇ ಯಡಿಯೂರಪ್ಪನವರು ಶಾಸಕರಿಗೆ 20-30 ಕೋಟಿ ರೂ. ಆಮಿಷವೊಡ್ಡಿ ಮಾತಾಡಿರುವ ಆಡಿಯೋ ತುಣುಕನ್ನೂ ಕೇಳಿದ್ದೇವೆ. ಇದು ಸಾವಿರ ಕೋಟಿಯ ಆಪರೇಷನ್​ ಆಗಿದೆ. ಅಷ್ಟೊಂದು ಹಣ ಎಲ್ಲಿಂದ ಬಂತು? ಇದು ಪ್ರಜಾಪ್ರಭುತ್ವವಾ? ಇದನ್ನೇ ಜನರು ಬಯಸೋದಾ? ಇವೆಲ್ಲವನ್ನೂ ಸದನದಲ್ಲಿ ಪ್ರಶ್ನಿಸಲಿದ್ದೇವೆ ಎಂದು ದಿನೇಶ್​ ಗುಂಡುರಾವ್​ ಆಕ್ರೋಶ ವ್ಯಕ್ತಪಡಿಸಿದರು.

Intro:Body:

Dinesh gundurao

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.