ETV Bharat / state

ಯಾರಿಗೆ ಹ್ಯಾಟ್ರಿಕ್, ಇನ್ಯಾರಿಗೆ ಲಾಟರಿ... ಇಲ್ಲಿದೆ ಕರ್ನಾಟಕ ಪಾಲಿಟಿಕ್ಸ್ ರೌಂಡ್​ಅಪ್​! - undefined

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೇ ಆರಂಭಗೊಂಡಿದೆ. ರಾಜ್ಯದಲ್ಲೂ ಎರಡು ಹಂತದಲ್ಲಿ ವೋಟಿಂಗ್​ ನಡೆದಿದ್ದು, ಬಿಜೆಪಿ, ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಪಕ್ಷದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇದೀಗ ಎಲ್ಲರ ಚಿತ್ತ ರಿಜಲ್ಟ್​ನತ್ತ ನೆಟ್ಟಿದೆ. ಹಾಗಾದ್ರೆ ರಾಜ್ಯದಲ್ಲಿನ 28 ಕ್ಷೇತ್ರಗಳಲ್ಲಿ ಈ ಹಿಂದೆ ಯಾರೆಲ್ಲ ಅತಿಹೆಚ್ಚು ಗೆಲ್ಲುವು ದಾಖಲು ಮಾಡಿದ್ದಾರೆ ಎಂಬುದರ ಡಿಟೇಲ್ಸ್​ ಇಂತಿದೆ.

ಈ ಹಿಂದೆ ಅತಿಹೆಚ್ಚು ಗೆಲ್ಲುವು ದಾಖಲಿಸಿದ ನಾಯಕರು
author img

By

Published : May 23, 2019, 7:10 AM IST

ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಸೋಲಿಲ್ಲದ ಸರದಾರರು!

ಇಂದು ಪ್ರಕಟಗೊಳ್ಳುವ ಲೋಕಸಭಾ ಚುನಾವಣೆ ರಾಜ್ಯ-ರಾಜಕೀಯದ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂಬ ಮಾತು ಈಗಾಗಲೇ ಕೇಳಿ ಬರ್ತಿವೆ. ಆಡಳಿತ ನಡೆಸ್ತಿರುವ ಮೈತ್ರಿ ಸರಕಾರದ ಅಳಿವು-ಉಳಿವಿನ ಪ್ರಶ್ನೆ ಎನ್ನಲಾಗ್ತಿದ್ದು, ಇದರ ಮಧ್ಯೆ ಕೆಲ ನಾಯಕರು ಲೋಕಫೈಟ್ ಗೆದ್ದು ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಈ ಹಿಂದೆ ಅತಿಹೆಚ್ಚು ಗೆಲುವು ದಾಖಲಿಸಿದ ನಾಯಕರು

8ನೇ ಬಾರಿ ಗೆದ್ದು ಐತಿಹಾಸ ಸೃಷ್ಟಿ ಮಾಡ್ತಾರಾ ಕೆ.ಹೆಚ್​ ಮುನಿಯಪ್ಪ?

ಕೋಲಾರ ಲೋಕಸಭಾ ಕ್ಷೇತ್ರದಿಂದ 1991ರಿಂದ ಸತತವಾಗಿ ಗೆಲುವು ದಾಖಲು ಮಾಡಿರುವ ಕೆಹೆಚ್​ ಮುನಿಯಪ್ಪ ಸೋಲಿಲ್ಲದ ಸರದಾರ ಎಂಬ ಹಣೆ ಪಟ್ಟ ಕಟ್ಟಿಕೊಂಡಿದ್ದಾರೆ. ಈಗಾಗಲೇ ಏಳು ಸಲ ಚುನಾವಣೆ ಗೆದ್ದಿರುವ ಇವರು, ಈ ಸಲ ಗೆದ್ದು ಇತಿಹಾಸ ರಚನೆಗೆ ಮುಂದಾಗಿದ್ದಾರೆ.

ಮಾಜಿ ಪ್ರಧಾನಿ ಹೆಚ್​ಡಿಡಿ ಕೈ ಹಿಡಿಯುತ್ತಾ ಕಲ್ಪತರು ನಾಡು!

ಹಾಸನ,ಕನಕಪುರ,ಮಂಡ್ಯದಿಂದ ಸತತವಾಗಿ ಗೆಲುವು ದಾಖಲು ಮಾಡಿರುವ ಮಾಜಿ ಪ್ರಧಾನಿ ಈಸಲ ತುಮಕೂರಿನಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಈ ಸಲ ಗೆಲುವು ದಾಖಲು ಮಾಡಿದರೆ ಏಳನೇ ಬಾರಿ ಗೆಲುವಿನ ನಗೆ ಬೀರಿದಂತಾಗುತ್ತದೆ. ಈ ಹಿಂದಿನ ಲೋಕಸಭೆಯಲ್ಲಿ ಹಾಸನದಿಂದ ಸ್ಪರ್ಧಿಸಿದ್ದ ಹೆಚ್​ಡಿಡಿ ಈ ಸಲ ತಮ್ಮ ಕ್ಷೇತ್ರವನ್ನ ಮೊಮ್ಮಗ ಪ್ರಜ್ವಲ್​​ಗೆ ಬಿಟ್ಟುಕೊಂಡು, ಕಾಂಗ್ರೆಸ್​ ಭದ್ರಕೋಟೆ ತುಮಕೂರಿನಿಂದ ಕಣಕ್ಕಿಳಿದಿದ್ದಾರೆ. ಇವರಿಗೆ ಬಿಜೆಪಿ ಅಭ್ಯರ್ಥಿ ಜಿ.ಎಸ್. ಬಸವರಾಜು ತೀವ್ರ ಪೈಪೋಟಿ ನೀಡಲಿದ್ದಾರೆ.

ಕರ್ನಾಟಕ ಬಿಜೆಪಿ ಫೈರ್​ ಬ್ರಾಂಡ್​ ಕಮಾಲ್​ ಮಾಡಲು ರೆಡಿ?

ಮಾತಿನ ಮಲ್ಲ ಎಂಬ ಪಟ್ಟ ಕಟ್ಟಿಕೊಂಡಿರುವ ಉತ್ತರ ಕನ್ನಡದ ಬಿಜೆಪಿ ಅಭ್ಯರ್ಥಿ ಅನಂತ್​ ಕುಮಾರ್​ ಹೆಗಡೆ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಈ ಹಿಂದಿನ ಮೂರು ಲೋಕಸಭಾ ಎಲೆಕ್ಷನ್​ ಗೆದ್ದಿರುವ ಕೇಂದ್ರ ಸಚಿವ ಈ ಸಲ ಗೆದ್ದರೆ ಐದನೇ ಸಲ ಗೆಲುವು ದಾಖಲು ಮಾಡಿದಂತಾಗ್ತದೆ.ಇವರ ಎದುರಾಳಿಯಾಗಿ ಜೆಡಿಎಸ್​-ಕಾಂಗ್ರೆಸ್​ ಮೈತ್ರಿ ಅಭ್ಯರ್ಥಿ ಆನಂದ್​ ಅಸ್ನೋಟಿಕರ್​ ಸ್ಪರ್ಧೆ ಮಾಡಿದ್ದು, ಟಪ್​ ಫೈಟ್​ ನೀಡಲಿದ್ದಾರೆ.

ಗೆಲುವಿನ ಸಿಕ್ಸರ್​ ಭಾರಿಸಲು ಸಿದ್ಧರಾದ ರಮೇಶ್​ ಜಿಗಜಿಣಗಿ!

ಆದಿಲ್ ಶಾಹಿ ಸುಲ್ತಾನರ ರಾಜಧಾನಿಯಾಗಿದ್ದ ಬಿಜಾಪುರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಎದುರಾಳಿ ಮೈತ್ರಿ ಅಭ್ಯರ್ಥಿ ಸುನಿತಾ ಚವಾಣ್. ಈ ಹಿಂದೆ 1998ರಲ್ಲಿ ಲೋಕಶಕ್ತಿ,1999ರಲ್ಲಿ ಸಂಯುಕ್ತ ಜನತಾದಳ ತದನಂತರ 2004,2009 ಹಾಗೂ 2014ರಲ್ಲಿ ಬಿಜೆಯಿಂದ ಸತತ ಗೆಲುವು ಸಾಧಿಸಿರುವ ಜಿಗಜಿಣಗಿ, ರಾಜಕೀಯ ಚಾಣಾಕ್ಷ್ಯ. ಈ ಸಲದ ಎಲೆಕ್ಷನ್​​ನಲ್ಲಿ ಅನನುಭವಿ ಎದುರಾಳಿ ಸುನಿತಾ ವಿರುದ್ಧ ಸುಲಭ ಗೆಲುವು ದಾಖಲು ಮಾಡುವ ಉತ್ಸಾಹದಲ್ಲಿದ್ದಾರೆ.

4ನೇ ಬಾರಿ ವಿಜಯದ ನಗೆ ಬೀರಲು ಗದ್ದಿಗೌಡರ್​ ಸನ್ನದ್ಧ

ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಪಿಸಿ ಗದ್ದಿಗೌಡರ್​ ನಾಲ್ಕನೇ ಸಲ ಗೆಲುವಿನ ನಗಾರಿ ಬಾರಿಸಲು ಸಜ್ಜಾಗಿದ್ದಾರೆ. ಈ ಸಲ ಕಾಂಗ್ರೆಸ್‌ನ ವೀಣಾ ಕಾಶಪ್ಪನವರ್ ಇದೇ ಕ್ಷೇತ್ರದಿಂದ ಅದೃಷ್ಠ ಪರೀಕ್ಷೆಗೆ ಮುಂದಾಗಿದ್ದು, ಬಿಗ್​ಫೈಟ್​ ಏರ್ಪಟ್ಟಿದೆ. ಸತತ ಮೂರು ಬಾರಿ ಗೆಲುವಿನ ಮೂಲಕ ಹ್ಯಾಟ್ರಿಕ್‌ ಬಾರಿಸಿರುವ ಬಿಜೆಪಿ ಸಂಸದ ಸುರೇಶ್‌ ಅಂಗಡಿ ಸಹ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಹ್ಯಾಟ್ರಿಕ್​ ಬಾರಿಸಿ ಓಟ ಮುಂದುವರಿಸ್ತಾರಾ ಇವರೆಲ್ಲ:

ಬೆಂಗಳೂರು ಕೇಂದ್ರದಿಂದ ಬಿಜೆಪಿಯ ಪಿಸಿ ಮೋಹನ್​ ಈಗಾಗಲೇ ಎರಡು ಸಲ ಗೆದ್ದಾಗಿದೆ. ಈ ಸಲವೂ ಹ್ಯಾಟ್ರಿಕ್​ ಗೆಲುವು ದಾಖಲು ಮಾಡುವ ಉತ್ಸಾಹದಲ್ಲಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈಗಾಗಲೇ ಎರಡು ಸಲ ಗೆಲುವಿನ ರುಚಿ ನೋಡಿರುವ ಡಿಕೆ ಸುರೇಶ್​ ಮತ್ತೊಮ್ಮೆ ಗೆಲುವಿನ ನಗೆ ಬೀರಲು ಮುಂದಾಗಿದ್ದಾರೆ. ಚಾಮರಾಜನಗರದಲ್ಲಿ ಆರ್​.ಧ್ರುವನಾರಾಯಣ ಸಹ ಹ್ಯಾಟ್ರಿಕ್​ ಬಾರಿಸಲು ಸಜ್ಜಾಗಿದ್ದಾರೆ. ಆದರೆ ಇವರಿಗೆ ಹಳೆ ಹುಲಿ ಬಿಜೆಪಿಯ ವಿ.ಶ್ರೀನಿವಾಸ ಪ್ರಸಾದ್‌ ಪ್ರಬಲ ಪೈಪೋಟಿ ನೀಡಿದ್ದಾರೆ. ಇನ್ನು ಎದುರಾಳಿಗಳೇ ಇಲ್ಲದೇ ಈಗಾಗಲೇ ಹ್ಯಾಟ್ರಿಕ್​ ಗೆಲುವು ದಾಖಲು ಮಾಡಿರುವ ಪ್ರಹ್ಲಾದ್​ ಜೋಶಿ, ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ ಈ ಬಾರಿಯೂ ಇವರಿಗೆ ವಿನಯ್​ ಕುಲಕರ್ಣಿ ಅವರು ಅಡ್ಡಗಾಲಾಗಿದ್ದಾರೆ. ಕೇಂದ್ರ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಜಿಎಂ ಸಿದ್ದೇಶ್ವರ್​ ದಾವಣಗೆರೆ ಕ್ಷೇತ್ರದಿಂದ ನಾಲ್ಕನೇ ಬಾರಿಗೆ ವಿಜಯ ಸಾಧಿಸುವ ಸನ್ನಾಹದಲ್ಲಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಎಂ. ವೀರಪ್ಪ ಮೊಯ್ಲಿ ಕಾಂಗ್ರೆಸ್​ನ ಪ್ರಬಲ ಅಭ್ಯರ್ಥಿ. ಈಗಾಗಲೇ 2009 ಹಾಗೂ 2014ರಲ್ಲಿ ಗೆಲುವಿನ ನಗೆ ಬೀರಿರುವ ಮೊಯ್ಲಿ ಈ ಸಲವೂ ಗೆಲುವು ದಾಖಲು ಮಾಡಿ ಹ್ಯಾಟ್ರಿಕ್​ ಗೆಲುವು ದಾಖಲು ಮಾಡುವ ಸಾಧ್ಯತೆ ಇದೆ. ಇನ್ನು ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್​ಗೆ ಬಿಜಪಿ ಮೂರನೇ ಬಾರಿಗೆ ಕಣಕ್ಕಿಳಿಸಿದೆ. ಈಗಾಗಲೇ ಗೆಲುವಿನ ನಗಾರಿ ಬಾರಿಸಿರುವ ಕಟೀಲ್​ ಗೆದ್ದು ಹ್ಯಾಟ್ರಿಕ್​ ಸಾಧನೆ ಮಾಡುವ ತವಕದಲ್ಲಿದ್ದಾರೆ.

ಸೋಲಿಲ್ಲದ ಸರದಾರನಿಗೆ ಆಗುತ್ತಾ ಮುಖಭಂಗ?

ಸೊಲ್ಲಿಲ್ಲದ ಸರದಾರ ಮಲ್ಲಿಕಾರ್ಜುನ್​ ಖರ್ಗೆ, ಕಾಂಗ್ರೆಸ್​ನ ಪ್ರಬಲ ಅಭ್ಯರ್ಥಿ. ಈಗಾಗಲೇ ಗುಲ್ಬರ್ಗಾ ಕ್ಷೇತ್ರದಿಂದ ಎರಡು ಸಲ ಗೆದ್ದಿರುವ ಖರ್ಗೆಗೆ ಈ ಸಲ ಅವರದ್ದೇ ಪಕ್ಷದ ಚಿಂಚೋಳಿ ಶಾಸಕರಾಗಿದ್ದ ಉಮೇಶ್ ಜಾಧವ್ ಪ್ರಬಲ ಎದುರಾಳಿಯಾಗಿದ್ದಾರೆ. ಒಂದು ವೇಳೆ ಈ ಕ್ಷೇತ್ರದಿಂದ ಖರ್ಗೆ ಗೆಲುವು ದಾಖಲು ಮಾಡಿದರೆ ಹೊಸ ದಾಖಲೆ ನಿರ್ಮಾಣವಾಗಲಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.