ETV Bharat / state

ಜೈಲು ಸೇರುವವರ ಪೈಕಿ ರಾಜ್ಯಕ್ಕೆ ಮೂರನೇ ಸ್ಥಾನ: ಎನ್​ಸಿಆರ್​ಬಿಯಿಂದ ಹೊರಬಿತ್ತು ಆತಂಕಕಾರಿ ಮಾಹಿತಿ!

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ 2016 ರವರೆಗಿನ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 50.7%ರಷ್ಟು 18-30 ವರ್ಷ ವಯಸ್ಸಿನವರು ವಿವಿಧ ಅಪರಾಧಗಳಲ್ಲಿ ಕಂಬಿ ಹಿಂದೆ ಸರಿಯುತ್ತಿದ್ದಾರೆ‌. ಮಿಜೋರಾಂ 57% ಹಾಗೂ ಚಂಡೀಘಡ 52% ಮೊದಲೆರಡು ಸ್ಥಾನದಲ್ಲಿವೆ.

ಎನ್​ಸಿಆರ್​ಬಿ
author img

By

Published : Apr 16, 2019, 3:11 PM IST

ಬೆಂಗಳೂರು: ಪ್ರತಿ ವರ್ಷ ಜೈಲು ಸೇರುವ ಯುವಕರ ಪ್ರಮಾಣದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿರುವ ಆತಂಕಕಾರಿ ಅಂಶ ಬಯಲಾಗಿದೆ.

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ 2016ರವರೆಗಿನ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 50.7%ರಷ್ಟು 18-30 ವರ್ಷ ವಯಸ್ಸಿನವರು ವಿವಿಧ ಅಪರಾಧಗಳಲ್ಲಿ ಕಂಬಿ ಹಿಂದೆ ಸರಿಯುತ್ತಿದ್ದಾರೆ‌. ಮಿಜೋರಾಂ 57% ಹಾಗೂ ಚಂಡೀಘಡ 52% ಮೊದಲೆರಡು ಸ್ಥಾನದಲ್ಲಿವೆ.

ರಾಜ್ಯದ 102 ಕಾರಾಗೃಹಗಳಲ್ಲಿರುವ 4110 ಸಜಾಬಂಧಿಗಳ ಪೈಕಿ 2083 ಜನ 18-30 ವಯಸ್ಸಿನವರಿದ್ದು, ಉಳಿದವರಲ್ಲಿ 30-50 ವಯಸ್ಸಿನವರಿದ್ದಾರೆ. 10,504 ಜನ ವಿಚಾರಣಾಧೀನ ಕೈದಿಗಳಿದ್ದು, 4,894 ಜನ 18-30 ವರ್ಷ ವಯಸ್ಸಿನವರಿದ್ದಾರೆ. ಇತ್ತೀಚಿಗೆ ಯುವ ಸಮುದಾಯ ಅಪರಾಧ ಕೃತ್ಯಗಳಲ್ಲಿ ತೊಡಗುವ ಮೂಲಕ ಜೈಲು ಸೇರುತ್ತಿರುವುದು ದುರದೃಷ್ಟಕರ. ಮತ್ತು ಅವರು ಕಾರಾಗೃಹದಿಂದ ಹೊರಬಂದ ಬಳಿಕ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಮಾನವೀಯ ಮೌಲ್ಯಗಳನ್ನ ಮನವರಿಕೆ ಮಾಡಿಕೊಡುವ ಅಗತ್ಯವೂ ಇದೆ ಎನ್ನುತ್ತಾರೆ‌ ಹಿರಿಯ ಅಧಿಕಾರಿಗಳು.

2016-17ನೇ ಸಾಲಿನಲ್ಲಿ 187.5 ಕೋಟಿ ರೂ. ಬಂಧಿಖಾನೆ ಇಲಾಖೆಗೆ ಸರ್ಕಾರ ಅನುದಾನ ಒದಗಿಸಿತ್ತು. ಇದರಲ್ಲಿ ಶೇ. 59ರಷ್ಟು ವೇತನ, ಮೂಲಭೂತ ಸೌಕರ್ಯ, ಆಸ್ಪತ್ರೆ ವೆಚ್ಚಗಳಿಗೆ ಖರ್ಚಾದರೆ. ಶೇ. 40.4ರಷ್ಟು ಜೈಲಿನಲ್ಲಿ‌ ಕೊಡುವ ಆಹಾರಕ್ಕೆ ವ್ಯಯವಾಗಿದೆ. 0.6 ರಷ್ಟು ಬಟ್ಟೆ, 0.1ರಷ್ಟು ಸಜಾಬಂಧಿಗಳ ಕಲ್ಯಾಣ ಕಾರ್ಯಕ್ರಮಕ್ಕೆ ಖರ್ಚಾಗಿದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.

Intro:National storyBody:ಜೈಲು ಸೇರುವವರ ಪೈಕಿ ಕರ್ನಾಟಕಕ್ಕೆ ಮೂರನೇ ಸ್ಥಾನ: ಎನ್ ಸಿಆರ್ ಬಿ ಯಿಂದ ಹೊರಬಿತ್ತು ಆತಂಕಕಾರಿ ಮಾಹಿತಿ..!

ಬೆಂಗಳೂರು: ಪ್ರತಿ ವರ್ಷ ಜೈಲು ಸೇರುವ ಯುವಕರ ಪ್ರಮಾಣದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿರುವ ಆತಂಕಕಾರಿ ಅಂಶ ಬಯಲಾಗಿದೆ.
ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋದ 2016 ರವರೆಗಿನ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 50.7% ನಷ್ಟು 18-30 ವರ್ಷ ವಯಸ್ಸಿನವರು ವಿವಿಧ ಅಪರಾಧಗಳಲ್ಲಿ ಕಂಬಿ ಹಿಂದೆ ಸರಿಯುತ್ತಿದ್ದಾರೆ‌. ಮಿಜೋರಾಂ 57% ಹಾಗೂ ಚಂಡೀಗಡ 52% ಮೊದಲೆರೆಡು ಸ್ಥಾನದಲ್ಲಿವೆ.
ರಾಜ್ಯದ 102 ಕಾರಾಗೃಹಗಳಲ್ಲಿರುವ 4110 ಸಜಾಬಂಧಿಗಳ ಪೈಕಿ 2083 ಜನ 18-30 ವಯಸ್ಸಿನವರಿದ್ದು ಉಳಿದವರಲ್ಲಿ 30-50 ವಯಸ್ಸಿನವರಿದ್ದಾರೆ. 10,504 ಜನ ವಿಚಾರಣಾಧೀನ ಖೈದಿಗಳಿದ್ದು 4,894 ಜನ 18-30 ವರ್ಷ ವಯಸ್ಸಿನವರಿದ್ದಾರೆ. ಇತ್ತೀಚಿಗೆ ಯುವ ಸಮುದಾಯ ಅಪರಾಧ ಕೃತ್ಯಗಳಲ್ಲಿ ತೊಡಗುವ ಮೂಲಕ ಜೈಲು ಸೇರುತ್ತಿರುವುದು ದುರದೃಷ್ಟಕರ. ಮತ್ತು ಅವರು ಕಾರಾಗೃಹದಿಂದ ಹೊರಬಂದ ಬಳಿಕ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ ಮಾನವೀಯ ಮೌಲ್ಯಗಳನ್ನ ಮನವರಿಕೆ ಮಾಡಿಕೊಡುವ ಅಗತ್ಯವೂ ಇದೆ ಎನ್ನುತ್ತಾರೆ‌ ಹಿರಿಯ ಅಧಿಕಾರಿಗಳು.
2016-17ನೇ ಸಾಲಿನಲ್ಲಿ 187.5 ಕೋಟಿ ರೂ. ಬಂಧೀಖಾನೆ ಇಲಾಖೆಗೆ ಸರ್ಕಾರ ಅನುದಾನ ಒದಗಿಸಿತ್ತು. ಇದರಲ್ಲಿ ಶೇ.59 ರಷ್ಟು ವೇತನ, ಮೂಲಭೂತ ಸೌಕರ್ಯ, ಆಸ್ಪತ್ರೆ ವೆಚ್ಚಗಳಿಗೆ ಖರ್ಚಾದರೆ, ಶೇ.40.4 ರಷ್ಟು ಜೈಲಿನಲ್ಲಿ‌ ಕೊಡುವ ಆಹಾರಕ್ಕೆ ವ್ಯಯವಾಗಿದೆ. 0.6 ರಷ್ಟು ಬಟ್ಟೆ, 0.1ರಷ್ಟು ಸಜಾ ಬಂಧಿಗಳ ಕಲ್ಯಾಣ ಕಾರ್ಯಕ್ರಮಕ್ಕೆ ಖರ್ಚಾಗಿದೆ ಎಂದು ಜೈಲಾಧಿಕಾರಿಗಳು ತಿಳಿಸಿದ್ದಾರೆ.

Conclusion:Bharath
ETV Bharat Logo

Copyright © 2024 Ushodaya Enterprises Pvt. Ltd., All Rights Reserved.