ETV Bharat / state

ಐಟಿ ದಾಳಿ ಪ್ರಕರಣ: ಆಟೋ ಚಾಲಕ ಸುಬ್ರಮಣಿ ಜೊತೆಗಿನ ನಂಟು ತಳ್ಳಿಹಾಕಿದ ಲಿಂಬಾವಳಿ - undefined

ಮಹಾದೇವಪುರ ಕ್ಷೇತ್ರದ ಆಟೋ ಚಾಲಕ ಸುಬ್ರಮಣಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೆಸರು ಕೇಳಿಬಂದಿತ್ತು. ಈ ಕುರಿತು ಸ್ವತಃ ಲಿಂಬಾವಳಿ ಅವರೇ ಸ್ಪಷ್ಟನೆ ನೀಡಿದ್ದಾರೆ.

ಐಟಿ ದಾಳಿ ಪ್ರಕರಣ ಕುರಿತು ಲಿಂಬಾವಳಿ ಸ್ಪಷ್ಟನೆ
author img

By

Published : May 1, 2019, 7:33 PM IST

ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ದಾಳಿಗೊಳಗಾಗಿರುವ ಮಹಾದೇವಪುರ ಕ್ಷೇತ್ರದ ಆಟೋ ಚಾಲಕ ಸುಬ್ರಮಣಿಗೂ ತಮಗೂ ಯಾವುದೇ ರೀತಿಯ ಸಂಬಂಧ ಇಲ್ಲವೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ.

ಐಟಿ ದಾಳಿ ಪ್ರಕರಣ ಕುರಿತು ಲಿಂಬಾವಳಿ ಸ್ಪಷ್ಟನೆ

ವಿಡಿಯೋ ಸಂದೇಶದ ಮೂಲಕ ಸ್ಪಷ್ಟೀಕರಣ ನೀಡಿರುವ ಲಿಂಬಾವಳಿ ಅವರು, ಆಟೋ ಡ್ರೈವರ್‌ ಮನೆ ಮೇಲೆ ಐಟಿ ದಾಳಿ ವಿಚಾರದ ಮಾಹಿತಿಯನ್ನು ನಾನು ಮಾಧ್ಯಮದಲ್ಲಿ ನೋಡಿ ತಿಳಿದಿದ್ದೇನೆ. ಆತ ನನ್ನ ಸರ್ಕಲ್​ನಲ್ಲಿ ಇರುವವನು ಎಂಬ ಮಾಹಿತಿ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದು ಸತ್ಯಕ್ಕೆ ದೂರವಾದ ಮಾತು. ಈ ಆರೋಪವನ್ನು ನಾನು ಸ್ಪಷ್ಟವಾಗಿ ಅಲ್ಲಗಳೆಯುತ್ತೇನೆ ಎಂದಿದ್ದಾರೆ.

ಇಂತಹ ವ್ಯವಹಾರವನ್ನು ನನ್ನ ಜೀವನದಲ್ಲಿ ಯಾವತ್ತೂ ಮಾಡಿಲ್ಲ‌, ಅದು ಯಾರ ಹಣ ಎಂಬುದು ತನಿಖೆಯಾಗಬೇಕು.‌ ಅದರ ಹಿಂದೆ ಯಾರಿದ್ದಾರೆ? ಎಂಬುದು ಕೂಡಾ ಪತ್ತೆಯಾಗಬೇಕು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನನ್ನ ಜೊತೆ ಫೋಟೋ ತೆಗೆಸಿಕೊಂಡಿರೋದನ್ನು ಬಿಟ್ಟರೆ, ಬೇರೆ ನಂಟು ಇಲ್ಲ. ಅವರು ನಮ್ಮ ಕಾರ್ಯಕರ್ತರಲ್ಲ, ನಮ್ಮ ಕಾರ್ಯಕರ್ತರ ಬಳಗ ನನಗೆ ಚೆನ್ನಾಗಿ ಗೊತ್ತಿದೆ. ನನಗೂ ಆ ವ್ಯಕ್ತಿಗೂ ಹಣಕಾಸು ವ್ಯವಹಾರದ ವಿಚಾರದಲ್ಲಿ ಯಾವುದೇ ರೀತಿಯ ಸಂಬಂಧ ಇಲ್ಲ. ಪ್ರಕರಣದ ತನಿಖೆ ಸಮಗ್ರವಾಗಿ ಆಗಬೇಕು ಎಂದು ಲಿಂಬಾವಳಿ ಒತ್ತಾಯಿಸಿದ್ದಾರೆ.

Intro:ಬೆಂಗಳೂರು: ಆದಾಯ ತೆರಿಗೆ ಇಲಾಖೆಯ ದಾಳಿಗೆ ಒಳಗಾಗಿರುವ ಮಹಾದೇವಪುರ ಕ್ಷೇತ್ರದ ಆಟೋ ಚಾಲಕ ಸುಬ್ರಮಣಿಗೂ ತಮಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ.Body:ವೀಡಿಯೋ ಸಂದೇಶದ ಮೂಲಕ ಸ್ಪಷ್ಟೀಕರಣ ನೀಡಿದ ಅರವಿಂದ ಲಿಂಬಾವಳಿ,ಆಟೋ ಡ್ರೈವರ್‌ ಮನೆ ಮೇಲೆ ಐಟಿ ದಾಳಿ ವಿಚಾರ ಮಾಹಿತಿಯನ್ನು ನಾನು ಮಾಧ್ಯಮದಲ್ಲಿ ನೋಡಿ ತಿಳಿದಿದ್ದೇನೆ, ಆತ ನನ್ನ ಕ್ಲೋಸ್ ಸರ್ಕಲ್ ನಲ್ಲಿ ಇರುವವನು ಎಂಬ ಮಾಹಿತಿ ಮಾಧ್ಯಮದಲ್ಲಿ ಪ್ರಸಾರವಾಗಿದೆ ಇದು ಸತ್ಯಕ್ಕೆ ದೂರು ಈ ಆರೋಪವನ್ನು ನಾನು ಸ್ಪಷ್ಟವಾಗಿ ಅಲ್ಲಗಳೆಯುತ್ತೇನೆ ಎಂದಿದ್ದಾರೆ.

ಇಂತಹ ವ್ಯವಹಾರ ನಾನು ನನ್ನ ಜೀವನದಲ್ಲಿ ಮಾಡಿಲ್ಲ‌ ಅದು ಯಾರ ಹಣ ಎಂಬುದು ತನಿಖೆಯಾಗಬೇಕು‌ ಅದರ ಹಿಂದೆ ಯಾರಿದ್ದಾರೆ ಎಂಬುದು ಕೂಡಾ ಪತ್ತೆಯಾಗಬೇಕು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನನ್ನ ಜೊತೆ ಫೋಟೋ ತೆಗೆಸಿಕೊಂಡಿರೋದು ಬಿಟ್ಟರೆ ಬೇರೆ ನಂಟು ಇಲ್ಲ.ಅವರು ನಮ್ಮ ಕಾರ್ಯಕರ್ತರಲ್ಲ ನಮ್ಮ ಕಾರ್ಯಕರ್ತರ ಬಳಗ ನನಗೆ ಚೆನ್ನಾಗಿ ಗೊತ್ತಿದೆ ನನಗೂ ಆ ವ್ಯಕ್ತಿಗೂ ಹಣಕಾಸಿನ ವಿಚಾರದಲ್ಲಿ, ವ್ಯವಹಾರದ ವಿಚಾರದಲ್ಲಿ ಯಾವುದೇ ರೀತಿಯ ಸಂಬಂಧ ಇಲ್ಲ ಪ್ರಕರಣದ ತನಿಖೆ ಸಮಗ್ರವಾಗಿ ಆಗಬೇಕು ಎಂದು ಒತ್ತಾಯಿಸಿದ್ದಾರೆ.
Conclusion:-ಪ್ರಶಾಂತ್ ಕುಮಾರ್

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.