ETV Bharat / state

ಪೊಲೀಸರ ಜೊತೆಗೆ ಅಗ್ನಿಶಾಮಕ, ಕಾರಾಗೃಹ ಇಲಾಖೆ ಸಿಬ್ಬಂದಿಗೂ ಸಿಹಿ ಸುದ್ದಿ ನೀಡುತ್ತಾ ರಾಜ್ಯ ಸರ್ಕಾರ?

ಗೃಹ ಸಚಿವರು ಸೂಚಿಸಿರುವ ಹಿನ್ನೆಲೆಯಲ್ಲಿ ಸಮಗ್ರ ವರದಿಗಳೊಂದಿಗೆ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಘವೇಂದ್ರ ಔರಾದ್ಕರ್, ಇಂದು ಸಂಜೆ ಗೃಹ ಸಚಿವರನ್ನ ಭೇಟಿಯಾಗಲಿದ್ದಾರೆ‌. ಗೃಹ ಸಚಿವರು ಹೇಳಿದ ತಕ್ಷಣವೇ ರಾಘವೇಂದ್ರ ಔರಾದ್ಕರ್ ರಾಜ್ಯ ಅಗ್ನಿಶಾಮಕ & ತುರ್ತು ಸೇವೆ ಇಲಾಖೆಯ ಎಡಿಜಿಪಿ ಸುನಿಲ್ ಅಗರ್ವಾಲ್ ಹಾಗೂ ರಾಜ್ಯ ಕಾರಾಗೃಹ ಇಲಾಖೆಯ ಎಡಿಜಿಪಿ ಎನ್.ಎಸ್.ಮೇಘರಿಕ್ ಜೊತೆ ಆಯಾ ಇಲಾಖೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಿದ್ದಾರೆ‌.

ವಿವಿಧ ಇಲಾಖೆ ಇಲಾಖೆ ಸಿಬ್ಬಂದಿಗೆ ಸಿಹಿ ನೀಡುತ್ತಾ ರಾಜ್ಯ ಸರ್ಕಾರ?
author img

By

Published : Jun 14, 2019, 4:13 PM IST

ಬೆಂಗಳೂರು: ಹಲವು ವರ್ಷಗಳಿಂದ ರಾಜ್ಯ ಪೊಲೀಸರ ವೇತನ ಹೆಚ್ಚಳ ಕುರಿತ ಬೇಡಿಕೆ ಸಂಬಂಧ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ನೀಡಿರುವ ಅಂಶಗಳ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಎಲ್ಲವೂ ಅಂದುಕೊಂಡಂತೆ ಆದರೆ ರಾಜ್ಯ ಪೊಲೀಸ್ ಇಲಾಖೆಯ ಜೊತೆಗೆ ಅಗ್ನಿಶಾಮಕ ಹಾಗೂ ಕಾರಾಗೃಹ ಇಲಾಖೆ ಸಿಬ್ಬಂದಿಗೂ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ. ಕಾರಾಗೃಹ ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ವೇತನ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ವರದಿ ನೀಡುವ ಬಗ್ಗೆ ಖುದ್ದು ಗೃಹ ಸಚಿವ ಎಂ.ಬಿ.ಪಾಟೀಲ್, ರಾಘವೇಂದ್ರ ಔರಾದ್ಕರ್​​ಗೆ ಸೂಚಿಸಿದ್ದಾರೆ ಎಂದು ಅಗ್ನಿಶಾಮಕ ಇಲಾಖೆಯ ಎಡಿಜಿಪಿ ಸುನಿಲ್ ಅಗರವಾಲ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಗೃಹ ಸಚಿವರು ಸೂಚಿಸಿರುವ ಹಿನ್ನೆಲೆಯಲ್ಲಿ ಸಮಗ್ರ ವರದಿಗಳೊಂದಿಗೆ ರಾಜ್ಯ ಪೊಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಘವೇಂದ್ರ ಔರಾದ್ಕರ್, ಇಂದು ಸಂಜೆ ಗೃಹ ಸಚಿವರನ್ನ ಭೇಟಿಯಾಗಲಿದ್ದಾರೆ‌. ಗೃಹ ಸಚಿವರು ಹೇಳಿದ ತಕ್ಷಣವೇ ರಾಘವೇಂದ್ರ ಔರಾದ್ಕರ್ ರಾಜ್ಯ ಅಗ್ನಿಶಾಮಕ & ತುರ್ತು ಸೇವೆ ಇಲಾಖೆಯ ಎಡಿಜಿಪಿ ಸುನಿಲ್ ಅಗರ್ವಾಲ್ ಹಾಗೂ ರಾಜ್ಯ ಕಾರಾಗೃಹ ಇಲಾಖೆಯ ಎಡಿಜಿಪಿ ಎನ್.ಎಸ್.ಮೇಘರಿಕ್ ಜೊತೆ ಆಯಾ ಇಲಾಖೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಿದ್ದಾರೆ‌.

ಎರಡೂ ಇಲಾಖೆಗಳು ನಾವು ಸಹ ಗೃಹ ಸಚಿವರ ಕಾರ್ಯ ವ್ಯಾಪ್ತಿಯಲ್ಲೇ ಒಳಗೊಂಡಿದ್ದು, ಖಾಕಿಧಾರಿಗಳಾದ ನಾವೂ ಸಹ ರಿಸ್ಕ್ ಎದುರಿಸಿ ಕೆಲಸ ಮಾಡೋಣ. ನಮಗೂ ಸಹ ಔರಾದ್ಕರ್ ವರದಿಯಲ್ಲಿರುವ ಅಂಶಗಳು ಅನ್ವಯವಾಗಬೇಕು ಎಂದು ಬೇಡಿಕೆಯಿಟ್ಟಿವೆ.

ಪೊಲೀಸ್ ಇಲಾಖೆಯ ಓರ್ವ ಕಾನ್​ಸ್ಟೇಬಲ್ ಪಡೆಯುವ ವೇತನ ಶ್ರೇಣಿ, ಅಗ್ನಿಶಾಮಕದ ಫೈರ್​ಮ್ಯಾನ್​ಗೆ ಇದೆ. ಅದೇ ರೀತಿ ಇನ್ಸ್​ಪೆಕ್ಟರ್​ಗೆ ಇರುವ ವೇತನ ಶ್ರೇಣಿ ಅಗ್ನಿಶಾಮಕದ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗೆ (ಡಿಎಫ್ಒ) ಇದೆ. ಆದ್ದರಿಂದ ತಾರತಮ್ಯ ಮಾಡದೆ ನಮಗೂ ವೇತನ ಶ್ರೇಣಿಯಲ್ಲಿ ಹೆಚ್ಚುವರಿಯಾಗಬೇಕಿದೆ ಎಂದಿದ್ದಾರೆ.

ವಿವಿಧ ಇಲಾಖೆ ಸಿಬ್ಬಂದಿಗೆ ಸಿಹಿ ನೀಡುತ್ತಾ ರಾಜ್ಯ ಸರ್ಕಾರ?

ಅಗ್ನಿಶಾಮಕ ಇಲಾಖೆಯಲ್ಲಿ ಸುಮಾರು 7ರಿಂದ 8 ಸಾವಿರ ಹಾಗೂ ಕಾರಾಗೃಹ ಇಲಾಖೆಯ ಸುಮಾರು 3700 ಸಿಬ್ಬಂದಿಯ ಬೇಡಿಕೆಗಳ ಸಮಗ್ರ ವರದಿ ಇವತ್ತು ಗೃಹ ಸಚಿವರ ಕೈ ಸೇರಲಿದ್ದು, ವರದಿಯಲ್ಲಿರುವ ಅಂಶಗಳನ್ನ ಜಾರಿಗೊಳಿಸುವ ಕುರಿತು ಮಾತುಕತೆ ನಡೆಯಲಿದೆ.

ಔರಾದ್ಕರ್ ವರದಿ ಏನು ಹೇಳಿದೆ...

ಪೊಲೀಸರ ವೇತನ ಪರಿಷ್ಕರಣೆ ಹಾಗೂ ಬೇಡಿಕೆಗಳನ್ನ ಸಲ್ಲಿಸಲು 2016ರಲ್ಲಿ ಅಂದಿನ ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿತ್ತು. ಆ ಸಮಿತಿ ಪಂಜಾಬ್, ತೆಲಂಗಾಣ, ದೆಹಲಿ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅಲ್ಲಿನ ಸಿಬ್ಬಂದಿಯ ವೇತನ ಹಾಗೂ ಭತ್ಯೆಯ ಕುರಿತು ಅಧ್ಯಯನ ನಡೆಸಿ, ಇಲ್ಲಿಯ ಸಿಬ್ಬಂದಿ ವೇತನವನ್ನ ಶೇ. 30 - 35ರಿಂದ ಹೆಚ್ಚಳಕ್ಕೆ, ಅಂದರೆ ಇಲ್ಲಿನ ಸಾಮಾನ್ಯ ಕಾನ್ಸ್​ಟೇಬಲ್ ಭತ್ಯೆ ಹೊರತುಪಡಿಸಿ ಪಡೆಯುತ್ತಿರುವ 11,600 ರೂ. ಮೂಲ ವೇತನವನ್ನ 18,600 ರೂ.ಗೆ ಹೆಚ್ಚಿಸಲು ಕೇಳಿತ್ತು. ಜೊತೆಗೆ ತಿಂಗಳಿಗೆ 2000 ರೂ. ಭತ್ಯೆ ನೀಡುವಂತೆ ವರದಿ ಸಲ್ಲಿಸಲಾಗಿತ್ತು. ಪ್ರಮುಖವಾಗಿ ಇಲಾಖೆಗೆ ಸೇರಿದ ಬಳಿಕ 40% ಸಿಬ್ಬಂದಿ ವೇತನ ಕಡಿಮೆ ಎಂದು ಕೆಲಸ ತ್ಯಜಿಸುತ್ತಿರುವ ಬಗ್ಗೆಯೂ ಉಲ್ಲೇಖಿಸಿ ವರದಿ ನೀಡಿತ್ತು.

ಇವತ್ತು ಈ ಎಲ್ಲಾ ಅಂಶಗಳ ಬಗ್ಗೆ ಮತ್ತೆ ಚರ್ಚೆಯಾಗಲಿದ್ದು, ಆ ಮೂಲಕ ವರದಿ ಸಲ್ಲಿಕೆಯಾಗಿ ಮೂರು ವರ್ಷಗಳ ಬಳಿಕ ಪೊಲೀಸ್​ ಇಲಾಖೆ ಜೊತೆಗೆ ಇನ್ನೆರಡು ಇಲಾಖೆಗಳಿಗೂ ಸರ್ಕಾರ ಸಿಹಿ ಸುದ್ದಿ ನೀಡಲಿದೆಯಾ ಎಂದು ಕಾದು ನೋಡಬೇಕಿದೆ.

Intro:Body:ಪೋಲೀಸ್ ಜೊತೆಗೆ ಅಗ್ನಿಶಾಮಕ ಹಾಗೂ ಕಾರಾಗೃಹ ಇಲಾಖೆ ಸಿಬ್ಬಂದಿಗಳಿಗೂ ಸಿಹಿ ನೀಡುತ್ತಾ ರಾಜ್ಯ ಸರ್ಕಾರ?

ಬೆಂಗಳೂರು: ಹಲವು ವರ್ಷಗಳಿಂದ ರಾಜ್ಯ ಪೊಲೀಸರ ವೇತನ ಹೆಚ್ಚಳ ಕುರಿತು ಬೇಡಿಕೆ ಸಂಬಂಧ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾಧಕರ್ ನೇತೃತ್ವದ ಸಮಿತಿ ನೀಡಿರುವ ಅಂಶಗಳ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ರಾಜ್ಯ ಪೋಲೀಸ್ ಇಲಾಖೆಯ ಜೊತೆಗೆ ಅಗ್ನಿಶಾಮಕ ಹಾಗೂ ಕಾರಾಗೃಹ ಇಲಾಖೆ ಸಿಬ್ಬಂದಿಗಳಿಗೆ ಸಿಹಿ ಸುದ್ದಿ ಸಿಗುವ ಸಾಧ್ಯತೆಯಿದೆ.
ಕಾರಾಗೃಹ ಹಾಗೂ ಅಗ್ನಿಶಾಮಕ ಇಲಾಖೆಗಳ ಸಿಬ್ಬಂದಿ ವೇತನ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ವರದಿ ನೀಡುವ ಬಗ್ಗೆ ಖುದ್ದು ಗೃಹ ಸಚಿವ ಎಂ.ಬಿ.ಪಾಟೀಲ್, ರಾಘವೇಂದ್ರ ಔರಾಧಕರ್ ಗೆ ಸೂಚಿಸಿದ್ದಾರೆ ಎಂದು ಅಗ್ನಿಶಾಮಕ ಇಲಾಖೆಯ ಎಡಿಜಿಪಿ ಸುನಿಲ್ ಅಗರವಾಲ್ ಈಟಿವಿ ಭಾರತ್ ತಿಳಿಸಿದ್ದಾರೆ.

ಗೃಹ ಸಚಿವರು ಸೂಚಿಸಿರುವ ಹಿನ್ನೆಲೆಯಲ್ಲಿ, ಇವತ್ತು ಸಮಗ್ರ ವರದಿಗಳೊಂದಿಗೆ ರಾಜ್ಯ ಪೋಲೀಸ್ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಘವೇಂದ್ರ ಔರಾದ್ಕರ್ ಇಂದು ಸಂಜೆ ಗೃಹ ಸಚಿವರನ್ನ ಭೇಟಿಯಾಗಲಿದ್ದಾರೆ‌. ಗೃಹ ಸಚಿವರು ಹೇಳಿದ ತಕ್ಷಣವೇ ರಾಘವೇಂದ್ರ ಔರಾದ್ಕರ್ ರಾಜ್ಯ ಅಗ್ನಿಶಾಮಕ & ತುರ್ತು ಸೇವೆ ಇಲಾಖೆಯ ಎಡಿಜಿಪಿ ಸುನಿಲ್ ಅಗರ್ವಾಲ್ ಹಾಗೂ ರಾಜ್ಯ ಕಾರಾಗೃಹ ಇಲಾಖೆಯ ಎಡಿಜಿಪಿ ಎನ್ ಎಸ್ ಮೇಘರೀಕ್ ಜೊತೆ ಆಯಾ ಇಲಾಖೆಗಳ ಬೇಡಿಕೆಗಳ ಬಗ್ಗೆ ಚರ್ಚಿಸಿದ್ದಾರೆ‌.
ಎರಡೂ ಇಲಾಖೆಗಳು ನಾವೂ ಸಹ ಗೃಹ ಸಚಿವರ ಕಾರ್ಯವ್ಯಾಪ್ತಿಯಲ್ಲೇ ಒಳಗೊಂಡಿದ್ದು ಖಾಕಿಧಾರಿಗಳಾದ ನಾವೂ ಸಹ ರಿಸ್ಕ್ ಎದುರಿಸಿ ಕೆಲಸ ಮಾಡುವ ನಮಗೂ ಸಹ ಔರಾದ್ಕರ್ ವರದಿಯಲ್ಲಿರುವ ಅಂಶಗಳು ಅನ್ವಯವಾಗಬೇಕು ಎಂದು ಬೇಡಿಕೆಯಿಟ್ಟಿವೆ.

ಪೋಲೀಸ್ ಇಲಾಖೆಯ ಓರ್ವ ಕಾನ್ ಸ್ಟೇಬಲ್ ಪಡೆಯುವ ವೇತನ ಶ್ರೇಣಿ ಅಗ್ನಿಶಾಮಕದ ಫೈರ್ ಮ್ಯಾನ್ ಗೆ ಇದೆ. ಅದೇ ರೀತಿ ಇನ್ ಸ್ಪೆಕ್ಟರ್ ಇರುವ ವೇತನ ಶ್ರೇಣಿ ಅಗ್ನಿಶಾಮಕದ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗೆ (ಡಿಎಫ್ಒ) ಇದೆ. ಆದ್ದರಿಂದ ತಾರತಮ್ಯ ಮಾಡದೆ ನಮಗೂ ವೇತನ ಶ್ರೇಣಿಯಲ್ಲಿ ಹೆಚ್ಚುವರಿಯಾಗಬೇಕಿದೆ ಎಂದಿದ್ದಾರೆ.
ಅಗ್ನಿಶಾಮಕ ಇಲಾಖೆಯಲ್ಲಿ ಸುಮಾರು 7 ರಿಂದ 8 ಸಾವಿರ ಹಾಗೂ ಕಾರಾಗೃಹ ಇಲಾಖೆಯ ಸುಮಾರು 3700 ಸಿಬ್ಬಂದಿಗಳ ಬೇಡಿಕೆಗಳ ಸಮಗ್ರ ವರದಿ ಇವತ್ತು ಗೃಹ ಸಚಿವರ ಕೈ ಸೇರಲಿದ್ದು ವರದಿಯಲ್ಲಿರುವ ಅಂಶಗಳನ್ನ ಜಾರಿಗೊಳಿಸುವ ಕುರಿತು ಮಾತುಕತೆ ನೆಡೆಯಲಿದೆ.

ಔರಾದ್ಕರ್ ವರದಿ ಏನು ಹೇಳಿದೆ

ಪೋಲೀಸ್ ವೇತನ ಪರಿಷ್ಕರಣೆ ಹಾಗೂ ಬೇಡಿಕೆಗಳನ್ನ ಸಲ್ಲಿಸಲು 2016 ರಲ್ಲಿ ಅಂದಿನ ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತ್ರತ್ವದಲ್ಲಿ ಸಮಿತಿ ರಚನೆಯಾಗಿತ್ತು. ಆ ಸಮಿತಿ ಪಂಜಾಬ್,ತೆಲಂಗಾಣ,ದೆಹಲಿ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅಲ್ಲಿನ ಸಿಬ್ಬಂದಿಗಳ ವೇತನ ಹಾಗೂ ಭತ್ಯೆಯ ಕುರಿತು ಅಧ್ಯಯನ ನಡೆಸಿ ಇಲ್ಲಿ ಸಿಬ್ಬಂದಿಗಳ ವೇತನವನ್ನ ಶೇ.30 - 35ರಿಂದ ವೇತನ ಹೆಚ್ಚಳಕ್ಕೆ ಅಂದರೆ ಇಲ್ಲಿನ ಸಾಮಾನ್ಯ ಕಾನ್ ಸ್ಟೇಬಲ್ ಭತ್ಯೆ ಹೊರತುಪಡಿಸಿ ಪಡೆಯುತ್ತಿರುವ 11,600 ರೂ ಮೂಲ ವೇತನವನ್ನ 18,600 ರೂಗೆ ಹೆಚ್ಚಿಸಲು ಕೇಳಿತ್ತು.
ಜೊತೆಗೆ ತಿಂಗಳಿಗೆ 2000 ರೂ ಭತ್ಯೆ ನೀಡುವಂತೆ ವರದಿ ಸಲ್ಲಿಸಲಾಗಿತ್ತು. ಪ್ರಮುಖವಾಗಿ ಇಲಾಖೆ ಸೇರಿದ ಬಳಿಕ 40% ಸಿಬ್ಬಂದಿ ವೇತನ ಕಡಿಮೆ ಎಂದು ಕೆಲಸ ತ್ಯಜಿಸುತ್ತಿರುವ ಬಗ್ಗೆಯೂ ಉಲ್ಲೇಖಿಸಿ ವರದಿ ನೀಡಿತ್ತು.
ಇವತ್ತು ಈ ಎಲ್ಲಾ ಅಂಶಗಳ ಬಗ್ಗೆ ಮತ್ತೆ ಚರ್ಚೆಯಾಗಲಿದ್ದು ಆ ಮೂಲಕ ವರದಿ ಸಲ್ಲಿಕೆಯಾಗಿ ಮೂರು ವರ್ಷಗಳ ಬಳಿಕ ಪೋಲಿಸ್ ಜೊತೆಗೆ ಇನ್ನೆರೆಡು ಇಲಾಖೆಗಳಿಗೂ ಸರ್ಕಾರ ಸಿಹಿ ಸುದ್ದಿ ನೀಡಲಿದೆಯಾ ಎಂದು ಕಾದು ನೋಡಬೇಕಿದೆ.

ವಿಶೇಷ ವರದಿ :- ಭರತ್ ರಾವ್Conclusion:ಮೊಜೊದಲ್ಲಿ ಬೈಟ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.