ಬೆಂಗಳೂರು: ಗಾರ್ಡನ್ ಸಿಟಿಯ ಗಾರ್ಬೇಜ್ ಸಮಸ್ಯೆ ಈಗ ಎಷ್ಟರ ಮಟ್ಟಿಗೆ ಮಿತಿಮೀರಿದೆ ಎಂದ್ರೆ ಮೆಟ್ರೋ ಮಾರ್ಗದಡಿಯೂ ಹೊಸ ಹೊಸ ಬ್ಲಾಕ್ ಸ್ಪಾರ್ಟ್ಗಳು ನಿರ್ಮಾಣವಾಗ್ತಿವೆ.
ಹೌದು, ಖಾಲಿ ಸೈಟ್, ರಾಜಕಾಲುವೆ, ರಸ್ತೆ ಮಾರ್ಗಗಳಲ್ಲಿ ಕಸ ಎಸೆದು ಬ್ಲಾಕ್ ಸ್ಪಾಟ್ ಮಾಡ್ತಿದ್ದ ಬೆಂಗಳೂರು ನಾಗರಿಕರು ಮೆಟ್ರೋ ಮಾರ್ಗದಡಿಯೂ ಕಸ ಎಸೆಯಲು ಆರಂಭಿಸಿದಾರೆ. ಇದು ಬಿಬಿಎಂಪಿಯಷ್ಟೇ ಅಲ್ಲ ಬಿಎಂಆರ್ಸಿಎಲ್ ತನ್ನ ಸ್ಥಳವನ್ನು ಸ್ವಚ್ಛತೆಯಲ್ಲಿ ಕಾಪಾಡುವಲ್ಲಿಯೂ ಕೂಡ ವಿಫಲವಾದಂತಾಗಿದೆ.
ಹಲಸೂರು ಬಳಿಯ ಸಿಎಂ ಹೆಚ್ ರಸ್ತೆಯಲ್ಲಿರುವ ಮೆಟ್ರೋ ಮಾರ್ಗದಡಿ, ಮೆಟ್ರೋ ಕಂಬದ ಬಳಿ ಹಸಿರಸಿರು ಗಿಡಗಳು ಇರಬೇಕಾದ ಜಾಗದಲ್ಲಿ ರಾಶಿ ರಾಶಿ ಕಸ ಬಿದ್ದಿವೆ. ಹಲವೆಡೆ ಗುತ್ತಿಗೆದಾರರ ಪ್ರತಿಭಟನೆಗಳಿಂದ ಮನೆಗಳಲ್ಲಿಯೇ ಕಸ ಉಳಿಯುತ್ತಿದೆ. ಆದ್ರೆ ಮನೆಗಳಲ್ಲಿ ಕಸ ಇಟ್ಟುಕೊಳ್ಳದ ಜನ, ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಇದೀಗ ಸಿಎಂಹೆಚ್ ಮೆಟ್ರೋ ಮಾರ್ಗದಡಿಯೂ ಹೊಸ ಬ್ಲಾಕ್ ಸ್ಪಾಟ್ ನಿರ್ಮಾಣವಾಗಿದೆ.
ಹಲಸೂರಿನ ಲಕ್ಷ್ಮಿಪಟ್ನಂ ಸ್ಥಳದ ಜನರು ಬಿಎಂಆರ್ಸಿಎಲ್ ಹಾಗೂ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿಗೆ ಶಾಪ ಹಾಕುತ್ತಿದ್ದಾರೆ. ನಗರದ ಮಧ್ಯೆಯೇ ಕಸ, ವಾಸನೆಯಿಂದ ಸುತ್ತಲಿನ ವಾಣಿಜ್ಯ ಕಟ್ಟಡಗಳಲ್ಲಿ ಇರೋಕಾಗದೆ ಆಡಳಿತಕ್ಕೆ ಛೀಮಾರಿ ಹಾಕುತ್ತಿದ್ದಾರೆ. ಅಲ್ಲದೆ ನಿಯಮದಂತೆ, ಬಿಎಂಆರ್ಸಿಎಲ್ ಕೂಡ ತನ್ನ ಕರ್ತವ್ಯದಲ್ಲಿ ವಿಫಲವಾಗಿದೆ.