ಆನೇಕಲ್: ಹಳೆ, ಕಬ್ಬಿಣ, ಪೇಪರ್ ವಿಲೇವಾರಿ ಮಾಡುವ ದಾಸ್ತಾನುಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೆಲ ಗಂಟೆಗಳಲ್ಲೇ ದಾಸ್ತಾನು ಪೂರ್ತಿ ಸುಟ್ಟು ಬೂದಿಯಾಗಿರುವ ಘಟನೆ ತಮಿಳುನಾಡಿನ ತಳಿ ಬಳಿಯ ಮದಗೊಂಡಪಲ್ಲಿಯಲ್ಲಿನ ಗೋಡೌನ್ನಲ್ಲಿ ನಡೆದಿದೆ.
ಹೊಸೂರಿಂದ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕದಳ ಎಷ್ಟೇ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿ ತಹಬಂದಿಗೆ ಬಾರದೆ ಬಿಸಿಲಿನ ತಾಪಕ್ಕೆ ಹೆಚ್ಚುತ್ತಾ ಹೋಗಿ ಸುತ್ತಲಿನ ಕಸದ ರಾಶಿಗೂ ವಿಸ್ತರಿಸಿದೆ. ತಳಿ ಪೊಲೀಸರೂ ಸ್ಥಳಕ್ಕೆ ಬಂದು ಸಾರ್ವಜನಿಕರ ನೆರವಿನಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಸುತ್ತಲ ಗ್ರಾಮಗಳಿಂದ ಕಲೆಹಾಕಿದ್ದ ಚಿಂದಿ-ಪ್ಲಾಸ್ಟಿಕ್, ಪೇಪರ್ ರದ್ದಿ ಪುಸ್ತಕಗಳು ಸುಟ್ಟು ಭಸ್ಮಗೊಂಡಿದ್ದು, ಬಡ ವ್ಯಾಪಾರಿ ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.