ETV Bharat / state

ಕಾಡಿನಿಂದ ನಾಡಿನತ್ತ ಮುಖ ಮಾಡಿದ ಗಜಪಡೆ... ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

author img

By

Published : Apr 20, 2019, 11:11 PM IST

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿಯ ಅತ್ತಿಮೊಗಂ, ಗಟ್ಟಪಲ್ಲಿ ಸುತ್ತ ಹತ್ತಾನೆಗಳು ಕಾಣಿಸಿಕೊಂಡಿವೆ. ಚುನಾವಣೆಯ ಗುಂಗಿನಲ್ಲಿದ್ದ ಗ್ರಾಮೀಣ ಜನರಿಗೆ ಗಜಪಡೆ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡಿದ್ದು ಆತಂಕ ಹೆಚ್ಚಾಗುವಂತೆ ಮಾಡಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿ ಪ್ರತ್ಯಕ್ಷವಾದ ಹತ್ತಾನೆಗಳು

ಬೆಂಗಳೂರು: ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿಯ ಅತ್ತಿಮೊಗಂ, ಗಟ್ಟಪಲ್ಲಿ ಸುತ್ತ ಹತ್ತಾನೆಗಳು ಕಾಣಿಸಿಕೊಂಡಿವೆ.

ಬೇಸಿಗೆ ಆರಂಭಗೊಂಡು ಕಾಡಿನಲ್ಲೂ ನೀರಿಗೆ, ಮೇವಿಗೆ ಹಾಹಾಕಾರವೆದ್ದಿದೆ. ಸುಡು ಬಿಸಿಲಿಗೆ ಹಚ್ಚ ಹಸಿರಿನ ಗಿಡ-ಮರಗಳು ಒಣಗಿ ಹೋಗಿದ್ದು, ಕಾದ ಬಾಣಲೆಯಂತಾಗಿ ಅಂತರ್ಜಲ ಬತ್ತಿ ಪಾತಾಳಕ್ಕಿಳಿದಿದೆ. ಇದ್ದ ಕೆರೆ ಕುಂಟೆಗಳು ಕೂಡ ಬಿರುಕು ಬಿಟ್ಟು ಜೀವಜಲವೇ ಕಾಣದಾಗಿದೆ.

ಇನ್ನು ಸೂಳಗಿರಿ ಅರಣ್ಯ ಸಿಬ್ಬಂದಿ ಚುನಾವಣಾ ಕಾವಿನಿಂದ ಹೊರಗೆ ಬರುವ ಮುನ್ನವೇ ಆನೆ ಪಡೆಯ ಪ್ರತ್ಯಕ್ಷ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಒಟ್ಟಾರೆ ನಾಡಿನಲ್ಲಿ ನಡೆದ ಚುನಾವಣಾ ಬಿಸಿ ಮುಗಿಸಿಕೊಂಡ ಅರಣ್ಯ ಸಿಬ್ಬಂದಿಗೆ ಗಜ ಪಡೆ ಆಗಮನದಿಂದ ಮತ್ತೆ ತಲೆಬಿಸಿ ಆಗಿದೆ.

Intro:ಹೆಚ್ಚು ನೀರು ಬೇಡುವ ಆನೆ ಪಡೆಗೆ ದಾಹ ತೀರದೆ ನಾಡಿನತ್ತ ಮುಖ ಮಾಡಿವೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿಯ ಅತ್ತಿಮೊಗಂ-ಗಟ್ಟಪಲ್ಲಿ ಸುತ್ತ ಹತ್ತಾನೆಗಳು ಕಾಣಿಸಿಕೊಂಡಿವೆ. Body:
ಬೇಸಿಗೆ ಆರಂಭಗೊಂಡು ಕಾಡಿನಲ್ಲೂ ನೀರಿಗೆ-ಮೇವಿಗೆ ಹಾಹಾಕಾರವೆದ್ದಿದೆ. ಸುಡು ಬಿಸಿಲಿಗೆ ಹಚ್ಚಹಸಿರಿನ ಎಲೆ-ಹುಲ್ಲು ಗಿಡ-ಮರಗಳು ಒಣಗಿ ಸುರುಗಾಗಿದೆ. ಇಳೆ ಕಾದ ಬಾಣಲೆಯಂತಾಗಿ ಅಂತರ್ಜಲ ಬತ್ತಿ ಪಾತಾಳಕ್ಕಿಳಿದಿದೆ. ಇದ್ದ ಕೆರೆ ಕುಂಟೆಗಳು ಕಾದ ಬಾಣಲೆಗಳಾಗಿ ತಳ ಬಿರುಕು ಬಿಟ್ಟು ಜೀವಜಲವೇ ಕಾಣದಾಗಿದೆ. ಒಟ್ಟಿನಲ್ಲಿ ಜೀವಿಗಳ ದಾಹಕ್ಕೆ ಕಾಡಿನಲ್ಲಿ ತತ್ತರಿಸಿವೆ. ಹೀಗಾಗಿ ಜೀವರಾಶಿಗೆ ಕಾಡಿನಲ್ಲಿ ನೀರಿಗೆ ಸೊರಗಿವೆ. ಅದರಲ್ಲೂ ಚರ್ಮ ಸುಡುವ ಹಾಗು ಹೆಚ್ಚು ನೀರು ಬೇಡುವ ಆನೆ ಪಡೆಗೆ ದಾಹ ತೀರದೆ ನಾಡಿನತ್ತ ಮುಖ ಮಾಡಿವೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಸೂಳಗಿರಿ ಬಳಿಯ ಅತ್ತಿಮೊಗಂ-ಗಟ್ಟಪಲ್ಲಿ ಸುತ್ತ ಹತ್ತಾನೆಗಳು ಕಾಣಿಸಿಕೊಂಡಿವೆ. ನಿನ್ನೆಯಷ್ಟೇ ಮತದ ಗುಂಗಿನಲ್ಲಿದ್ದ ಗ್ರಾಮೀಣ ಜನೆರಿಗೆ ಗಜಪಡೆ ಇದ್ದಕ್ಕಿದ್ದ ಹಾಗೆ ಕಾಣಿಸಿಕೊಂಡಿದ್ದು ಮತ್ತೆ ಕಾಡು-ನಾಡೆಂಬ ಕಲ್ಪನೆಯತ್ತ ಚಿತ್ತ ಹೊರಳಿಸಿದಂತಾಗಿದೆ. ಇನ್ನು ಸೂಳಗಿರಿ ಅರಣ್ಯ ಸಿಬ್ಬಂದಿ ಚುನಾವಣಾ ಕಾವಿನಿಂದ ಹೊರಗೆ ಬರುವ ಮುನ್ನವೇ ಆನೆ ಪಡೆಯ ಪ್ರತ್ಯಕ್ಷ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಇನ್ನು ರೈತರು ಬೆಳೆದ ಫಸಲು ಮನೆಗೆ ಸೇರಿಸಿಕೊಂಡಿದ್ದರೂ. ಹೊಲಗದ್ದೆಗಳಲ್ಲಿನ ಒಣ ಹುಲ್ಲಿನ ಮೆದೆ, ತೋಟದ ಬೆಳೆಗಳಿಗೆ ಕಂಟಕ ತರುವ ಆನೆ ಅಬ್ಬರಕ್ಕೆ ಭೀತಿಗೊಂಡಿದ್ದಾರೆ. ಕೆಲವೊಮ್ಮೆ ನೀರಿನ ಸೆಲೆಯ ವಾಸನೆಗೆ ತೋಟದ ಕೊಳವೆ ಬಾವಿಗಳ ಪೈಪ್ಗಳನ್ನು ಕಿತ್ತೆಸೆಯುವ ಆನೆಯ ಕಾಟಕ್ಕೆ ಬೆಳೆಗಾರ ಆತಂಕ ವ್ಯಕ್ತಪಡಿಸುತ್ತಿದ್ದಾನೆ.

Conclusion:ಒಟ್ಟಾರೆ ನಾಡಿನಲ್ಲಿ ನಡೆದ ಚುನಾವಣಾ ಬಿಸಿ ಮುಗಿಸಿಕೊಂಡ ಅರಣ್ಯ ಸಿಬ್ಬಂದಿಗೆ ಗಜ ಪಡೆ ಆಗಮನದಿಂದ ಮತ್ತೆ ಜನ-ಆನೆಗಳ ಸಂಘರ್ಷ ತಲೆಬಿಸಿ ತಂದೊಡ್ಡಿದೆ. ಉಪದ್ರ ಕೊಡದೆ ನಾಡಿಂದ ಕಾಡಿಗೆ ಗಜಪಡೆ ಡ್ರೈವ್ ಮಾಡುವಲ್ಲಿ ಅರಣ್ಯ ಸಿಬ್ಬಂದಿ ನಿರತರಾಗಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.