ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ನಾಮಿನೇಷನ್ ಸಲ್ಲಿಸುವ ವೇಳೆ ಜೆಡಿಎಸ್ ಮುಖಂಡರು ಹಾಜರಾಗಿದ್ದರು.
ಪ್ರಚಾರಕ್ಕೂ ಮುನ್ನ ದೇವನಹಳ್ಳಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಮೊಯ್ಲಿಗೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಸೇರಿದಂತೆ ಇತರ ಜೆಡಿಎಸ್ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಾಥ್ ನೀಡಿದರು. ಈ ಮೂಈಲಕ ಮೈತ್ರಿ ಸರ್ಕಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತ ತೋರಿಸಿದರು.
ಶಾಸಕರ ಮನವೊಲಿಸಿದರಾ ಸಿಎಂ?
ಇನ್ನು ಚುನಾವಣೆ ಆರಂಭದಿಂದಲೂ ಕಾಂಗ್ರೆಸ್ನಿಂದ ದೂರ ಉಳಿದಿದ್ದ ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ, ಕಾಂಗ್ರೆಸ್ ಜೊತೆ ಇಂದು ಪ್ರಚಾರಕ್ಕೆ ಹೋಗಲು ಸಿಎಂ ಕುಮಾರಸ್ವಾಮಿ ಕಾರಣ ಎನ್ನಲಾಗುತ್ತಿದೆ. ಮೊನ್ನೆ ತಾನೆ ಜೆಡಿಎಸ್ ಮುಖಂಡರು ನಡೆಸಿದ್ದ ಸಭೆಯಲ್ಲಿ ಯಾರೂ ಕೂಡ ಮೊಯ್ಲಿಗೆ ಬೆಂಬಲ ನೀಡುವ ತೀರ್ಮಾನಕ್ಕೆ ಒಪ್ಪಿರಲಿಲ್ಲ. ಇದರಿಂದ ಸಭೆ ಯಶಸ್ವಿಯಾಗಿರಲಿಲ್ಲ.
ಬಳಿಕ ನಿನ್ನೆ ಸಿಎಂ ಕುಮಾರಸ್ವಾಮಿ ಸ್ವತಃ ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿದ್ದರು. ಹೀಗಾಗಿ ಇಂದಿನಿಂದ ಪ್ರಚಾರಕ್ಕೆ ಭಾಗವಹಿಸಿದ್ದಾರೆ ಎನ್ನಲಾಗಿದೆ.