ETV Bharat / state

ಇತ್ತೀಚೆಗೆ ನಿಧನರಾದ ಗಣ್ಯರಿಗೆ ವಿಧಾನಸಭೆ ಕಲಾಪದಲ್ಲಿ ಭಾವಪೂರ್ಣ ಸಂತಾಪ

ಮಧ್ಯಾಹ್ನ 12.45 ರ ಸುಮಾರಿಗೆ ವಂದೇ ಮಾತರಂ ಗೀತೆಯೊಂದಿಗೆ ಸದನ ಆರಂಭವಾಗಿದ್ದು, ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಂಡರು. ಇತ್ತೀಚೆಗೆ ನಿಧನರಾದ 13 ಮಂದಿ ಗಣ್ಯರಿಗೆ ವಿಧಾನಸಭೆಯಲ್ಲಿ ಇಂದು ಭಾವಪೂರ್ಣ ಸಂತಾಪ ಸೂಚಿಸಲಾಯಿತು.

ವಿಧಾನಸಭೆ ಕಲಾಪ
author img

By

Published : Jul 12, 2019, 3:21 PM IST

ಬೆಂಗಳೂರು: ಸಚಿವರಾಗಿದ್ದ ಸಿ.ಎಸ್ ಶಿವಳ್ಳಿ, ಕೇಂದ್ರದ ಮಾಜಿ ಸಚಿವ ವಿ. ಧನಂಜಯ ಕುಮಾರ್, ಮಾಜಿ ಶಾಸಕ ಕೆ.ಎಲ್ ಶಿವಲಿಂಗೇಗೌಡ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಟಕಕಾರ, ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಸೇರಿದಂತೆ ಇತ್ತೀಚೆಗೆ ನಿಧನರಾದ 13 ಮಂದಿ ಗಣ್ಯರಿಗೆ ವಿಧಾನಸಭೆಯಲ್ಲಿ ಇಂದು ಭಾವಪೂರ್ಣ ಸಂತಾಪ ಸೂಚಿಸಲಾಯಿತು.

ಮಧ್ಯಾಹ್ನ 12.45 ರ ಸುಮಾರಿಗೆ ವಂದೇ ಮಾತರಂ ಗೀತೆಯೊಂದಿಗೆ ಸದನ ಆರಂಭವಾಗಿದ್ದು, ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ ಅವರು ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಂಡರು. ಇತ್ತೀಚೆಗೆ ಅಗಲಿದ ಪೌರಾಡಳಿತ ಸಚಿವರಾಗಿದ್ದ ಸಿ.ಎಸ್ ಶಿವಳ್ಳಿ, ಕೇಂದ್ರ ಮಾಜಿ ಸಚಿವ ವಿ.ಧನಂಜಯಕುಮಾರ್, ಮಾಜಿ ಶಾಸಕ ಕೆ.ಎಲ್.ಶಿವಲಿಂಗೇಗೌಡ, ಎಸ್.ಎಸ್ ಅರಕೇರಿ, ಧಮಯಂತಿ ಭೋರೇಗೌಡ, ಚನ್ನವೀರಯ್ಯ ಶಾಂತಯ್ಯ ಮುತ್ತಿನಪೆಂಡಿಮಠ, ಡಾ.ವಿಜಯಕುಮಾರ್ ಖಂಡ್ರೆ, ಭೂಪಾಲ್ ಬಂಡಾರಿ ಹೆಚ್, ಶಾರದವ್ವ ಎಂ. ಪಟ್ಟಣ, ಡಾ.ಎನ್.ಬಿ ನಂಜಪ್ಪ, ಎಂ.ಸತ್ಯನಾರಾಯಣ, ಸಂಭಾಜಿ ಲಕ್ಷ್ಮಣ ಪಾಟೀಲ್ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖಾತ್ಯ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರು ನಿಧನ ಹೊಂದಿರುವುದನ್ನು ಸದನದ ಗಮನಕ್ಕೆ ತಂದರು.

ಈ ಸಂದರ್ಭದಲ್ಲಿ ರಮೇಶ್ ಕುಮಾರ್ ಮಾತನಾಡಿ, ಸಿ.ಎಸ್ ಶಿವಳ್ಳಿ ಅವರು 1962ರ ಮೇ 6 ರಂದು ನವಲಗುಂದ ತಾಲೂಕಿನ ಶಲವಡಿ ಗ್ರಾಮದಲ್ಲಿ ಜನಿಸಿದ್ದು, ಬಿಎ ಪದವೀಧರರಾಗಿ, ವೃತ್ತಿಯಲ್ಲಿ ಕೃಷಿಕರಾಗಿದ್ದರು. ರೈತಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಇವರು ಕಳಸಾ ಬಂಡೂರಿ ಜಾರಿಗಾಗಿ ಕುಂದಗೋಳದಿಂದ ಧಾರವಾಡದವರೆಗೆ ಪಾದಯಾತ್ರೆ ಮಾಡಿದ್ದಲ್ಲದೆ ದೆಹಲಿ ಜಂತರ್ ಮಂತರ್​ನಲ್ಲಿ ಧರಣಿ ನಡೆಸಿದ್ದರು. ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಸರಳ ಸಜ್ಜನ ವ್ಯಕ್ತಿಯಾಗಿದ್ದ ಶಿವಳ್ಳಿ ಮಾ.22 ರಂದು ನಿಧನರಾಗಿದ್ದಾರೆ ಎಂದು ತಿಳಿಸಿದರು.

ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್ ಅವರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ್ದರು. ಆನಂತರ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಮಂಗಳೂರು ಕ್ಷೇತ್ರದಿಂದ ವಿಧಾನಸಭೆಗೆ ಹಾಗೂ ಮಂಗಳೂರು ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ, ಪ್ರವಾಸೋದ್ಯಮ, ಜವಳಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು . ಅವರು ಕಳೆದ ಮಾ.4 ರಂದು ನಿಧನರಾದರು ಎಂದು ಎಂದು ಸಂತಾಪ ಸೂಚಿಸಿದರು.

ಇನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರು ಮಹಾರಾಷ್ಟ್ರದ ಮಥೇರದಲ್ಲಿ ಜನಿಸಿದ್ದರು. ಆಕ್ಸ್‌ಫರ್ಡ್ ವಿವಿಯಲ್ಲಿ ಎಂಎ ಪದವಿ ಪಡೆದಿದ್ದ ಅವರು ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದರು. ವೈಚಾರಿಕ ನೆಲೆಗಟ್ಟಿನ ಮೇಲೆ ಸಾಹಿತ್ಯ ರಚಿಸಿರುವ ಕಾರ್ನಾಡ್ ಅವರು, 1998ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾಗಿದ್ದರು. ನಾಟಕ, ಸಿನಿಮಾ ರಂಗದಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸಿದ್ದ ಅವರು, ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ್​ ಸಮ್ಮಾನ್, ಕರ್ನಾಟಕ ರಾಜ್ಯೋತ್ಸವ, ಗುಬ್ಬಿ ವೀರಣ್ಣ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಪುರಾಣ, ಇತಿಹಾಸ, ಜನಪದಗಳಿಗೆ ಸಮಕಾಲೀನ ರಂಗ ವ್ಯಾಖ್ಯಾನ ನೀಡಿದ ಕಾರ್ನಾಡ್ ಅವರು ವಿವಿಧ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದರು. ಪ್ರಗತಿಪರ ಚಿಂತಕರಾಗಿದ್ದ ಅವರು ಜೂ.10 ರಂದು ನಿಧನರಾದರು ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು.

ಹಾಗೆಯೇ ಇತ್ತೀಚೆಗೆ ನಿಧನರಾದ ಕೆ.ಎಲ್. ಶಿವಲಿಂಗೇಗೌಡ, ಎಸ್.ಎಸ್. ಅರಕೇರಿ ಸೇರಿದಂತೆ ಹಲವು ಗಣ್ಯರ ನಿಧನವನ್ನು ಪ್ರಸ್ತಾಪಿಸಿ ಮೃತರ ಗುಣಗಾನ ಮಾಡಿದ್ರು.

Intro:ಬೆಂಗಳೂರು : ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ, ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್, ಮಾಜಿ ಶಾಸಕ ಕೆ.ಎಲ್. ಶಿವಲಿಂಗೇಗೌಡ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಾಟಕಕಾರ, ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಸೇರಿದಂತೆ ಇತ್ತೀಚೆಗೆ ನಿಧನರಾದ 13 ಮಂದಿ ಗಣ್ಯರಿಗೆ ವಿಧಾನಸಭೆಯಲ್ಲಿ ಇಂದು ಭಾವಪೂರ್ಣ ಸಂತಾಪ ಸೂಚಿಸಲಾಯಿತು.Body:ಇಂದು ಮಧ್ಯಾಹ್ನ 12.45 ರ ಸುಮಾರಿಗೆ ವಂದೇ ಮಾತರಂ ಗೀತೆಯೊಂದಿಗೆ ಸದನ ಆರಂಭವಾಗಿದ್ದು, ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಂಡರು. ಇತ್ತೀಚೆಗೆ ನಿಧನರಾದ ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ, ಕೇಂದ್ರ ಮಾಜಿ ಸಚಿವ ವಿ.ಧನಂಜಯಕುಮಾರ್, ಮಾಜಿ ಶಾಸಕ ಕೆ.ಎಲ್.ಶಿವಲಿಂಗೇಗೌಡ, ಎಸ್.ಎಸ್.ಅರಕೇರಿ, ಧಮಯಂತಿ ಭೋರೇಗೌಡ, ಚನ್ನವೀರಯ್ಯ ಶಾಂತಯ್ಯ ಮುತ್ತಿನ ಪೆಂಡಿಮಠ, ಡಾ.ವಿಜಯಕುಮಾರ್ ಖಂಡ್ರೆ, ಭೂಪಾಲ್ ಬಂಡಾರಿ .ಎಚ್, ಶಾರದವ್ವ ಎಂ.ಪಟ್ಟಣ, ಡಾ.ಎನ್.ಬಿ.ನಂಜಪ್ಪ , ಎಂ.ಸತ್ಯನಾರಾಯಣ, ಶಾಂಭಾಜಿ ಲಕ್ಷ್ಮಣ ಪಾಟೀಲ್ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖಾತ್ಯ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರು ನಿಧನ ಹೊಂದಿರುವುದನ್ನು ಸದನದ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ರಮೇಶ್ ಕುಮಾರ್ ಮಾತನಾಡಿ, ಸಿ.ಎಸ್.ಶಿವಳ್ಳಿ ಅವರು 1962ರ ಮೇ 6ರಂದು ನವಲಗುಂದ ತಾಲ್ಲೂಕಿನ ಶಲವಡಿ ಗ್ರಾಮದಲ್ಲಿ ಜನಿಸಿದ್ದು, ಬಿಎ ಪಧವಿದರರಾಗಿ, ವೃತ್ತಿಯಲ್ಲಿ ಕೃಷಿಕರಾಗಿದ್ದರು. ರೈತಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಇವರು ಕಳಸಾ ಬಂಡೂರಿ ಜಾರಿಗಾಗಿ ಕುಂದಗೋಳದಿಂದ ಧಾರವಾಡದವರೆಗೆ ಪಾದಯಾತ್ರೆ ಮಾಡಿದ್ದಲ್ಲದೆ ದೆಹಲಿ ಜಂತರ್‍ ಮಂತರ್‍ನಲ್ಲಿ ಧರಣಿ ನಡೆಸಿದ್ದರು. ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ನಾಲ್ಕು ಭಾರಿ ಆಯ್ಕೆಯಾಗಿದ್ದರು. ಸರಳ ಸಜ್ಜನ ವ್ಯಕ್ತಿಯಾಗಿದ್ದ ಇವರು ಮಾ.22ರಂದು ನಿಧನರಾಗಿದ್ದಾರೆ ಎಂದು ತಿಳಿಸಿದರು.
ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್ ಅವರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ್ದರು. ಆನಂತರ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಮಂಗಳೂರು ಕ್ಷೇತ್ರದಿಂದ ವಿಧಾನಸಭೆಗೆ ಹಾಗೂ ಮಂಗಳೂರು ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕೇಂದ್ರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ, ಪ್ರವಾಸೋದ್ಯಮ, ಜವಳಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು . ಅವರು ಕಳೆದ ಮಾ.4 ರಂದು ನಿಧನ ಹೊಂದಿದ್ದರು ಎಂದು ವಿಷಾದಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರು ಮಹಾರಾಷ್ಟ್ರದ ಮಥೇರ್‍ನಲ್ಲಿ ಜನಿಸಿದ್ದರು. ಆಕ್ಸ್‌ಫರ್ಡ್ ವಿವಿಯಲ್ಲಿ ಎಂಎ ಪದವಿ ಪಡೆದಿದ್ದ ಅವರು ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದರು. ವೈಚಾರಿಕ ನೆಲೆಗಟ್ಟಿನ ಮೇಲೆ ಸಾಹಿತ್ಯ ರಚಿಸಿರುವ ಕಾರ್ನಾಡ್ ಅವರು, 1998ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರಾಗಿದ್ದರು. ನಾಟಕ, ಸಿನಿಮಾ ರಂಗದಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸಿದ್ದ ಅವರು, ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಸಮ್ಮಾನ್ , ಕರ್ನಾಟಕ ರಾಜ್ಯೋತ್ಸವ ಗುಬ್ಬಿ ವೀರಣ್ಣ ಪ್ರಶಸ್ತಿಗಳು ಭಾಜನರಾಗಿದ್ದರು. ಪುರಾಣ, ಇತಿಹಾಸ, ಜನಪದಗಳಿಗೆ ಸಮಕಾಲೀನ ರಂಗ ವ್ಯಾಖ್ಯಾನ ನೀಡಿದ ಕಾರ್ನಾಡ್ ಅವರು ವಿವಿಧ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದರು.ಪ್ರಗತಿಪರ ಚಿಂತಕರಾಗಿದ್ದ ಅವರು ಜೂ.10 ರಂದು ನಿಧನರಾದರು ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು.
ಇತ್ತೀಚೆಗೆ ನಿಧನರಾದ ಕೆ.ಎಲ್. ಶಿವಲಿಂಗೇಗೌಡ, ಎಸ್.ಎಸ್.ಅರಕೇರಿ ಸೇರಿದಂತೆ ಹಲವು ಗಣ್ಯರ ನಿಧನವನ್ನು ಪ್ರಸ್ತಾಪಿಸಿ ಮೃತರ ಗುಣಗಾನ ಮಾಡಿದರು.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.