ETV Bharat / state

ಸಿದ್ದೇಶ್ವರಸ್ವಾಮಿ ಜಾತ್ರೆಯಲ್ಲಿ ತೆಂಗಿನಕಾಯಿ ಪವಾಡದ್ದೇ ಮಾತು! - undefined

ಕಾಡುಗೋಡಿ ಸಮೀಪದ ಖಾಜಿ ಸೋಣ್ಣೆನಹಳ್ಳಿಯಲ್ಲಿ ಸಿದ್ದೇಶ್ವರಸ್ವಾಮಿ ದೇವರ ದೊಡ್ಡ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿದ್ದು, ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದೇಶ್ವರಸ್ವಾಮಿ ದೇವರಿಗೆ ಮೂರು ದಿನಗಳಿಂದ ವಿಶೇಷ ಪೂಜಾ ಕೈಂಕರ್ಯ ನಡೆದವು.

ಸಿದ್ದೇಶ್ವರಸ್ವಾಮಿ ದೇವರ ದೊಡ್ಡ ಜಾತ್ರಾ ಮಹೋತ್ಸವ
author img

By

Published : Apr 29, 2019, 9:26 AM IST

ಬೆಂಗಳೂರು: ನಗರ ಶರವೇಗದಲ್ಲಿ ಬೆಳೆದು ಐಟಿ,ಬಿಟಿ ಸಿಟಿ, ಸಿಲಿಕಾನ್ ಸಿಟಿ ಎಂಬ ಖ್ಯಾತಿ ಗಳಿಸಿದರೂ ಪೂರ್ವಿಕರು ನಡೆಸಿಕೊಂಡು ಬಂದ ಜಾತ್ರಾ ಮಹೋತ್ಸವ, ಆಚಾರ ವಿಚಾರಗಳನ್ನು ಮಾತ್ರ ಜನ ಮರೆತಿಲ್ಲ. ಇದಕ್ಕೆ ಉದಾಹರಣೆ ಎಂಬತೆ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವ.

ಸಿದ್ದೇಶ್ವರಸ್ವಾಮಿ ದೇವರ ದೊಡ್ಡ ಜಾತ್ರಾ ಮಹೋತ್ಸವ

ಹೌದು, ಕಾಡುಗೋಡಿ ಸಮೀಪದ ಖಾಜಿ ಸೋಣ್ಣೆನಹಳ್ಳಿಯಲ್ಲಿ ಸಿದ್ದೇಶ್ವರಸ್ವಾಮಿ ದೇವರ ದೊಡ್ಡ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಈ ಜಾತ್ರಾ ಮಹೋತ್ಸವವನ್ನು ಕುರುಬ ಸಮುದಾಯದವರು ಹಮ್ಮಿಕೊಂಡಿದ್ದರು. ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದೇಶ್ವರಸ್ವಾಮಿ ದೇವರಿಗೆ ಮೂರು ದಿನಗಳಿಂದ ವಿಶೇಷ ಪೂಜಾ ಕೈಂಕಾರ್ಯ ನಡೆದವು. ಸಿದ್ದೇಶ್ವರಸ್ವಾಮಿ ದೇವಸ್ಥಾನದಿಂದ ಹೂವಿನಿಂದ ಅಂಲಕರಿಸಿದ್ದ ಬಂಡಾರ ಪೆಟ್ಟಿಗೆಯಲ್ಲಿ ದೇವರ ಮೂರ್ತಿ ಹೊತ್ತು ಗ್ರಾಮದ ಹೂರ ಪ್ರದೇಶಕ್ಕೆ ಮೆರವಣಿಗೆ ಮೂಲಕ ತೆರಳಿ ಗಂಗೆ ಪೂಜೆ ( ಹೊಳೆ ಪೂಜೆ) ಮಾಡಲಾಯಿತು.

ಜಾತ್ರಾ ಮಹೋತ್ಸವದಲ್ಲಿ ಬಸವನ ತಲೆ ಮೇಲೆ ಹಾಗೂ ಪವಾಡದರರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವುದು, ವೀರಗಾಸೆ, ಕರಣಿವಾದ್ಯ, ಕೋಲಾಟ, ಗೊರವನ ಕುಣಿತ, ಡೊಳ್ಳು ಕುಣಿತ, ಪೂಜಾ ಕುಣಿತ ನರೆದಿದ್ದ ಭಕ್ತರ ಗಮನ ಸೆಳೆದವು.

ಈ ಜಾತ್ರೆಯ ಪ್ರಮುಖ ಆಕರ್ಷಣೆ ಎಂದರೆ ತೆಂಗಿನಕಾಯಿ ಪವಾಡ. ಜಾತ್ರೆಯಲ್ಲಿ ದೇವರನ್ನು ಹೊಳೆ ಪೂಜೆಗೆ ಕೊಂಡೊಯ್ಯುವ ಮುನ್ನ ದೇವಾಲಯದ ಬಸವನ(ಎತ್ತು) ಮೇಲೆ ತೆಂಗಿನಕಾಯಿ ಒಡೆದು, ನಂತರ ಪವಾಡಗಾರರ ತಲೆಯ ಮೇಲೆ ನಿರಂತರವಾಗಿ ತೆಂಗಿನ ಕಾಯಿಯನ್ನು ಒಡೆಯುವುದು ಎಂಥವರನ್ನು ಒಂದು ಕ್ಷಣ ನಿಬ್ಬೆರಗಾಗುವಂತೆ ಮಾಡುತ್ತದೆ.

ಇನ್ನು ತೆಂಗಿನಕಾಯಿ ಪವಾಡದ ಬಗ್ಗೆ ಪವಾಡಗಾರ ಮುನಿರಾಜ್‌ ಮಾತನಾಡಿ, ತೆಂಗಿನಕಾಯಿಯ ತೊಟ್ಟನ್ನು ತೆಗೆದು ಚನ್ನಾಗಿ ಉಜ್ಜಿ, ಹೊಳೆ ಪೊಜೆ ಮಾಡಿ, ಆ ಕಾಯಿಯನ್ನು ದೇವರ ಬಳಿ ಇಟ್ಟು ಗಂಗೆ ಪೂಜೆ ಸಲ್ಲಿಸಿ ಗುರು ಹಿರಿಯರ ಆಶೀರ್ವಾದ ಪಡೆದು ಮೊದಲು ಬಸವ(ಎತ್ತು)ಗೆ ಒಡೆದು ನಂತರ ನಮ್ಮ ಸಂಪ್ರದಾಯದಂತೆ ಎಲ್ಲರಿಗೂ ಒಡೆಯಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕುರುಬ ಸಮಾಜದ ಕುಲ ಗುರುಗಳಾದ ಹೊಸದುರ್ಗದ ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಾವಿರಾರು ಜನರು ಈಶ್ವರಾನಂದಪುರಿ ಸ್ವಾಮಿಗಳ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಮಲ್ಲಿಕಾರ್ಜುನ ಆರಾಧ್ಯ, ದೇವಾಲಯದ ಗೌರವಧ್ಯಕ್ಷ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ಶ್ರೀನಿವಾಸ್, ಚಿಕ್ಕಮುನಿಶಾಮಪ್ಪರ ನಂಜುಂಡಪ್ಪ, ಮತ್ತಿತ್ತರರು ಉಪಸ್ಥಿತರಿದ್ದು, ಜಾತ್ರಾ ಮಹೋತ್ಸವಕ್ಕೆ ಕಲ್ಕೆರೆ, ಹಲಸೂರು, ಗೊರವಿಗೆರೆ, ದೇವನಹಳ್ಳಿ, ಶಿವಕೋಟೆ, ಕೆ. ಚನ್ನಸಂದ್ರ, ಅತ್ತಿಬೆಲೆ, ಸುಣ್ಣಘಟ ಸೇರಿದಂತೆ ಖಾಜಿಸೋಣೆನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದ್ದರು.

Intro:ಖಾಜಿ ಸೊಣ್ಣೇನಹಳ್ಳಿ ಗ್ರಾಮದ ಸಿದ್ದೇಶ್ವರ ಸ್ವಾಮಿ ಜಾತ್ರೆಯಲ್ಲಿ ತೆಂಗಿನಕಾಯಿ ಪವಾಡ.

ಬೆಂಗಳೂರು ನಗರ ಶರವೇಗದಲ್ಲಿ ಬೆಳೆದು ಐಟಿಬಿಟಿ ಸಿಟಿ, ಸಿಲಿಕಾನ್ ಸಿಟಿ ಎಂಬ ಖ್ಯಾತಿ ಗಳಿಸಿದರು ಪೂರ್ವಿಕರು ನಡೆಸಿಕೊಂಡು ಬಂದ ಜಾತ್ರಾ ಮಹೋತ್ಸವ, ಆಚಾರ ವಿಚಾರಗಳನ್ನು ಮಾತ್ರ ಮರೆತಿಲ್ಲ. ಇದಕ್ಕೆ ಉದಾಹರಣೆ ಎಂಬತೆ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವ ಸಾಕ್ಷಿ ಯಾಗಿದ್ದು, ಜಾತ್ರೆಯಲ್ಲಿ ನಡೆದ ತೆಂಗಿನಕಾಯಿ ಪವಾಡ ಎಲ್ಲರ ಅಕರ್ಷಣೆ ಕೇಂದ್ರ ಬಿಂದುವಾಗಿತ್ತು.

ಕಾಡುಗೋಡಿ ಸಮೀಪದ ಖಾಜಿ ಸೋಣ್ಣೆನಹಳ್ಳಿಯಲ್ಲಿ ಸಿದ್ದೇಶ್ವರಸ್ವಾಮಿ ದೇವರ ದೊಡ್ಡ ಜಾತ್ರ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿಯ ಕನ್ನಮಂಗಲ ಸಮೀಪದ ಖಾಜಿಸೋಣ್ಣೆನಹಳ್ಳಿ ಪುರಾತನ ಪ್ರಸಿದ್ಧ ಸಿದ್ದೇಶ್ವರಸ್ವಾಮಿ ದೇವರ ದೊಡ್ಡ ಜಾತ್ರ ಮಹೋತ್ಸವವನ್ನು ಕುರುಬ ಸಮುದಾಯದವರು ಹಮ್ಮಿಕೊಂಡಿದ್ದರು.
ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ದೇಶ್ವರಸ್ವಾಮಿ ದೇವರಿಗೆ ಮೂರು ದಿನಗಳಿಂದ ವಿಶೇಷ ಪೂಜಾ ಕೈಂಕಾರ್ಯ ನಡೆದವು. ಸಿದ್ದೇಶ್ವರಸ್ವಾಮಿ ದೇವಸ್ಥಾನದಿಂದ ಹೂವಿನಿಂದ ಅಂಲಕರಿಸಿದ್ದ ಬಂಡಾರ ಪೆಟ್ಟಿಗೆಯಲ್ಲಿ ದೇವರ ಮೂರ್ತಿ ಹೋತ್ತು ಗ್ರಾಮದ ಹೂರ ಪ್ರದೇಶಕ್ಕೆ ಮೇರವಣಿಗೆ ಮೂಲಕ ತೆರಳಿ ಗಂಗೆ ಪೂಜೆ ( ಹೊಳೆ ಪೂಜೆ) ಮಾಡಲಾಯಿತು.
ಜಾತ್ರ ಮಹೋತ್ಸವದಲ್ಲಿ ಬಸವನ ಎತ್ತಿನ ತಲೆ ಮೇಲೆ ಹಾಗೂ ಪವಾಡದರರ ತಲೆಯ ಮೇಲೆ ತೆಂಗಿನ ಕಾಯಿ ಹೋಡೆಯುವುದು, ವೀರಗಾಸೆ, ಕರಣಿವಾದ್ಯ, ಕಲಾಟಗಾರರು, ಗೊರವನಕುಣಿತ,ಡೋಳ್ಳು ಕುಣಿತ, ಪೂಜಾಕುಣಿತ ನರೆದಿದ್ದ ಭಕ್ತರ ಗಮನ ಸೆಳೆಯಿತು.

Body:ಈ ಜಾತ್ರೆಯ ಪ್ರಮುಖ ಆಕರ್ಷಣೆಯ ಎಂದರೆ ಅದುವೆ ತೆಂಗಿನಕಾಯಿ ಪವಾಡ. ಈ ಜಾತ್ರೆಯಲ್ಲಿ ದೇವರನ್ನು ಹೊಳೆ ಪೂಜೆಗೆ ಕೊಂಡೊಯ್ಯುವ ಮುನ್ನ ದೇವಾಲಯದ ಬಸವ(ಎತ್ತು) ಮೇಲೆ ತೆಂಗಿನ ಕಾಯಿ ಒಡೆದು, ನಂತರ ಪವಾಡಗಾರರ ತಲೆಯ ಮೇಲೆ ನಿರಂತರವಾಗಿ ತೆಂಗಿನ ಕಾಯಿಯನ್ನು ಒಡೆಯುವುದು ಎಂತವರನ್ನು ಒಂದು ಕ್ಷಣ ನಿಬ್ಬೆರುಗಾಗುವಂತೆ ಮಾಡುತ್ತದೆ.

ಇನ್ನು ಈ ತೆಂಗಿನಕಾಯಿ ಪವಾಡದ ಬಗ್ಗೆ ಪವಾಡಗಾರ
ಮುನಿರಾಜ್‌ ಮಾತನಾಡಿ ತೆಂಗಿನಕಾಯಿಯ ಒಟ್ಟನ್ನು ತೆಗೆದು ಚನ್ನಾಗಿ ಉಜ್ಜಿ ಹೊಳೆ ಪೊಜೆ ಮಾಡಿ ಆ ಕಾಯಿಯನ್ನು ದೇವರ ಬಳಿ ಇಟ್ಟು ಗಂಗೆ ಪೂಜೆ ಸಲ್ಲಿಸಿ ಗುರು ಹಿರಿಯರ ಆಶಿರ್ವಾದ ಪಡೆದು ಮೊದಲು ಬಸವ(ಎತ್ತು)ಗೆ ಹೊಡೆದು ನಂತರ ನಮ್ಮ ಸಂಪ್ರದಾಯದಂತೆ ನಡೆಯುತ್ತದೆ ಎಂದು ವಿವರಿಸಿದರು.

Conclusion:ಈ ಸಂದರ್ಭದಲ್ಲಿ ಕುರುಬ ಸಮಾಜದ ಕುಲ ಗುರುಗಳಾದ ಹೊಸದುರ್ಗದ ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಗಳು ದೀವ್ಯ ಸಾನಿಧ್ಯ ವಹಿಸಿದ್ದರು. ಸಾವಿರಾರು ಜನರು ಈಶ್ವರಾನಂದಪುರಿ ಸ್ವಾಮೀಗಳ ಪಾದಪೂಜೆ ಮಾಡಿ ಆಶಿರ್ವಾದ ಪಡೆದರು.
ಮಲ್ಲಿಕಾರ್ಜುನ ಆರಾಧ್ಯ, ದೇವಾಲಯದ ಗೌರವಧ್ಯಕ್ಷ ಎನ್.ಕೃಷ್ಣಪ್ಪ, ಪ್ರಧಾನ ಅರ್ಚಕ ಶ್ರೀನಿವಾಸ್, ಚಿಕ್ಕಮುನಿಶಾಮಪ್ಪರ ನಂಜುಂಡಪ್ಪ, ಮತ್ತಿತ್ತರರು ಇದ್ದರು.

ದೇವರ ದೊಡ್ಡ ಜಾತ್ರಾ
ಮಹೋತ್ಸವಕ್ಕೆ ಕಲ್ಕೆರೆ, ಹಲಸೂರು, ಗೊರವಿಗೆರೆ, ದೇವನಹಳ್ಳಿ, ಶಿವಕೋಟೆ, ಕೆ ಚನ್ನಸಂದ್ರ, ಅತ್ತಿಬೆಲೆ, ಸುಣ್ಣಘಟ ಸೇರಿದಂತೆ ಖಾಜಿಸೋಣೆನಹಳ್ಳಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿದರು.

ಒಟ್ಟಾರೆ ಇಂದಿನ ಆಧುನಿಕ ಯುಗದಲ್ಲು ಬೆಂಗಳೂರಿನ ಜನರು ಪೂರ್ವಿಕರ ಆಚಾರ ವಿಚಾರಗಳ ಜೊತೆ ಮನೆ ದೇವರುಗಳ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿರುವುದು ಎಲ್ಲರು ಹೆಮ್ಮೆ ಪಡುವ ಸಂಗತಿಯಾಗಿದ್ದು, ಈ ದೇವತಾ ಕಾರ್ಯಗಳು ಹೀಗೆ ಮುಂದುವರೆಸಿಕೊಂಡು ಹೋಗಲಿ.

ಧರ್ಮರಾಜು ಎಮ್ ಕೆಆರ್ ಪುರ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.