ETV Bharat / state

ವೇಣುಗೋಪಾಲ್​​ ಸಭೆ ಬಹುತೇಕ ಪೂರ್ಣ... ಸಿಎಂ ಬಂದ ನಂತರವೇ ಅಂತಿಮ ನಿರ್ಧಾರ

author img

By

Published : Jul 7, 2019, 6:01 PM IST

Updated : Jul 7, 2019, 8:14 PM IST

ಸಭೆಯ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಭೆಯಲ್ಲಿ ನಮ್ಮ ಅಭಿಪ್ರಾಯಗಳನ್ನು ವೇಣುಗೋಪಾಲ್​ ಅವರಿಗೆ ತಿಳಿಸಿದ್ದೇವೆ. ಮುಂಬೈನಲ್ಲಿರುವ ಶಾಸಕರನ್ನೂ ಸಂಪರ್ಕ ಮಾಡ್ತಿದ್ದೇವೆ. ಇಲ್ಲಿರುವವರ ಜೊತೆಗೂ ಸಂಪರ್ಕದಲ್ಲಿದ್ದೇವೆ. ಮತ್ತಿನ್ಯಾರೂ ಮುಂಬೈಗೆ ಹೋಗಲ್ಲ. ಸಿಎಂ ಬಂದ ಬಳಿಕ ಮುಂದಿನ ನಡೆಯ ಬಗ್ಗೆ ನಿರ್ಧರಿಸುತ್ತೇವೆ ಎಂದರು.

ಸಭೆಯ ನಂತರ ಮಾತನಾಡಿದ ಸತೀಶ್ ಜಾರಕಿಹೊಳಿ, ಎಚ್​.ಕೆ.ಪಾಟೀಲ್​

ಬೆಂಗಳೂರು: ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಖಾಸಗಿ ಹೋಟೆಲ್​ನಲ್ಲಿ ನಡೆಸುತ್ತಿರುವ ಕೈ ಮುಖಂಡರ ಒನ್‌ ಟು ಒನ್‌ (ಪ್ರತ್ಯೇಕವಾಗಿ) ಸಮಾಲೋಚನಾ ಸಭೆ ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಒಬ್ಬೊಬ್ಬರಾಗಿಯೇ ಸಭೆಯಿಂದ ಹೊರ ಬರುತ್ತಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಕಾಂಗ್ರೆಸ್ ಮುಖಂಡ ಹೆಚ್​.ಕೆ.ಪಾಟೀಲ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಈಗಾಗಲೇ ಸಭೆ ಮುಗಿಸಿ ತೆರಳಿದ್ದಾರೆ.

ವಿಶೇಷ ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳಸಿರುವ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ನೇರವಾಗಿ ಖಾಸಗಿ ಹೋಟೆಲ್​​ಗೆ ಆಗಮಿಸಲಿದ್ದಾರೆ. ಬಳಿಕ ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಒಂದು ಹಂತದ ಸಭೆ ನಡೆಸಲಿದ್ದಾರೆ. ಸರ್ಕಾರ ಬೀಳುವ ದ್ವಂದ್ವ ಅಭಿಪ್ರಾಯಗಳು ವ್ಯಕ್ತವಾದ ಬೆನ್ನಲ್ಲೇ ಹೈಕಮಾಂಡ್​ಗೆ ಕರೆ ಮಾಡಿದ್ದ ವೇಣುಗೋಪಾಲ್,​​ ಎಲ್ಲ ವಿವರವನ್ನು ರಾಷ್ಟ್ರೀಯ ನಾಯಕರಿಗೆ ನೀಡಿದ್ದಾರೆ. ಈ ನಡುವೆ ಸಿಎಂ ಬಂದು ಸಮಾಲೋಚಿಸಿದ ನಂತರ ರಾಜ್ಯ ಸಮ್ಮಿಶ್ರ ಸರ್ಕಾರದ ಮುಂದಿನ ನಡೆ ತಿಳಿದು ಬರಲಿದೆ.

ಸಭೆ ನಡೆಸಿದ ಬಳಿಕ ಮಾತನಾಡಿದ ಸತೀಶ್​ ಜಾರಕಿಹೊಳಿ, ಹೆಚ್​.ಕೆ.ಪಾಟೀಲ್​.

ಸಭೆಗೆ ಬಂದ ಬೈರತಿ ಸುರೇಶ್: ವೇಣುಗೋಪಾಲ್ ಭೇಟಿಗೆ ಆಗಮಿಸಿದ ಶಾಸಕ‌ ಬೈರತಿ ಸುರೇಶ್ ಇದೇ ವೇಳೆ ಮಾತನಾಡಿ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಶಾಸಕರು ರಾಜೀನಾಮೆ ಕೊಡ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಅದರಲ್ಲೂ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಆಶ್ಚರ್ಯ ತಂದಿದೆ. ನನ್ನನ್ನಂತೂ ಬಿಜೆಪಿ ನಾಯಕರು ಸಂಪರ್ಕ ಮಾಡಿಲ್ಲ. ರಾಮಲಿಂಗಾರೆಡ್ಡಿ ಜೊತೆ ಪಕ್ಷದ ಹಿರಿಯ ನಾಯಕರು ಮಾತುಕತೆ ನಡೆಸ್ತಿದ್ದಾರೆ. ಸಿಎಂ ಬದಲಾವಣೆ ವಿಚಾರ ಪಕ್ಷದ ಮಟ್ಟದಲ್ಲಿ ಚರ್ಚೆ ಆಗ್ತಿಲ್ಲ. ಮುಂಬೈಗೆ ಹೋಗುವ ಶಾಸಕರನ್ನು ವಾಪಸ್ ಕರೆತರುವ ಭರವಸೆ ಇದೆ. ಶಾಸಕರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳಿರಬಹುದು. ಅವು ರಾಜೀನಾಮೆಗೆ ಕಾರಣ ಆಗುವಷ್ಟು ದೊಡ್ಡ ಸಮಸ್ಯೆಗಳಲ್ಲ ಎಂದರು.

ಮತ್ತಿನ್ಯಾರೂ ಮುಂಬೈಗೆ ಹೋಗಲ್ಲ: ಸಭೆಯ ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಸಭೆಯಲ್ಲಿ ನಮ್ಮ ಅಭಿಪ್ರಾಯಗಳನ್ನು ವೇಣುಗೋಪಾಲ್​ ಅವರಿಗೆ ತಿಳಿಸಿದ್ದೇವೆ. ಮುಂಬೈನಲ್ಲಿರುವ ಶಾಸಕರನ್ನೂ ಸಂಪರ್ಕ ಮಾಡ್ತಿದ್ದೇವೆ. ಇಲ್ಲಿರುವವರ ಜೊತೆಗೂ ಸಂಪರ್ಕದಲ್ಲಿದ್ದೇವೆ. ಮತ್ತಿನ್ಯಾರೂ ಮುಂಬೈಗೆ ಹೋಗಲ್ಲ. ಸಿಎಂ ಬಂದ ಬಳಿಕ ಮುಂದಿನ ನಡೆಯ ಬಗ್ಗೆ ನಿರ್ಧರಿಸುತ್ತೇವೆ ಎಂದರು.

ಹೆಚ್.ಕೆ.ಪಾಟೀಲ್ ಮಾತನಾಡಿ, ವೇಣುಗೋಪಾಲ್​ ಅವರು ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಾವು ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ. ಸಿಎಂ ಬಂದ ನಂತರ ಅವರ ಜೊತೆ ಮತ್ತೆ ಸಭೆ ನಡೆಸುತ್ತೇವೆ. ಸರ್ಕಾರ ಉಳಿಸುವ ಎಲ್ಲ ಪ್ರಯತ್ನ ನಡೆಸಿದ್ದೇವೆ ಎಂದರು.

ಈಶ್ವರ್ ಖಂಡ್ರೆ ಮಾತನಾಡಿ, ಇಂದು ಸಂಜೆ ಸಿಎಂ ಅವರೊಂದಿಗೆ ಚರ್ಚಿಸಿದ ನಂತರ ಸರ್ಕಾರದಲ್ಲಿ ಯಾವುದೇ ರೀತಿಯ ಬದಲಾವಣೆ ಅಥವಾ ಸಂಪುಟ ವಿಸ್ತರಣೆಯ ಮಾತುಕತೆ ನಡೆಯಲಿದೆ. ಸಣ್ಣಪುಟ್ಟ ಗೊಂದಲಗಳು ಸರ್ಕಾರದಲ್ಲಿ ಇವೆ. ಅವನ್ನ ಪಕ್ಷದ ಮುಖಂಡರು ಬಗೆಹರಿಸುತ್ತಾರೆ. ಬಿಜೆಪಿಯ ಊಹಾಪೋಹಗಳಿಗೆ ಬೆಲೆ ಕೊಡುವ ಅಗತ್ಯ ಇಲ್ಲ ಎಂದರು.

Intro:newsBody:ಖಾಸಗಿ ಹೋಟೆನಲ್ಲಿ ವೇಣುಗೋಪಾಲ್ ನಡೆಸುತ್ತಿರುವ ಸಭೆ ಬಹುತೇಕ ಪೂರ್ಣ ಸಿಎಂ ಬಂದ ನಂತರವೇ ಅಂತಿಮ ನಿರ್ಧಾರ

ಬೆಂಗಳೂರು: ಖಾಸಗಿ ಹೋಟೆಲ್ ನಲ್ಲಿ ಕೈ ಮುಖಂಡರ ಜತೆ ಒನ್ ಟು ಒನ್ ಮಾತನಾಡುತ್ತಿರುವ ವೇಣುಗೋಪಾಲ್ ಸಭೆ ಬಹುತೇಕ ಮುಕ್ತಾಯ ಹಂತ ತಲುಪಿದ್ದು ಒಬ್ಬೊಬ್ಬ ನಾಯಕರೂ ಆಚೆ ಬರುತ್ತಿದ್ದಾರೆ.
ಸಭೆ ಮುಗಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾಜಿ ಸಚಿವ ಎಚ್ಕೆ ಪಾಟೀಲ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಈಗಾಗಲೇ ಸಭೆ ಮುಗಿಸಿ ತೆರಳಿದ್ದಾರೆ.
ವಿಶೇಷ ವಿಮಾನದಲ್ಲಿ ದಿಲ್ಲಿಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳಸಿರುವ ಸಿಎಂ ನೇರವಾಗಿ ಖಾಸಗಿ ಹೋಟೆಲ್ ಗೆ ಆಗಮಿಸಲಿದ್ದು ಇಲ್ಲಿ ಒಂದು ಹಂತದ ಸಭೆ ನಡೆಸಲಿದ್ದಾರೆ.
ಸರ್ಕಾರ ಉಳಿಸಿಕೊಳ್ಳುವ ಬಗ್ಗೆ ಧ್ವಂಧ್ವ ಅಭಿಪ್ರಾಯಗಳು ವ್ಯಕ್ತವಾದ ಬೆನ್ನಲ್ಲೇ ಹೈಕಮಾಂಡ್ ಗೆ ಕರೆ ಮಾಡಿದ್ದ ವೇಣುಗೋಪಾಲ ಎಲ್ಲ ವಿವರವನ್ನು ರಾಷ್ಟ್ರೀಯ ನಾಯಕರಿಗೆ ನೀಡಿದ್ದಾರೆ. ಈ ನಡುವೆ ಸಿಎಂ ಬಂದು ಸಮಾಲೋಚಿಸಿದ ನಂತರ ರಾಜ್ಯ ಸಮ್ಮಿಶ್ರ ಸರ್ಕಾರದ ಮುಂದಿನ ನಡೆ ತಿಳಿದುಬರಲಿದೆ.
ಸಭೆಗೆ ಬಂದ ಬೈರತಿ ಸುರೇಶ್
ವೇಣುಗೋಪಾಲ್ ಭೇಟಿಗೆ ಆಗಮಿಸಿದ ಶಾಸಕ‌ ಬೈರತಿ ಸುರೇಶ್ ಇದೇ ವೇಳೆ ಮಾತನಾಡಿ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಶಾಸಕರು ರಾಜೀನಾಮೆ ಕೊಡ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ನನ್ನನ್ನಂತೂ ಬಿಜೆಪಿ ನಾಯಕರು ಸಂಪರ್ಕ ಮಾಡಿಲ್ಲ. ರಾಮಲಿಂಗಾರೆಡ್ಡಿಯವರ ರಾಜೀನಾಮೆ ಆಶ್ಚರ್ಯ ತಂದಿದೆ. ರಾಮಲಿಂಗಾರೆಡ್ಡಿ ಜೊತೆ ರಾಜ್ಯ ನಾಯಕರು ಮಾತುಕತೆ ನಡೆಸ್ತಿದ್ದಾರೆ. ಸಿಎಂ ಬದಲಾವಣೆ ವಿಚಾರ ಪಕ್ಷದ ಮಟ್ಟದಲ್ಲಿ ಚರ್ಚೆ ಆಗ್ತಿಲ್ಲ. ಮುಂಬೈ ಗೆ ಹೋಗುವ ಶಾಸಕರನ್ನು ವಾಪಸ್ ಕರೆತರುವ ಭರವಸೆ ಇದೆ. ಶಾಸಕರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಸ್ಯೆಗಳಿರಬಹುದು. ಅವು ರಾಜೀನಾಮೆಗೆ ಕಾರಣ ಆಗುವಷ್ಟು ದೊಡ್ಡ ಸಮಸ್ಯೆಗಳಲ್ಲ ಎಂದರು.
ಮತ್ತಿನ್ಯಾರು ಮುಂಬೈಗೆ ಹೋಗಲ್ಲ
ಸಭೆಯ ಬಳಿಕ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಒನ್ ಟು ಒನ್ ಸಭೆ ಮಾಡಿದ್ದಾರೆ. ನಮ್ಮ ಅಭಿಪ್ರಾಯ ಅವರಿಗೆ ತಿಳಿಸಿದ್ದೇವೆ. ಮುಂಬೈನಲ್ಲಿರುವ ಶಾಸಕರ ಜೊತೆಗೂ ಸಂಪರ್ಕ ಮಾಡ್ತಿದ್ದೇವೆ. ಇಲ್ಲಿರುವವರ ಜೊತೆಗೂ ಸಂಪರ್ಕದಲ್ಲಿದ್ದೇವೆ. ಮತ್ತಿನ್ಯಾರು ಮುಂಬೈಗೆ ಹೋಗಲ್ಲ. ಸಿಎಂ ಬಂದ ಬಳಿಕ ಏನು ಎತ್ತ ನಿರ್ಧರಿಸುತ್ತೇವೆ ಎಂದರು.
ನಾವು ಎಲ್ಲ ಮಾಹಿತಿ ನೀಡಿದ್ದೇವೆ
ಸಭೆಯ ಬಳಿಕ ಹೆಚ್.ಕೆ.ಪಾಟೀಲ್ ಮಾತನಾಡಿ, ಎಲ್ಲರ ಜೊತೆ ಒನ್ ಟು ಒನ್ ಸಭೆ ಮಾಡುತ್ತಿದ್ದಾರೆ. ವೇಣುಗೋಪಾಲ್ ಸಭೆ ನಡೆಸುತ್ತಿದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ನಾವು ಎಲ್ಲ ಮಾಹಿತಿಯನ್ನ ನೀಡಿದ್ದೇವೆ. ಸಿಎಂ ಕೂಡ ಸಂಜೆ ಇಲ್ಲಿಗೆ ಬರುತ್ತಾರೆ. ಆ ನಂತರ ಅವರ ಜೊತೆ ಮತ್ತೆ ಸಭೆ ನಡೆಸುತ್ತೇವೆ. ಸರ್ಕಾರ ಉಳಿಸುವ ಎಲ್ಲ ಪ್ರಯತ್ನ ನಡೆಸಿದ್ದೇವೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ರಾಜೀನಾಮೆ ನೀಡಿ ತೆರಳಿದ್ದ ಎಲ್ಲರೂ ನನ್ನ ಸ್ನೇಹಿತರು ನಾನು ಅವರೊಂದಿಗೆ ಸಮಾಲೋಚಿಸಿ ದ್ದೇನೆ. ಮುಖ್ಯಮಂತ್ರಿ ಕುಮಾರಸ್ವಾಮಿ ಇಂದು ಸಂಜೆ ನಗರಕ್ಕೆ ವಾಪಸಾಗಲು ಅವರೊಂದಿಗೆ ಚರ್ಚಿಸಿದ ನಂತರ ಸರ್ಕಾರದ ಯಾವುದೇ ರೀತಿಯ ಬದಲಾವಣೆ ಅಥವಾ ಸಂಪುಟ ವಿಸ್ತರಣೆಯ ಮಾತುಕತೆ ನಡೆಯಲಿದೆ. ಸಣ್ಣಪುಟ್ಟ ಗೊಂದಲಗಳು ಸರ್ಕಾರದಲ್ಲಿ ಇದೆ ಅದನ್ನ ಪಕ್ಷದ ಮುಖಂಡರು ಬಗೆಹರಿಸುತ್ತಾರೆ. ಬಿಜೆಪಿಯ ಊಹಾಪೋಹಗಳಿಗೆ ಬೆಲೆ ಕೊಡುವ ಅಗತ್ಯ ಇಲ್ಲ. ಎಲ್ಲವೂ ಸರಿಹೋಗಲಿದೆ ನೋಡುತ್ತಿರಿ ಎಂದು ತಿಳಿಸಿದರು.Conclusion:news
Last Updated : Jul 7, 2019, 8:14 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.