ಬೆಂಗಳೂರು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎ ಎಸ್ ಓಕಾ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಭವನದ ಗಾಜಿನ ಮನೆಯಲ್ಲಿ ಅಭಯ್ ಶ್ರೀನಿವಾಸ್ ಓಕಾ ಪ್ರಮಾಣವಚನ ಸ್ವೀಕಾರ ಮಾಡಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಪ್ರಮಾಣ ವಚನ ಬೋಧನೆ ಮಾಡಿದರು.
1983ರಲ್ಲಿ ಥಾಣೆ ಜಿಲ್ಲಾ ನ್ಯಾಯಾಲಯದಿಂದ ಎ ಎಸ್ ಓಕಾ ವೃತ್ತಿ ಶುರು ಮಾಡಿದರು. ಆಗಸ್ಟ್ 2003ರಲ್ಲಿ ಬಾಂಬೆ ಹೈಕೋರ್ಟ್ಗೆ ಅಡಿಷನಲ್ ಜಡ್ಜ್ ಆಗಿ ನೇಮಕವಾಗಿ, ನವೆಂಬರ್ 2005ರಲ್ಲಿ ಪೂರ್ಣಪ್ರಮಾಣದ ನ್ಯಾಯಮೂರ್ತಿಗಳಾಗಿ ನೇಮಕಗೊಂಡರು. ಈ ಹಿಂದೆ ಸಿಜೆ ಆಗಿ ದಿನೇಶ್ ಮಹೇಶ್ವರಿ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ಮಹೇಶ್ವರಿ, ಸುಪ್ರೀಂಕೋರ್ಟ್ನ ಜಡ್ಜ್ ಆಗಿ ಪದೋನ್ನತಿ ಹೊಂದಿದ್ದರು. ಸದ್ಯ ಹೈಕೋರ್ಟ್ಗೆ ಹೊಸ ಸಿಜೆ ಆಗಿ ಅಭಯ್ ಶ್ರೀನಿವಾಸ್ ಓಕಾ ನೇಮಕವಾಗಿದ್ದಾರೆ.
ಇನ್ನು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಹೈಕೋರ್ಟ್ ಹಿರಿಯ ನ್ಯಾಯಮೂರ್ತಿಗಳು, ಹಿರಿಯ ವಕೀಲರು, ರಾಜ್ಯಪೊಲಿಸ್ ಮಹಾನಿರ್ದೇಶಕಿ ನೀಲಮಣಿರಾಜು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.