ಬೆಂಗಳೂರು: ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಜೆಡಿಎಸ್ನ ಮೂವರು ಹಾಗೂ ಕಾಂಗ್ರೆಸ್ನ 8 ಜನ ಅತೃಪ್ತ ಶಾಸಕರು ಸ್ಪೀಕರ್ ಕಚೇರಿಗೆ ತೆರಳಿ ತಮ್ಮ ಶಾಸಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ಈ ಮೂಲಕ ದೋಸ್ತಿ ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ.
ಜೆಡಿಎಸ್ನ ಮೂವರು ರಾಜೀನಾಮೆ: ಜೆಡಿಎಸ್ನ ಶಾಸಕರಾದ ಹೆಚ್.ವಿಶ್ವನಾಥ್ (ಹುಣಸೂರು), ನಾರಾಯಣಗೌಡ (ಕೆ.ಆರ್.ಪೇಟೆ), ಕೆ.ಗೋಪಾಲಯ್ಯ (ಮಹಾಲಕ್ಷ್ಮಿ ಲೇಔಟ್) ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ನ 8 ಮಂದಿ ರಾಜೀನಾಮೆ: ಕಾಂಗ್ರೆಸ್ನ ಶಾಸಕರಾದ ರಾಮಲಿಂಗಾರೆಡ್ಡಿ (ಬಿಟಿಎಂ ಲೇಔಟ್), ರಮೇಶ ಜಾರಕಿಹೊಳಿ (ಗೋಕಾಕ್), ಮಹೇಶ್ ಕುಮಟಳ್ಳಿ (ಅಥಣಿ), ಪ್ರತಾಪ್ ಗೌಡ (ಮಸ್ಕಿ), ಬಿ.ಸಿ ಪಾಟೀಲ್ (ಹಿರೇಕೇರೂರು) , ಶಿವರಾಮ್ ಹೆಬ್ಬಾರ್ (ಯಲ್ಲಾಪುರ), ಎಸ್.ಟಿ.ಸೋಮಶೇಖರ್ (ಯಶವಂತಪುರ), ಬೈರತಿ ಬಸವರಾಜ್ (ಕೆ.ಆರ್.ಪುರಂ) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ನೀಡದ ಶಾಸಕ ಮುನಿರತ್ನ
ಅತೃಪ್ತರ ಜತೆ ಶಾಸಕ ಮುನಿರತ್ನ (ರಾಜರಾಜೇಶ್ವರಿ ಕ್ಷೇತ್ರ) ತೆರಳಿದ್ದರು. ಆದರೆ, ರಾಜೀನಾಮೆ ನೀಡಿರುವುದಿಲ್ಲ. ರಾಮಲಿಂಗಾರೆಡ್ಡಿ ಅವರ ಪುತ್ರಿ, ಶಾಸಕಿ ಸೌಮ್ಯಾರೆಡ್ಡಿ (ಜಯನಗರ) ಸಹ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.