ಬೀದರ್: ಮಹಿಳೆಯೊಬ್ಬರು ತಮಗೆ ಕಚ್ಚಿದ ಹಾವನ್ನು ಕೊಂದು ಬಳಿಕ ಹಾವಿನ ಜೊತೆ ಬಂದು ಅಸ್ಪತ್ರೆಗೆ ದಾಖಲಾಗಿರುವ ಘಟನೆ ಇಲ್ಲಿನ ಭಾಲ್ಕಿ ತಾಲೂಕಿನ ತಳವಾಡ (ಎಂ) ಗ್ರಾಮದಲ್ಲಿ ನಡೆದಿದೆ.
ಗದ್ದೆಯಲ್ಲಿ ಕೆಲಸ ಮಾಡುವಾಗ ಶೀಲಾಬಾಯಿ ಎಂಬುವರ ಕಾಲಿಗೆ ಹಾವು ಕಡಿದಿದೆ. ತಕ್ಷಣ ಹಾವನ್ನು ಹಿಡಿದ ಮಹಿಳೆ ಅದನ್ನು ಕೊಂದು ಬೆಂಕಿಯಲ್ಲಿ ಸುಟ್ಟಿದ್ದಾರೆ. ನಂತರ ಹಾವಿನ ಕಳೇಬರ ಸಮೇತ ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಾವಿನ ಜೊತೆ ಆಸ್ಪತ್ರೆಗೆ ಬಂದ ಶೀಲಾಬಾಯಿ ಇದೇ ಹಾವು ನನಗೆ ಕಡಿದಿದ್ದು, ಚಿಕಿತ್ಸೆ ನೀಡಿ ಎಂದು ವೈದ್ಯರ ಬಳಿ ಹೇಳಿಕೊಂಡಿದ್ದಾರೆ. ಬಳಿಕ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದು, ಶೀಲಾಬಾಯಿ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.