ETV Bharat / state

ಕೊರೊನಾ ಬರದಂತೆ ತಡೆಯಲು ಮುನ್ನೆಚ್ಚರಿಕೆಯೇ ಮದ್ದು: ಡಿಸಿ - ಬಿಕೆಡಿಬಿ ಸಭಾಂಗಣ

ಕಿಲ್ಲರ್​​ ಕೊರೊನಾ ಹರಡುವಿಕೆ ತಡೆಗಟ್ಟಲು ಜಿಲ್ಲಾಡಳಿತ ಜಾರಿಗೊಳಿಸುತ್ತಿರುವ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಕೊರೊನಾ ಹೊಡೆದೋಡಿಸಲು ಕೈ ಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಹೆಚ್.ಆರ್.ಮಹಾದೇವ ಮನವಿ ಮಾಡಿದ್ದಾರೆ.

Dr. HR, Mahadeva
ಡಾ. ಎಚ್.ಆರ್, ಮಹಾದೇವ.
author img

By

Published : May 3, 2020, 10:31 PM IST

ಬಸವಕಲ್ಯಾಣ: ಕಣ್ಣಿಗೆ ಕಾಣದ ಚಿಕ್ಕ ವೈರಸ್​​ನೊಂದಿಗೆ ಹೋರಾಟ ನಡೆಸಲು ನಮ್ಮಲ್ಲಿ ಯಾವುದೇ ಆಯುಧವಿಲ್ಲ. ಮುನ್ನೆಚ್ಚರಿಕೆಯೊಂದೇ ಇದಕ್ಕೆ ಸೂಕ್ತ ಮದ್ದು. ಹೀಗಾಗಿ ನಾವು ಇಡುವ ಪ್ರತಿಯೊಂದು ಹೆಜ್ಜೆಯೂ ಎಚ್ಚರಿಕೆಯಿಂದ ಇಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಹೆಚ್.ಆರ್.ಮಹಾದೇವ ಅಭಿಪ್ರಾಯಪಟ್ಟಿದ್ದಾರೆ.

ನಗರದ ಬಿಕೆಡಿಬಿ ಸಭಾಂಗಣದಲ್ಲಿ ಖಾಸಗಿ ವೈದ್ಯರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಿಲ್ಲರ್​​ ಕೊರೊನಾ ಹರಡುವಿಕೆ ತಡೆಗಟ್ಟಲು ಆಡಳಿತದಿಂದ ಜಾರಿಗೊಳಿಸುತ್ತಿರುವ ನಿಯಮಗಳನ್ನು ಪ್ರತಿಯೊಬ್ಬರು ಪಾಲಿಸುವ ಮೂಲಕ ಕೊರೊನಾ ಹೊಡೆದೋಡಿಸಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಬಿಕೆಡಿಬಿ ಸಭಾಂಗಣದಲ್ಲಿ ಖಾಸಗಿ ವೈದ್ಯರೊಂದಿಗೆ ಡಿಸಿ ಸಭೆ

ಸೋಂಕಿತ ರೋಗಿಗಳ ಮಾಹಿತಿ ನೀಡಬೇಕು ಎಂದು ಈ ಮುಂಚೆಯೇ ತಿಳಿಸಲಾಗಿದೆ. ಆದರೆ, ಖಾಸಗಿ ಆಸ್ಪತ್ರೆಗಳಿಂದ ನಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಹೀಗಾದರೆ ಸೋಂಕು ನಿಯಂತ್ರಣ ಕಷ್ಟವಾಗಬಹುದು. ಇದಕ್ಕೆ ನಿಮ್ಮ ಸಹಕಾರ ಅಗತ್ಯವಾಗಿದ್ದು, ಶಂಕಿತ ವ್ಯಕ್ತಿಗಳ ಬಗ್ಗೆ ಪ್ರತಿ‌ದಿನ‌ ಮಾಹಿತಿ‌ ನೀಡಬೇಕು ಎಂದರು.

ಎಲ್ಲಾ ಮೆಡಿಕಲ್​​ಗಳಲ್ಲಿ ಕಡ್ಡಾಯವಾಗಿ ಕಂಪ್ಯೂಟರ್​ ಬಳಸಬೇಕು. ದಯವಿಟ್ಟು ಇದರಲ್ಲಿ ನಿರ್ಲಕ್ಷ್ಯ ವಹಿಸಬೇಡಿ. ಜ್ವರ, ನೆಗಡಿ, ತಲೆನೋವು ಮಾತ್ರೆಗಳು ನೀಡುವ ವೇಳೆ ಅವರ ಹೆಸರು, ಮೊಬೈಲ್ ನಂಬರ್​, ವಿಳಾಸ ಪಡೆದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಶಂಕಿತರನ್ನು ಗುರುತಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.