ETV Bharat / state

ದರೋಡೆಕೋರರ ಹೆಡೆಮುರಿ ಕಟ್ಟೇಕಟ್ತೇವಿ... ಎಸ್​​​​ಪಿ ವಿಶ್ವಾಸದ ಮಾತು - Bidar latest news

ದರೋಡೆಕೋರರು ಲಾರಿ ಚಾಲಕನಿಗೆ ಚಾಕು ತೋರಿಸಿ ಆತನ ಬಳಿ ಇದ್ದ ಮೊಬೈಲ್​, ಹಣ ಕದ್ದು ಪರಾರಿಯಾಗಿದ್ದರು. ಈ ಹಿನ್ನೆಲೆ ಅವರನ್ನು ಬಂಧಿಸಲು ಹೊದ ಪೊಲೀಸರ ಮೇಲೂ ಹಲ್ಲೆ ಮಾಡಿ ದರೋಡೆಕೋರರು ತಪ್ಪಿಸಿಕೊಂಡಿದ್ದಾರೆ. ಈ ಪ್ರಕರಣದ ಬಗ್ಗೆ ಮಾತನಾಡಿರುವ ಎಸ್​​ಪಿ ಆರೋಪಿಗಳನ್ನ ಶೀಘ್ರವೇ ಬಂಧಿಸುತ್ತೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದರೋಡೆ ಮಾಡಿದ್ದಲ್ಲದೆ ಪೊಲೀಸರ ಮೇಲೆಯೆ ಹಲ್ಲೆ
author img

By

Published : Sep 24, 2019, 9:23 PM IST

Updated : Sep 24, 2019, 9:36 PM IST

ಬೀದರ್​ : ಹುಮನಾಬಾದ್​ ತಾಲೂಕಿನ ಕಪ್ಪರಗಾಂವ ಕ್ರಾಸ್ ಬಳಿ ನಡೆದ ರಸ್ತೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದರೋಡೆಕೋರರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ತಿಳಿಸಿದ್ದಾರೆ .

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದರೋಡೆಕೋರರ ಬಗ್ಗೆ ಸುಳಿವು ಸಿಕ್ಕಿದೆ. ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದ್ದು, ಅತಿ ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಮಾಹಿತಿ ನೀಡಿದರು.

ಏನಿದು ಘಟನೆ?
ಸೋಮವಾರ ರಾತ್ರಿ ಕಪ್ಪರಗಾಂವ ಬಳಿ ಲಾರಿಯನ್ನು ತಡೆದು, ಚಾಲಕನಿಗೆ ಚಾಕು ತೋರಿಸಿ ಆತನಿಂದ 5ಸಾವಿರ ರೂ. ನಗದು ಹಣ ಹಾಗೂ ಮೊಬೈಲ್, ಎಟಿಎಂ ಕಾರ್ಡ್ ಕಸಿದುಕೊಂಡು ಕಾರಿನಲ್ಲಿ ಪರಾರಿಯಾಗಿತ್ತು. ಮಾಹಿತಿ ಅರಿತ ಹಳ್ಳಿಖೇಡ ಠಾಣೆ ಪೊಲೀಸರ ತಂಡ ದರೋಡೆಕೋರರ ಬೆನ್ನು ಹತ್ತಿದಾಗ ಅವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪಿಎಸ್‌ಐ ಮಹಾಂತೇಶ ಪಾಟೀಲ್​, ತಮ್ಮ ರಿವಾಲ್ವರ್​ನಿಂದ ಎರಡು ಸುತ್ತು ಗುಂಡು ಹಾರಿಸಿದ್ದಾರೆ.

ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ಹೋದ ಸ್ಥಳ ಪರಿಶೀಲನೆ ಮಾಡಿದ ಎಸ್​ಪಿ

ದರೋಡೆಗೆ ಬಳಸಿದ್ದು ಕದ್ದ ಕಾರು: ದರೋಡೆಗೆ ಬಳಸಿದ ಕಾರು ಹೈದರಾಬಾದ್​ನಿಂದ ಕಳವು ಮಾಡಿಕೊಂಡು ಬರಲಾಗಿದೆಯಂತೆ. ಅಲ್ಲಿನ ಖಾಸಗಿ ಸಂಸ್ಥೆಗೆ ಸೇರಿದ ಮಾರುತಿ ಇಟಿಯೋಸ್ ಕಾರನ್ನು ಈ ದರೋಡೆಕೋರರು ಕಳೆದ 21 ರಂದು ಕದ್ದು ತಂದಿದ್ದರು ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

Intro:ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

ಸ್ಲಗ್ ಕೆಎ_ಬಿಡಿಆರ್_ಬಿಎಸ್‌ಕೆ_೨೪_೧ ಮತ್ತು ೨ ಮತ್ತು ೩
ಬಸವಕಲ್ಯಾಣ ತಾಲೂಕಿನ ಖಾನಾಪೂರ ಕ್ರಾಸ್ ಬಳಿ ಕಾರು ನಿಲ್ಲಿಸಿ ಪರಾರಿಯಾದ ದರೋಡೆಕೋರರ ಕಾರು ಪರಿಶೀಲಿಸುತ್ತಿರುವ ಪೊಲೀಸ ಅಧಿಕಾರಿಗಳು.

ಎಸ್ಪಿ ಶ್ರಿÃಧರ ಬೈಟ್
ಸ್ಲಗ್ ಕೆಎ_ಬಿಡಿಆರ್_ಬಿಎಸ್‌ಕೆ_೨೪_೪
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಟಿವಿಗೆ ಮಾಹಿತಿ ನೀಡಿದ ಎಸ್ಪಿ ಟಿ.ಶ್ರಿÃಧರ

ಶೀಘ್ರದಲ್ಲೆ ದರೋಡೆ ಕೋರರ ಬಂಧನ
ಬಸವಕಲ್ಯಾಣ
ರಾಷ್ಟಿçÃಯ ಹೆದ್ದಾರಿ ೬೫ರ ಮೇಲಿರುವ ಹುಮನಾಬಾದ ತಾಲೂಕಿನ ಕಪ್ಪರಗಾಂವ ಕ್ರಾಸ್ ಬಳಿ ನಡೆದ ರಸ್ತೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಕೋರರನ್ನು ಶೀಘ್ರದಲ್ಲೆ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಟಿ. ಶ್ರಿÃಧರ್ ತಿಳಿಸಿದ್ದಾರೆ ಬಸವಕಲ್ಯಾಣ ತಾಲ್ಲೂಕಿನ ಖಾನಾಪುರ ಕ್ರಾಸ್ ಬಳಿ ಈಟಿವಿ ಭಾರತದೊಂದಿಗೆ ಮಾತನಾಡಿದ ಎಸ್ಪಿ ಶ್ರಿÃಧರ, ದರೋಡೆಕೋರರ ಬಗ್ಗೆ ಸುಳಿವು ಸಿಕ್ಕಿದೆ. ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದ್ದು, ಅತಿ ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಪೊಲೀಸ ಅಧಿಕಾರಿಗಳ ಪರಿಶೀಲನೆ
ಸೋಮವಾರ ರಾತ್ರಿ ಕಪ್ಪರಾಂವ ಬಳಿ ಲಾರಿ ತಡೆದು ಚಾಕು ತೋರಿಸಿ ಚಾಲಕನನ್ನು ಬೆದರಿಸಿದ ನಾಲ್ವರು ದರೋಡೆ ಕೋರ ತಂಡ, ಆತನಿಂದ ೫ ಸಾವಿರ ರೂ. ನಗದು ಹಣ ಹಾಗೂ ಒಂದು ಮೊಬೈಲ್, ಒಂದು ಎಟಿಎಂ ಕಾರ್ಡ್ ಕಸಿದುಕೊಂಡು ಕಾರಿನಲ್ಲಿ ಪರಾರಿಯಾಗಿದೆ.
ದರೋಡೆ ಬಗ್ಗೆ ಮಾಹಿತಿ ತಿಳಿದ ಹಳ್ಳಿಖೇಡ ಠಾಣೆ ಪೊಲೀಸರ ತಂಡ ದರೋಡೆಕೋರರ ಬೆನ್ನು ಹತ್ತಿದೆ. ನಂಗಾಂವ ಕ್ರಾಸ್ ಬಳಿ ಪೊಲೀಸರು ಕಾರು ತಡೆದು ಪರಿಶೀಲಿಸುವಾಗ ದರೋಡೆಕೋರರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ತಪ್ಪಿಸಿಕೊಳ್ಳಲು ಪಿಎಸ್‌ಐ ಮಹಾಂತೇಶ ಪಾಟೀಲ, ತಮ್ಮ ರಿವಲ್ ಬಾರನಿಂದ ದರೋಡೆಕೋರರ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ.
ಪಿಎಸ್‌ಐ ಅವರು ಹಾರಿಸಿದ ಗುಂಡು ದರೋಡೆಕೋರರಿಗೆ ತಗುಲುವ ಬದುಲು ಅವರ ಕಾರಿಗೆ ತಗುಲಿವೆ. ಪೊಲೀಸರಿಂದ ಮತ್ತೆ ತಪ್ಪಿಸಿಕೊಂಡ ದರೋಡೆಕೋರರು ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿರುವ ಬಸವಕಲ್ಯಾಣ ತಾಲೂಕಿನ ಖಾನಾಪೂರ ಕ್ರಾಸ್ ಬಳಿ ಬಂದು ಕಾರು ಬಿಟ್ಟು ಪರಾರಿಯಾಗಿದ್ದಾರೆ. ಕಾರು ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆದ ಎಸ್ಪಿ ಶ್ರಿÃಧರ ಅವರ ನೇತೃತ್ವದ ಪೊಲೀಸ್‌ರ ತಂಡ, ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ. ಸ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡದವರು ಸಹ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.
ದರೋಡೆಗೆ ಸಂಬಂಧಿಸಿದಂತೆ ಹುಮನಾಬಾದ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾದರೆ, ಪೊಲೀಸರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಹಳ್ಳಿಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆಗೆ ಬಳಸಿದ್ದು ಕದ್ದ ಕಾರು

ದರೋಡೆಗೆ ಬಳಸಿದ ಕಾರು ಹೈದ್ರಾಬಾದನಿಂದ ಕಳವು ಮಾಡಿಕೊಂಡು ತರಲಾಗಿದೆ. ಸ್ಕೆöÊ ಕ್ಯಾಬ್ ಎನ್ನುವ ಸಂಸ್ಥೆಗೆ ಸೇರಿದ ಮಾರುತಿ ಇಟಿಯೋಸ್ ಕಾರು ಕಳೆದ ೨೧ ರಂದು ಹೈದ್ರಾಬಾದನಲ್ಲಿ ಕಾರು ಚಾಲಕನಿಗೆ ಚಾಕು ತೊರಿಸಿ ಬೆದರಿಸಿ ಕಳವು ಮಾಡಿಕೊಂಡು ಬರಾಲಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

Body:UDAYAKUMAR MULE Conclusion:BASAVAKALYAN
Last Updated : Sep 24, 2019, 9:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.