ETV Bharat / state

ನಿರ್ಬಂಧಿತ ಪ್ರದೇಶದಲ್ಲಿದ್ದ ಇಬ್ಬರಿಗೆ ಕೊರೊನಾ, ಬೀದರ್‌ನಲ್ಲಿ 30ಕ್ಕೇರಿದ ಸೋಂಕಿತರು..

author img

By

Published : May 12, 2020, 3:11 PM IST

Updated : May 12, 2020, 3:28 PM IST

ಬೀದರ್​ನಲ್ಲಿ ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ.

bidar
ಬೀದರ್​​

ಬೀದರ್ : ಜಿಲ್ಲೆಯಲ್ಲಿಂದು ಇಬ್ಬರಲ್ಲಿ ಸೋಂಕಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 30ಕ್ಕೆ ಏರಿಕೆಯಾಗಿದೆ. ಈ ಇಬ್ಬರು ಸೋಂಕಿತರು ಕೂಡಾ ದೆಹಲಿಯ ತಬ್ಲಿಘಿ ಜಮಾತ್​ನಿಂದ ಬಂದವರ ದ್ವಿತೀಯ ಸಂಪರ್ಕದಲ್ಲಿದ್ದವರಾಗಿದ್ದಾರೆ.

corona cases in bidar
ಬೀದರ್​ನಲ್ಲಿ ಕೊರೊನಾ ಸೋಂಕಿತರು

ಓಲ್ಡ್​ ಸಿಟಿಯ ನಿರ್ಬಂಧಿತ ವಲಯದಲ್ಲಿ ಸಾಮೂಹಿಕವಾಗಿ ಸೋಂಕು ಪರೀಕ್ಷೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರಿಗೆ ಸೋಂಕು ಪತ್ತೆಯಾಗಿದೆ. ಈವರೆಗೆ 14 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. 15 ಮಂದಿ ಬ್ರಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾನೆ.

ಓಲ್ಡ್ ಸಿಟಿಯ ಬಡಾವಣೆಗಳಲ್ಲಿ ತಬ್ಲಿಘಿ ಜಮಾತ್​ಗೆ ಹೋಗಿ ಬಂದವರಿಂದ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 ಸೋಂಕು ದ್ವಿತೀಯ ಸಂಪರ್ಕಿತರಲ್ಲಿ ಕಾಣಿಸಿದೆ. ಈಗ ಕಂಡು ಬಂದಿರುವ ಸೋಂಕಿತರನ್ನು ಮೊದಲೇ ಕ್ವಾರಂಟೈನ್​ ಮಾಡಿದ ಕಾರಣದಿಂದ ಇನ್ನಷ್ಟು ಮಂದಿಗೆ ಸೋಂಕು ಹರಡುವುದನ್ನು ತಪ್ಪಿಸಿದಂತಾಗಿದೆ.

Last Updated : May 12, 2020, 3:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.