ETV Bharat / state

ಗುಡುಗು ಮಿಂಚಿನೊಂದಿಗೆ ಸುರಿದ ಮಳೆ: ಸಿಡಿಲಿಗೆ ಜಾನುವಾರು ಬಲಿ - premature rainfall news

ಬಸವಕಲ್ಯಾಣದಲ್ಲಿ ಭಾರಿ ಮಳೆ ಸುರಿದಿದ್ದು ಸಿಡಿಲು ಬಡಿದು 60 ಸಾವಿರಕ್ಕೂ ಅಧಿಕ ಬೆಲೆ ಬಾಳುವ ಎರಡು ಜಾನುವಾರುಗಳು ಮೃತಪಟ್ಟಿವೆ.

Two cattle sacrifice from premature rainfall in Bidar
ಸಿಡಿಲಿಗೆ ಎರಡು ಜಾನುವಾರು ಬಲಿ
author img

By

Published : May 13, 2020, 5:57 PM IST

ಬಸವಕಲ್ಯಾಣ (ಬೀದರ್​) : ಗುಡುಗು ಮಿಂಚು ಬಿರುಗಾಳಿಯೊಂದಿಗೆ ಸುರಿದ ಅಕಾಲಿಕ ಮಳೆಯಲ್ಲಿ, ಸಿಡಿಲು ಬಡಿದು ಎರಡು ಜಾನುವಾರು ಮೃತಪಟ್ಟ ಘಟನೆ ತಾಲೂಕಿನ ಉಮಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅವಿನಾಶ ವೆಂಕಟ್ ಪಂಚಾಳ ಎನ್ನುವರಿಗೆ ಸೇರಿದ 1 ಆಕಳು ಮತ್ತು 1 ಎಮ್ಮೆ ಸಿಡಿಲಿಗೆ ಬಲಿಯಾಗಿವೆ. ತನ್ನ ಜಮೀನಿನ ಮರದ ಕೆಳಗೆ ಕಟ್ಟಿದ ಸುಮಾರು 60 ಸಾವಿರಕ್ಕೂ ಅಧಿಕ ಬೆಲೆ ಬಾಳುವ 2 ಜಾನುವಾರುಗಳು ಸಿಡಿಲಿನ ಹೊಡೆತಕ್ಕೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿವೆ.

ಇನ್ನು ಘಟನೆ ಬಗ್ಗೆ ಮಾಹಿತಿ ಪಡೆದ ಪಶು ವೈದ್ಯ ಡಾ: ಮಂಜುನಾಥ ಮುಂಗಳೆ ಹಾಗೂ ಗ್ರಾಮೀಣ ಠಾಣೆ ಪಿಎಸ್ಐ ವಸಿಮ್ ಪಟೇಲ್​ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.