ETV Bharat / state

ಪ್ರತ್ಯೇಕ ಅಪಘಾತ: ಮೈಲಾರ ಮಲ್ಲಣ್ಣ ದರ್ಶನದಿಂದ ವಾಪಸ್ಸಾಗುತ್ತಿದ್ದ ಇಬ್ಬರು ಯುವಕರು ಸೇರಿ ಮೂವರ ಸಾವು - ಮಗು ಸೇರಿ ಇಬ್ಬರಿಗೆ ಗಾಯ

ಬೀದರ್​ನಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಮೈಲಾರ ಮಲ್ಲಣ್ಣ ದರ್ಶನ ಪಡೆದ ಇಬ್ಬರು ಯುವಕರು ಸೇರಿ ಮೂವರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

Three people died  Three people died in Separate accident  Separate accident in Bidar  ಬೀದರ್​ನಲ್ಲಿ ಪ್ರತ್ಯೇಕ ಅಪಘಾತ  ಮಲ್ಲಣ್ಣ ದರ್ಶನ ಪಡೆದ ಇಬ್ಬರು ಯುವಕರು ಸೇರಿ ಮೂವರು ಸಾವು  ಬೀದರ್​ನಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತ  ಯುವಕರು ಸೇರಿ ಮೂವರು ಮೃತ  ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತ  ಇಬ್ಬರು ಯುವಕರು ಸಾವು  ಮಗು ಸೇರಿ ಇಬ್ಬರಿಗೆ ಗಾಯ
ಬೀದರ್​ನಲ್ಲಿ ಪ್ರತ್ಯೇಕ ಅಪಘಾತ
author img

By

Published : Dec 19, 2022, 11:16 AM IST

ಬೀದರ್ : ಇಂಚೂರು, ಕೇಸರಜವಳಗಾ ಬಳಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ದೇವರ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ಇಬ್ಬರು ಮತ್ತು ಬೈಕ್​ನಲ್ಲಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಇಬ್ಬರು ಯುವಕರು ಸಾವು: ಭಾಲ್ಕಿ ತಾಲೂಕಿನ ವಾಗಲಗಾಂವ ಗ್ರಾಮದ ಮಲ್ಲಿಕಾರ್ಜುನ ಬಿರಾದಾರ (24), ಪಂಕಜ ವಾಗ್ದಾರೆ (28) ಖಾನಾಪುರದ ಮೈಲಾರ ಮಲ್ಲಣ್ಣ ದರ್ಶನ ಪಡೆದು ಬೈಕ್​ನಲ್ಲಿ ಸ್ವಗ್ರಾಮಕ್ಕೆ ಮರಳುವಾಗ ಇಂಚೂರು ಬಳಿ ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಿಟ್ ಆ್ಯಂಡ್ ರನ್​ಗೆ ವ್ಯಕ್ತಿ ಬಲಿ : ಹುಲಸೂರಿನಿಂದ ಮಹಾರಾಷ್ಟ್ರದ ತೊಗರಿಗೆ ಪತ್ನಿಯೊಂದಿಗೆ ತೆರಳುತ್ತಿದ್ದ ಜಗನ್ನಾಥ ಮಡಿವಾಳ ಎಂಬುವವರ ಬೈಕ್​ಗೆ ಕೇಸರಜವಳಗಾ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಜಗನ್ನಾಥ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಪತ್ನಿ ಚಂದ್ರಕಲಾ ಮತ್ತು ನಾಲ್ಕು ವರ್ಷದ ಮಗುವಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಅವರಿಬ್ಬರನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್​ಐ ಸೂರ್ಯಕಾಂತ ಕರಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಹಕರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಅಪಘಾತಗಳ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಓದಿ: ಬಳ್ಳಾರಿ: ಮೂವರು ವಿದ್ಯಾರ್ಥಿಗಳು ಮೇಲೆ ಹರಿದ ಕೆಎಸ್​ಆರ್​ಟಿಸಿ ಬಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.