ಬೀದರ್: ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿಗೆ ಮೂವರು ಬಲಿಯಾಗಿದ್ದು, ಜನತೆಯಲ್ಲಿ ಆತಂಕ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು 18 ಜನರಲ್ಲಿ ಕೊರೊನಾ ಸೋಂಕು ದೃಢವಾಗಿದ್ದು, ಸೋಂಕಿತರ ಸಂಖ್ಯೆ 555 ಏರಿಕೆಯಾಗಿದೆ. ನಗರದ ಒಲ್ಡ್ ಸಿಟಿಯ ಡಿಸೇಂಟ್ ಫಂಕ್ಷನ್ ಹಾಲ್ ಹತ್ತಿರದ ದುಲ್ಹನ ದರ್ವಾಜ ರೋಡ್ ಬಳಿಯ 70 ವರ್ಷದ ವ್ಯಕ್ತಿ, ಬಸವಕಲ್ಯಾಣ ನಗರದ ತ್ರೀಪುರಾಂತ ಬಡಾವಣೆಯ 73 ವರ್ಷದ ಮಹಿಳೆ ಹಾಗೂ ಭಾಲ್ಕಿ ತಾಲೂಕಿನ ಹುಪಳಾ ಗ್ರಾಮದ 65 ವರ್ಷದ ವ್ಯಕ್ತಿ ಸಾವನಪ್ಪಿದ್ದು ಸಾವಿನ ನಂತರ ಪರಿಕ್ಷಾ ವರದಿ ಪಾಸಿಟಿವ್ ಆಗಿದೆ ಎನ್ನಲಾಗಿದೆ.
ಉಳಿದ 15 ಸೋಂಕಿತರ ಪೈಕಿ ಬೀದರ್ ತಾಲೂಕಿನ ಬೆಳ್ಳುರ-01, ಹುಮನಾಬಾದ್ ತಾಲೂಕಿನ ಘಾಟಬೋರಾಳ-01, ಚಂದನಹಳ್ಳಿ-01, ಬೀದರ್ ತಾಲೂಕಿನ ಜನವಾಡ-01, ನಗರದ ನೌಬಾದ್ -01, ಚಿಟಗುಪ್ಪ-07, ಬಸವಕಲ್ಯಾಣ-01, ಬೀದರ್-02 ಜನ ಸೋಂಕಿತರಾಗಿದ್ದಾರೆ