ETV Bharat / state

ಬಸವಕಲ್ಯಾಣದಲ್ಲಿ ತಂದೆ-ಮಗ ಸೇರಿ ಮತ್ತೆ ಮೂವರಿಗೆ ತಗುಲಿದ ಕೊರೊನಾ - Bhasavakalyana Corona latest news

ಬಸವಕಲ್ಯಾಣ ತಾಲೂಕಿನಲ್ಲಿ ಇಂದು ಮೂವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇವರನ್ನು ಬೀದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Basavakalyana
Basavakalyana
author img

By

Published : Jun 29, 2020, 10:11 PM IST

ಬಸವಕಲ್ಯಾಣ: ತಾಲೂಕಿನಲ್ಲಿ ಮಾರಕ ಕೊರೊನಾ ಅಟ್ಟಹಾಸ ಮುಂದುವರೆದಿದೆ. ತಂದೆ-ಮಗ ಸೇರಿ ಮತ್ತೆ ಮೂವರಲ್ಲಿ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 204ಕ್ಕೆ ಏರಿದೆ.

ಅನಾರೋಗ್ಯದಿಂದ ಬೀದರ್ ಆಸ್ಪತ್ರೆಗೆ ದಾಖಲಾಗಿದ್ದ ನಗರದ 38 ವರ್ಷದ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಈತನ ವಿಳಾಸ ಪತ್ತೆಯಾಗಿಲ್ಲ.

ತಾಲೂಕಿನ ಮೋರಖಂಡಿ ಗ್ರಾಮದ 49 ವರ್ಷದ ವ್ಯಕ್ತಿ ಹಾಗೂ ಈತನ 22 ವರ್ಷದ ಪುತ್ರನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.

ನಿನ್ನೆ ಇದೇ ಗ್ರಾಮದ 38 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿತ್ತು. ಇಂದು ಇವರ ಪತಿ ಹಾಗೂ ಪುತ್ರನಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರೆಲ್ಲಾ ಮಹಾರಾಷ್ಟ್ರದ ಮುಂಬೈನಿಂದ ಮರಳಿ ಬಂದವರಾಗಿದ್ದಾರೆ. ಸೋಂಕಿತರೆಲ್ಲರನ್ನು ಬೀದರ್ ಆಸ್ಪತ್ರೆಗೆ ರವಾನಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.