ETV Bharat / state

ಕೊರೊನಾ ಭೀತಿ: ಕ್ವಾರಂಟೈನ್​​ ಕೇಂದ್ರಕ್ಕೆ ಕಾಲಿಡುತ್ತಿಲ್ಲವಂತೆ ನಿಯೋಜಿತ ಸಿಬ್ಬಂದಿ - ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ್ಯ

ಕಮಲನಗರ ಪಟ್ಟಣದ ಮೆಟ್ರಿಕ್​​ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಕ್ವಾರಂಟೈನ್​ ಕೇಂದ್ರಕ್ಕೆ ಹಗಲು ಹೊತ್ತಿನಲ್ಲಿ ಮಾತ್ರ ಒಬ್ಬ ಅಧಿಕಾರಿ ಬಂದು ಹೋಗುತ್ತಿದ್ದಾರೆ. ಆದ್ರೆ ರಾತ್ರಿ ಪಾಳಿಯಲ್ಲಿರುವ ಶಿಕ್ಷಕ ನಾಲ್ಕು ದಿನಗಳಿಂದ ಇತ್ತ ಕಾಲಿಟ್ಟಿಲ್ಲವಂತೆ.

the-staffs-hesitate-to-come-to-the-quarantine-center-at-bidar-by-panic-of-corona
ಕ್ವಾರಂಟೈನ್​ ಕೇಂದ್ರ
author img

By

Published : May 20, 2020, 4:26 PM IST

Updated : May 20, 2020, 5:43 PM IST

ಬೀದರ್: ಜಿಲ್ಲೆಯಲ್ಲಿ ಕೋವಿಡ್​-19 ವೈರಸ್​ನ ನಿಯಂತ್ರಣಕ್ಕಾಗಿ ನೆರೆ ರಾಜ್ಯದಿಂದ ಬಂದ ಜನರನ್ನು ಕ್ವಾರಂಟೈನ್​ನಲ್ಲಿಡಲಾಗಿದೆ. ಆದ್ರೆ ಇದರ ಮೇಲುಸ್ತುವಾರಿ ವಹಿಸಿಕೊಂಡ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ್ಯ ತೋರುತ್ತಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯ ಕಮಲನಗರ ಪಟ್ಟಣದ ಮೆಟ್ರಿಕ್​​ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಕ್ವಾರಂಟೈನ್​ ಕೇಂದ್ರಕ್ಕೆ ಹಗಲಿನಲ್ಲಿ ಮಾತ್ರ ಒಬ್ಬ ಅಧಿಕಾರಿ ಬಂದು ಹೋಗುತ್ತಿದ್ದಾರೆ. ಆದ್ರೆ ರಾತ್ರಿ ಪಾಳಿಯಲ್ಲಿರುವ ಶಿಕ್ಷಕ ನಾಲ್ಕು ದಿನಗಳಿಂದ ಇತ್ತ ಕಾಲಿಟ್ಟಿಲ್ಲವಂತೆ. ಕೇಳಿದ್ರೆ ಕೊರೊನಾ ಸೋಂಕಿತರು ಇರ್ತಾರೆ, ನಾನು ಬರೋದಿಲ್ಲ ಎಂದು ಹೇಳ್ತಿದ್ದಾರಂತೆ.

'ಕ್ವಾರಂಟೈನ್'​​ ಕೇಂದ್ರಕ್ಕೆ ಕಾಲಿಡುತ್ತಿಲ್ಲವಂತೆ ಕರ್ತವ್ಯನಿರತ ಸಿಬ್ಬಂದಿ

ಇಷ್ಟಾದ್ರೂ ಮೇಲುಸ್ತುವಾರಿ ವಹಿಸಿಕೊಂಡಿರುವ ಸ್ಥಳೀಯ ತಹಶೀಲ್ದಾರ್​, ಕ್ಷೇತ್ರ ಶಿಕ್ಷಣಾಧಿಕಾರಿ ಯಾರೊಬ್ಬರೂ ಬಂದು ನಮ್ಮ ಗೋಳು ಕೇಳ್ತಿಲ್ಲ. ಪೊಲೀಸ್ ಸಿಬ್ಬಂದಿಯೂ ಬಂದಿಲ್ಲ. ನಮ್ಮ ಆರೋಗ್ಯ ಕಾಪಾಡಬೇಕಾದ ವೈದ್ಯರೇ ನಮ್ಮ ಕಡೆ ನೋಡುತ್ತಿಲ್ಲ ಎಂದು ಕ್ವಾರಂಟೈನ್​ನಲ್ಲಿದ್ದವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

Last Updated : May 20, 2020, 5:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.