ಬೀದರ್: ಗಣೇಶ ಹಬ್ಬದ ಪ್ರಯುಕ್ತ ಚಂದಾ ಕೇಳಲು ಹೋದ ಯುವಕರಿಗೆ ಶಿಕ್ಷಕ ಬೈದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತಾಲೂಕಿನ ಕಾಡವಾದ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮುಖ್ಯಶಿಕ್ಷಕ ಟಿ.ಆರ್ ದೊಡ್ಡಿ ಬಳಿ ಯುವಕರು ಚಂದಾ ಕೇಳಲು ಹೋಗಿದ್ದಾರೆ. ಈ ವೇಳೆ ಜಾತಿ-ಧರ್ಮದ ಹಾಗೂ ಪ್ರಸ್ತುತ ರಾಜಕೀಯದ ಬಗ್ಗೆ ಶಿಕ್ಷಕ ದೊಡ್ಡಿ ಯುವಕರಿಗೆ ತಿಳಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಯುವಕನೋರ್ವ ದೃಶ್ಯ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ.
ಗಣೇಶ ಹಬ್ಬದ ಸಂಭ್ರಮ ಎಂಬುದೆಲ್ಲಾಒಂದು ರೀತಿಯ ಪಿತೂರಿ. ಒಂದೇ ಸಮುದಾಯ ಅಧಿಕಾರದಲ್ಲಿರಲು ಇಂತಹ ಹಬ್ಬ ಆಚರಣೆಗಳನ್ನು ಜಾರಿಗೆ ತರಲಾಯಿತು ಎಂದು ದೇವರ ಬಗ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಗದಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.