ETV Bharat / state

ಹೊಸ ಪ್ರಿಯಕರನೊಂದಿಗೆ ಸೇರಿ ಮಾಜಿ ಪ್ರಿಯಕರನ ಕೊಂದ ಯುವತಿ ಕುಟುಂಬಸ್ಥರು - youth killed by relatives of his lover in bidar

ತನ್ನ ಹೊಸ ಪ್ರಿಯಕರನೊಂದಿಗೆ ಸೇರಿ ಹಳೆ ಪ್ರಿಯಕರನನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ತಾಂಡಾದಲ್ಲಿ ನಡೆದಿದೆ.

the-family-members-of-the-women-who-killed-her-ex-lover-in-bidar
ಹೊಸ ಪ್ರಿಯಕರನೊಂದಿಗೆ ಸೇರಿ ಮಾಜಿ ಪ್ರಿಯಕರನ ಕೊಂದ ಯುವತಿ ಕುಟುಂಬಸ್ಥರು
author img

By

Published : Jul 21, 2022, 3:21 PM IST

ಬಸವಕಲ್ಯಾಣ (ಬೀದರ್ ): ಯುವತಿಯೊಂದಿಗಿನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಹೊಸ ಪ್ರಿಯಕರನೊಂದಿಗೆ ಸೇರಿ ಹಳೆ ಪ್ರಿಯಕರನ ಕೊಲೆ ನಡೆಸಿರುವ ಘಟನೆ ತಾಲೂಕಿನ ಪ್ರೇಮಸಿಂಗ್ ಬಂಜಾರಾ ತಾಂಡಾದಲ್ಲಿ ನಡೆದಿದೆ. ಇಲ್ಲಿನ ತಾಂಡಾದ ನಿವಾಸಿ ಮಾರುತಿ ಖೂಬಾ ಚಿನ್ನಿರಾಥೋಡ್ (21) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ.

ತಾಂಡಾದ ಯುವತಿಯನ್ನು ಪ್ರೀತಿಸುತ್ತಿದ್ದ ಯುವಕ ಮಾರುತಿಗೆ ಕೆಲವು ತಿಂಗಳ ಹಿಂದೆ ಬೇರೆ ಯುವತಿಯೊಂದಿಗೆ ಮದುವೆಯಾಗಿತ್ತು. ಹೀಗಾಗಿ ಈತನಿಂದ ದೂರವಾದ ಯುವತಿ ಹಿರನಾಗಾಂವ ಗ್ರಾಮದ ಸುಭಾಷ್ ನಾಗೂರೆ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ದಾಳೆ ಎನ್ನಲಾಗಿದೆ. ಆದರೆ, ಮದುವೆ ನಂತರ ಕೆಲ ದಿನಗಳ ಕಾಲ ದೂರವಾಗಿದ್ದ ಹಳೆ ಪ್ರೇಮಿ ಮಾರುತಿ ಮತ್ತೆ ಈ ಯುವತಿಯೊಂದಿಗೆ ಅಕ್ರಮ ಸಂಬಂಧ ಮುಂದುವರೆಸಿದ್ದ. ಇದನ್ನು ಕಂಡ ಸುಭಾಷ್ ಹಾಗೂ ಯುವತಿಯ ಕುಟುಂಬದ 5 ಜನ ಸದಸ್ಯರು ಸೇರಿಕೊಂಡು ಬುಧವಾರ ಸಂಜೆ ಯುವತಿ ಮನೆಗೆ ಆಗಮಿಸಿದ ಮಾರುತಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

the-family-members-of-the-women-who-killed-her-ex-lover-in-bidar
ಕೊಲೆಯಾದ ಯುವಕ

ಯುವಕನ ಕೊಲೆ ವಿಷಯ ಗೊತ್ತಾಗುತ್ತಿದ್ದಂತೆ ರೊಚ್ಚಿಗೆದ್ದ ತಾಂಡಾದ ಸುಮಾರು 25 ರಿಂದ 30 ಜನರನ್ನೊಳಗೊಂಡ ಜನರ ಗುಂಪು ಆರೋಪಿಗಳ ಮೇಲೆ ದಾಳಿ ನಡೆಸಿ ಮನ ಬಂದಂತೆ ಥಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಆರೋಪಿಗಳಾದ ಸುಭಾಷ್, ಸೇವಂತಾಬಾಯಿ ಹಾಗೂ ರೇಖಾ ಎನ್ನುವವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿ ತಿಳಿದು ಮಂಠಾಳ ಸಿಪಿಐ ರಘುವೀರಸಿಂಗ್ ಠಾಕೂರ, ಪಿಎಸ್ಐ ಬಸಲಿಂಗಪ್ಪ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ನಂತರ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ 2 ಪ್ರತ್ಯೇಕ ಪ್ರಕರಣಗಳು ದಾಖಲು ಮಾಡಲಾಗಿದೆ.

ಓದಿ : ಬಾರ್​ಗೆ ಬಂದು ಕಂಠಪೂರ್ತಿ ಕುಡಿದ.. ಬಿಲ್​ ಕೊಟ್ಟ ಸಪ್ಲೈಯರ್​ಗೆ ಚಾಕುವಿನಿಂದ ಇರಿದು ಕೊಂದ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.