ಗುರುಮಠಕಲ್: ಕೊರೊನಾ ಲಾಕ್ಡೌನ್ನಿಂದ ಜನ ತುತ್ತು ಅನ್ನಕ್ಕೂ ಸಹ ಪರದಾಡುವಂತಾಗಿದೆ. ಬಡವರಿಗೆ, ನಿರ್ಗತಿಕರಿಗೆ ವಿವಿಧ ಸಂಘ ಸಂಸ್ಥೆಗಳು ಸಹಾಯ ಹಸ್ತ ಚಾಚಿವೆ. ಜಿಲ್ಲೆಯ ಗುರುಮಿಠಕಲ್ ಪಟ್ಟಣದ ಮಾತೋಶ್ರೀ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ರಾಜಾರಮೇಶ ಗೌಡರ ನೇತೃತ್ವದ ಟೀಂ ಸ್ಪಂದನ ಯುವ ಕಾರ್ಯಕರ್ತರು ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.
ಕೋವಿಡ್-19 ಕಾರ್ಯದಲ್ಲಿ ನಿರತರಾಗಿರುವ ಪೊಲೀಸ್ ಇಲಾಖೆ, ಪೌರ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಲಸೆ ಬಂದ ನಾಗರಿಕರಿಗೆ ಅವರು ಇರುವ ಸ್ಥಳಕ್ಕೆ ತೆರಳಿ ಶುಚಿ, ರುಚಿಯಾದ ಉಚಿತ ಊಟದ ಜೊತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ.
ಲಾಕ್ಡೌನ್ ಇರುವಷ್ಟು ದಿನ ಅಸಹಾಯಕರಿಗೆ ಉಚಿತ ಊಟ ನೀಡಲು ನಿರ್ಧಾರಿಸಿದ್ದಾರೆ. ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸಹ ಉಚಿತ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ. ಮಧ್ಯಾಹ್ನ ವಿವಿಧ ಕಚೇರಿಗಳಿಗೆ ಸ್ವತಃ ಈ ಯುವಕರೇ ಊಟವನ್ನು ತಲುಪಿಸುತ್ತಾರೆ.
ಇನ್ನು ಆಹಾರ ತಯಾರಿಸುವಾಗ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಈ ಯುವ ಪಡೆ, ವಿವಿಧ ಇಲಾಖೆಗಳ ಸಿಬ್ಬಂದಿಗೆ ಕರೆ ಮಾಡಿ ಅವರ ಊಟದ ಬಗ್ಗೆ ವಿಚಾರಸಿ ಅವರಿಗೆ ಆಹಾರ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಯುವಕರ ಈ ಕಾರ್ಯಕ್ಕೆ ನಗರದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.