ಬೀದರ್: ಮನೆಯ ಮಾಳಿಗೆ ಕುಸಿದ ಪರಿಣಾಮ ಒಂದೇ ಕುಟುಂಬದ ಆರು ಜನ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಸವಕಲ್ಯಾಣ ನಗರದ ಚಿಲ್ಲಾ ಬಡಾವಣೆಯಲ್ಲಿ ನಡೆದಿದೆ.
ಇಂದು ನಸುಕಿನಜಾವ ದಿಢೀರ್ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಗಾಢ ನಿದ್ರೆಯಲ್ಲಿದ್ದ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಳೆ ಮನೆಯೊಂದರ ಮಣ್ಣಿನ ಮಾಳಿಗೆ ಕುಸಿದು ಈ ದುರಂತ ಸಂಭವಿಸಿದೆ. ನದೀಮ್ ಶೇಕ್ ಯುಸೂಬ್ ಶೇಕ್ (45), ಇವರ ಪತ್ನಿ ಫರೀದಾ ಬೇಗ್ಂ (34), ಮಕ್ಕಳಾದ ಆಯುಷಾ ಬಾನು (15), ಮೇಹತಾಬಿ (14), ಫಜಾನಲಿ (09) ಹಾಗೂ ಫರಾನ್ ಅಲಿ (05) ದುರಂತದಲ್ಲಿ ಮೃತಪಟ್ಟವರು.
ಸ್ಥಳಕ್ಕೆ ಪೊಲೀಸರು, ನಗರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆಯಿಂದ ಬಡಾವಣೆಯಲ್ಲಿ ನೀರವ ಮೌನ ಆವರಿಸಿದೆ.