ಬೀದರ್: ಗಡಿ ಜಿಲ್ಲೆ ಜನರ ಬಹುದಿನಗಳ ಕನಸನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಡೇರಿಸಿದ್ದಾರೆ. ಬೀದರ್ ಜಿಲ್ಲೆ ಔರಾದ ತಾಲೂಕಿನ ಬಲ್ಲೂರ್ ಜೆ ಗ್ರಾಮದಲ್ಲಿ ಸಿಪೆಟ್ ಕಾಲೇಜನ್ನು (Central Institute of Petrochemicals Engineering & Technology – CIPET) ನಿರ್ಮಿಸಲಾಗುತ್ತದೆ. ಇದಕ್ಕೆ ಮಂಗಳವಾರ ಸಿಎಂ ಭೂಮಿ ಪೂಜೆ ನೆರವೇರಿಸಿದರು.
ಸಿಪೆಟ್ ಕಾಲೇಜು 90 ಕೋಟಿ ರೂ. ವೆಚ್ಚದಲ್ಲಿ 10 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಸಚಿವರಾದ ಗೋವಿಂದ್ ಕಾರಜೋಳ, ಶಂಕರ್ ಪಾಟೀಲ್ ಮನೇನಕೊಪ್ಪ, ಕೇಂದ್ರ ಸಚಿವ ಭಗವಂತ ಕುಮಾರ್, ವಿಧಾನ ಪರಿಷತ್ ಸಭಾಪತಿಗಳಾದ ರಘುನಾಥ್ ರಾವ್ ಮಲ್ಕಾಪುರೆ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಪಶು ಸಂಗೋಪನಾ ಸಚಿವರಾದ ಪ್ರಭು ಚೌವ್ಹಾಣ್ ಅವರು ಸಾಥ್ ನೀಡಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ರಸ್ತೆ ಗುಂಡಿಯಿಂದ ಅಪಘಾತ: ಸಂಪೂರ್ಣ ಮಾಹಿತಿ ಪಡೆದು ಕ್ರಮ ಎಂದ ಸಿಎಂ