ಬೀದರ್: ಕೋವಿಡ್-19 ಭೀತಿಯಿಂದ ಆಡಂಬರಕ್ಕೆ ಬ್ರೇಕ್ ಹಾಕಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಸಿ ಇಲ್ಲೊಂದು ಜೋಡಿ ಸರಳವಾಗಿ ಮದುವೆಯಾಗಿದೆ.
ಜಿಲ್ಲೆಯ ಔರಾದ್ ತಾಲೂಕಿನ ಕೊಳ್ಳೂರ ಗ್ರಾಮದ ಸುಪ್ರೀತಾ ಹಾಗೂ ಜಿತೇಂದ್ರ ದಾಂಪತ್ಯ ಜೀವನಕ್ಕೆ ಸರಳ ಮದುವೆ ಮೂಲಕ ಕಾಲಿಟ್ಟಿದ್ದಾರೆ. ಕನಿಷ್ಠ ಮಂದಿ ಸಂಬಂಧಿಕರನ್ನು ಆಹ್ವಾನಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಮದುವೆಯಾಗಿದ್ದಾರೆ.
ಅಲ್ಲದೆ ಮದುವೆಗೆ ಬರುವ ಅತಿಥಿಗಳು ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಹಾಗೂ ಪದೇ ಪದೆ ಸ್ಯಾನಿಟೈಸರ್ ಬಳಸುತ್ತಿದ್ದರು. ನೆಂಟರಿಗಾಗಿ ತಯಾರಿಸಲಾದ ಊಟ ಮಾಡಲಿಕ್ಕೆ ಜನರೇ ಹಿಂದೇಟು ಹಾಕಿದ್ದು, ಕೊರೊನಾ ಭೀತಿ ನಡುವೆ ನಡೆದ ಮದುವೆಯಲ್ಲಿ ಜನರು ಅಲರ್ಟ್ ಆಗಿರುವುದು ಕಂಡು ಬಂತು.