ETV Bharat / state

ಸಿದ್ದರಾಮಯ್ಯನವರ ಹೇಳಿಕೆ ಕಾಂಗ್ರೆಸ್ ಸಂಸ್ಕೃತಿ ಬಿಂಬಿಸುತ್ತೆ.. ಸಂಸದ ಖೂಬಾ - ಸಿದ್ದರಾಮಯ್ಯ

ನಮ್ಮ ಪಕ್ಷದ ಉತ್ತರಪ್ರದೇಶದ ಯಶಸ್ವಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು 'ಯೋಗಿ' ಅಲ್ಲ 'ಭೋಗಿ' ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರು ಕಾಂಗ್ರೆಸ್‌ನ ಯೋಗ್ಯತೆ ಮತ್ತು ಸಂಸ್ಕೃತಿ ನಿರೂಪಿಸಿದ್ದಾರೆ..

Bhagwanth Khuba
ಭಗವಂತ ಖೂಬಾ
author img

By

Published : Oct 2, 2020, 7:54 PM IST

ಬಸವಕಲ್ಯಾಣ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಉತ್ತರಪ್ರದೇಶ ಮುಖ್ಯಮಂತ್ರಿ ಬಗ್ಗೆ ಆಡಿದ ಮಾತು ಅದು ಕಾಂಗ್ರೆಸ್‌ನ ಸಂಸ್ಕೃತಿ ಬಿಂಬಿಸುತ್ತದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ಸಿದ್ದರಾಮಯ್ಯ ವಿರುದ್ಧ ಸಂಸದ ಭಗವಂತ ಖೂಬಾ ಟೀಕೆ

ನಗರದ ಬಿಜೆಪಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಖೂಬಾ, ಕಳೆದ 72 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವಿರೋಧಿಗಳನ್ನು ಕೆಟ್ಟದಾಗಿ ಅವಹೇಳನವಾಗಿ ನಿಂದಿಸುವ ಸಂಸ್ಕೃತಿ ಇದೆ. ಈಗ ಸಿದ್ದರಾಮಯ್ಯನವರು ಅದನ್ನೇ ಮುಂದುವರೆಸಿದ್ದಾರೆ ಎಂದು ಆರೋಪಿಸಿದರು.

ಭಾರತೀಯ ಜನತಾ ಪಕ್ಷದ ಸಂಸ್ಕಾರ ಮತ್ತು ಸಂಸ್ಕೃತಿಯಿಂದಾಗಿ ನಾವು ರಾಜಕೀಯವಾಗಿ ಯಾರನ್ನೇ ನಿಂದಿಸಿದ್ದರು ಕೂಡ ಗೌರವಪೂರ್ವಕ ಪದಗಳಿಂದಲೇ ನಿಂದಿಸುತ್ತೇವೆ. ನಮ್ಮ ಪಕ್ಷದ ಉತ್ತರಪ್ರದೇಶದ ಯಶಸ್ವಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು "ಯೋಗಿ" ಅಲ್ಲ "ಭೋಗಿ" ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರು ಕಾಂಗ್ರೆಸ್‌ನ ಯೋಗ್ಯತೆ ಮತ್ತು ಸಂಸ್ಕೃತಿ ನಿರೂಪಿಸಿದ್ದಾರೆ ಎಂದು ಸಂಸದ ಖೂಬಾ ಟೀಕಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.