ETV Bharat / state

ಸಿದ್ದರಾಮಣ್ಣ ರಾಜ್ಯದ ಜನರಿಗೆ ಮೋಸ ಮಾಡಿದ್ದಾರೆ : ನಳಿನ್​ ಕುಮಾರ್​ ಕಟೀಲ್​ - ಈಟಿವಿ ಭಾರತ್​ ಕನ್ನಡ ನ್ಯೂಸ್

ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಸುಳ್ಳು ಹೇಳಿ ಸಿಎಂ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್

author img

By

Published : Jun 22, 2023, 5:15 PM IST

Updated : Jun 22, 2023, 5:54 PM IST

ವಂಚನೆ ಮಾಡಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಿದೆ: ನಳಿನ್​ ಕುಮಾರ್​ ಕಟೀಲ್​

ಬೀದರ್​ : ರಾಜ್ಯದ ಜನರಿಗೆ 5 ಭಾಗ್ಯಗಳು ಕೊಡುತ್ತೇನೆ ಎಂದು ಹೇಳಿ ವಂಚನೆ ಮಾಡಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಿದೆ. ಅಧಿಕಾರ ಬಂದಮೇಲೆ ವಿದ್ಯುತ್ ದರ ಹೆಚ್ಚಳ ಮಾಡುವ ಮೂಲಕ ಬರೆ ಎಳೆಯುವ ಕೆಲಸ ಕಾಂಗ್ರೆಸ್ ಮಾಡಿದ್ದು, ವಾಣಿಜ್ಯೋದ್ಯಮಕ್ಕೆ ಸಾಕಷ್ಟು ನಷ್ಟವಾಗಿರುವುದರಿಂದ ಉದ್ಯಮಿಗಳು ಮತ್ತು ವ್ಯಾಪಾರಿಗಳು ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಇವರಿಗೆ ಬಿಜೆಪಿ ಪೂರ್ಣ ನೈತಿಕ ಬೆಂಬಲ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಹೇಳಿದ್ದಾರೆ.

ಬೀದರ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಟವರು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಹೇಳಿ ಮೋಸ ಮಾಡಿದ್ದಾರೆ. ಬಿಜೆಪಿ ಸರ್ಕಾರ ರಾಜ್ಯ ಹಾಗು ಕೇಂದ್ರದಲ್ಲಿ ಬಂದ ಮೇಲೆ ಕೋವಿಡ್ ಸಮಯದಲ್ಲಿ ಬಡವರಿಗೆ 10 ಕೆಜಿ ಅಕ್ಕಿ ನೀಡುವ ಕೆಲಸವನ್ನು ಮಾಡಿದೆ. ಆ ಸಂಕಷ್ಟ ಸಂದರ್ಭದಲ್ಲಿ ಯಾರು ಆಹಾರವಿಲ್ಲದೆ ಕೊರಗಬಾರದು ಎಂದು ಕೇಂದ್ರ ಸರ್ಕಾರ ಕೊಟ್ಟಿತ್ತು. ಈಗಲು ನಮ್ಮ ಸರ್ಕಾರ ದೇಶದ ಎಲ್ಲಾ ರಾಜ್ಯಗಳಿಗೆ ಸಮಾನವಾಗಿ ಅಕ್ಕಿ ಹಂಚಿಕೆ ಮಾಡುತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯ 10 ಕೆಜಿ ಕೊಡುತ್ತೇನೆ ಎಂದು ಪ್ರಣಾಳಿಕೆಯಲ್ಲಿ ಹೇಳಿದರು. ಆ ವೇಳೆ ಯಾವ 10 ಕೆಜಿ ಅಕ್ಕಿ ಎಂದು ಹೇಳಿದ್ದೀರಿ. ಕೇಂದ್ರ ಸರ್ಕಾರದ್ದು ಸೇರಿಸಿ ಹೇಳಿದ್ರಾ. ನಿಮ್ಮ ಕಾಂಗ್ರೆಸ್​​ ಪಾರ್ಟಿಯದ್ದು ಅಂತ ಹೇಳಿದ್ರಾ. ಹೀಗಾಗಿ ನೀವು ರಾಜ್ಯದ ಜನರಿಗೆ ಕೊಡಬೇಕಾಗಿರುವುದು 15 ಕೆಜಿ ಅಕ್ಕಿ. ಇದನ್ನು ಕೊಡಲು ವಿಫಲವಾದ ಕಾರಣ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ. ಇಡೀ ದೇಶದಲ್ಲಿ ಯಾವ ರೀತಿ ಎಲ್ಲಾ ರಾಜ್ಯಗಳಿಗೆ ಸರಿಸಮಾನವಾಗಿ ಅಕ್ಕಿ ಹಂಚುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ.

ಇದರ ಮಧ್ಯೆ ಸಿದ್ದರಾಮಯ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತು ಕೇಂದ್ರ ಆಹಾರ ನಾಗರಿಕ ಪೂರೈಕೆ ಸಚಿವರನ್ನು ಭೇಟಿಯಾಗಿಲ್ಲ. ಜೊತೆಗೆ 2 ಲಕ್ಷ ಟನ್ ಅಕ್ಕಿ ಬೇಕು ಅಂತ ಯಾವುದೇ ಬೇಡಿಕೆಯನ್ನು ಕೇಂದ್ರದ ಮುಂದೆ ಇಟ್ಟಿಲ್ಲ. ಬೇಡಿಕೆಗಳನ್ನು ಕೆಳದೆ ಏಕಾಏಕಿ ಆರೋಪ ಮಾಡುವುದು ಸರಿ ಅಲ್ಲ. ಆಡಳಿತ ಮಾಡಲಿಕ್ಕೆ ಬಾರದ ಹಿನ್ನೆಲೆ ಈ ಎಲ್ಲ ಘಟನೆ ನಡೆಯುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ​ ನಳಿನ್​ ಕುಮಾರ್​ ಕಟೀಲ್​ ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ. ಒಂದು ಕಡೆ ಗೋಹತ್ಯೆ ಕಾಯ್ದೆ ಮತ್ತು ಮತಾಂತರ ಕಾಯ್ದೆ ಹಿಂಪಡೆದುಕೊಳ್ಳುತ್ತಾರೆ. ಮತ್ತೊಂದೆಡೆ ಪಠ್ಯ ಪುಸ್ತಕ ಬದಲಾಣೆ ಮಾಡುತ್ತಿದ್ದಾರೆ. ಕೊನೆಯದಾಗಿ ಬಿಜೆಪಿ ಸರ್ಕಾರವಿದ್ದಾಗ ಯಾವೆಲ್ಲಾ ತೀರ್ಮಾನ ತೆಗೆದುಕೊಂಡಿತ್ತೋ ಅವುಗಳನ್ನು ವಾಪಸ್ ತೆಗೆದುಕೊಳ್ಳುತ್ತಿದ್ದಾರೆ. ಈ ನಡುವೆ ಹಿಂದು ಕಾರ್ಯಕರ್ತರ ಮೇಲೆ, ರಾಷ್ಟ್ರ ಚಿಂತಕರ ಮೇಲೆ ಕೇಸ್ ಹಾಕುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಕಟೀಲ್​ ಆರೋಪಿಸಿದರು.

ನಾನು ಮೊನ್ನೆ ಸಿದ್ದರಾಮಯ್ಯ ಅವರನ್ನು ಕೇಳಿದ್ದೇನೆ. ನಿಮ್ಮ ಸರ್ಕಾರ ಬಂದಾಗ ಪಾಕ್​ ಧ್ವಜ ಹಿಡಿದು ಪಾಕಿಸ್ತಾನ್ ಜಿಂದಾಬಾದ್​ ಎಂದು ಘೋಷಣೆ ಕೂಗಿದರು. ಏಕೆ ಪಾಕಿಸ್ತಾನ ಪರ ಘೋಷಣೆ ಕೂಗಿದವರ ಮೇಲೆ ಏಕೆ ಕೇಸ್ ಹಾಕಿಲ್ಲ? ಇದರಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ ದ್ವೇಷದ ರಾಜಕಾರಣವನ್ನು ಮಾಡುತ್ತಿರುವುದು ಕಾಂಗ್ರೆಸ್ ಎಂದು ನಳಿನ್ ಕುಮಾರ್​​ ಹೇಳಿದರು.

ಇದನ್ನೂ ಓದಿ : ಬಿಟ್ಟಿ ಭಾಗ್ಯ ಕೊಡಲಾಗದ ಕಾಂಗ್ರೆಸ್​ ಸರಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ: ನಳೀನ್ ಕುಮಾರ್​ ಕಟೀಲ್​

Last Updated : Jun 22, 2023, 5:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.