ಬೀದರ್ : ನಡುರಾತ್ರಿಯಲ್ಲಿ ನಿರ್ಗತಿಕ ವಿಶೇಷ ಚೇತನ ಮಹಿಳೆಯರಿಗೆ ಒಂದೊತ್ತಿನ ಊಟ ಕೊಟ್ಟು ಪುಸಲಾಯಿಸಿ ಹಾಸಿಗೆಗೆ ಕರೆದು ಲೈಂಗಿಕ ದೌರ್ಜನ್ಯ ಮಾಡ್ತಿದ್ದ ವಿಕೃತ ಕಾಮುಕ ಸಾರ್ವಜನಿಕರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಸಖತ್ ಧರ್ಮದೇಟು ತಿಂದಿದ್ದಾನೆ.
ಬೀದರ್ ನಗರದ ರಸ್ತೆ ಪಕ್ಕದಲ್ಲಿ ಮಲಗ್ತಿದ್ದ ಬುದ್ದಿಮಾಂಧ್ಯ ಬಾಲಕಿಯರು, ಮಹಿಳೆಯರ ಮೇಲೆ ಅತ್ಯಾಚಾರ ಮಾಡ್ತಿದ್ದ ಈ ಭೂಪ, ಕೊನೆಗೂ ಜನರ ಕೈಗೆ ಸಿಕ್ಕಿದ್ದಾನೆ. ಭಿಕ್ಷೆ ಎತ್ತಿ ಬದುಕುತ್ತಿದ್ದ ನಿರ್ಗತಿಕ ಮಹಿಳೆಯರನ್ನ ಪುಸಲಾಯಿಸಿ ದೈಹಿಕವಾಗಿ ಬಳಸಿಕೊಳ್ತಿದ್ದ ಖದೀಮ, ಒಪ್ಪೊತ್ತಿನ ಊಟ ಕೊಟ್ಟು ಹಾಸಿಗೆಯ ಸುಖ ಪಡೆಯುತ್ತಿದ್ದ ಭಯಂಕರ ಸತ್ಯ ಬಯಲಾಗಿದೆ.
ಗಾಂಜಾ ನಶೆಯಲ್ಲಿ ಅಸಾಹಕ ಮಹಿಳೆಯರೊಂದಿಗೆ ಕಾಮತೃಷೆ ತೀರಿಸಿಕೊಳ್ತಿದ್ದ ಕಾಮಿಯನ್ನು ಸದ್ಯ ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಥಳಿಸಿದ್ದಾರೆ. ಆದರೆ, ಪೊಲೀಸರು ಬರುವಷ್ಟರಲ್ಲಿ ಖದೀಮ ಕಣ್ತಪ್ಪಿಸಿ ಓಡಿ ಹೋಗಿದ್ದಾನೆ. ಕಳೆದೆರಡು ವರ್ಷಗಳಿಂದ ನಗರದಲ್ಲಿ ಭಿಕ್ಷುಕಿಯರು ಗರ್ಭಿಣಿಯಾಗಿದ್ರು. ಇದರಿಂದ ತಡರಾತ್ರಿಯಲ್ಲಿ ಜನರೇ ಸೇರಿ ಈ ವಿಕೃತ ಕಾಮಿಯ ನಿಜ ಬಣ್ಣ ಬಯಲು ಮಾಡಿದ್ದಾರೆ.