ETV Bharat / state

ಜೆಸಿಬಿ ಯಂತ್ರದೊಂದಿಗೆ ರಸ್ತೆಗಿಳಿದ ಅಧಿಕಾರಿಗಳು.. ರಸ್ತೆ ಅತಿಕ್ರಮಣ ತೆರವು ಕಾರ್ಯಾಚರಣೆ

ರಸ್ತೆಯಲ್ಲಿ ಅತಿಕ್ರಮಣ ಮಾಡಲಾದ ಸ್ಥಳ ಸ್ವಯಂ ತೆರವುಗೊಳಿಸಬೇಕು ಎಂದು ಅಂಗಡಿ ಮಾಲೀಕರಿಗೆ ನಗರ ಸಭೆಯಿಂದ ನೋಟಿಸ್ ನೀಡಲಾಗಿತ್ತು. ಆದರೂ ತೆರವುಗೊಳಿಸಿರಲಿಲ್ಲ.

ಜೆಸಿಬಿ ಯಂತ್ರ
ಜೆಸಿಬಿ ಯಂತ್ರ
author img

By

Published : Jun 2, 2020, 5:31 PM IST

ಬಸವಕಲ್ಯಾಣ : ಮುಖ್ಯ ರಸ್ತೆಯಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಟ್ಟಡ ಹಾಗೂ ತಗಡಿನ ಶೆಡ್​ಗಳನ್ನು ತೆರವುಗೊಳಿಸಿದ ನಗರಸಭೆ ಅಧಿಕಾರಿಗಳ ತಂಡ, ಅತಿಕ್ರಮಣಕಾರರಿಗೆ ಬಿಸಿ ಮುಟ್ಟಿಸಿದ್ದಾರೆ.

ನಗರದ ನಾರಾಯಣಪುರದಲ್ಲಿ ರಸ್ತೆ ಅಗಲೀಕರಣಕ್ಕೆ ತೊಡಕಾಗಿದ್ದ, ಅಕ್ರಮ ಕಟ್ಟಡಗಳನ್ನು ಜೆಸಿಬಿ ಯಂತ್ರದ ಮೂಲಕ ನಗರಸಭೆ ಅಧಿಕಾರಿಗಳು ನೆಲಸಮ ಮಾಡಿದ್ದಾರೆ. ನಾರಾಯಣಪುರ ರಸ್ತೆ ಮಾರ್ಗದಲ್ಲಿ ಹೊಸದಾಗಿ 100 ಅಡಿ ಅಗಲದ ದ್ವಿಪಥ ರಸ್ತೆ ನಿರ್ಮಾಣವಾಗುತ್ತಿದೆ. ಆದರೆ, ರಸ್ತೆ ಪಕ್ಕದ ವಾಣಿಜ್ಯ ಮಳಿಗೆಗಳ ಮುಂದೆ ಕೆಲವರು ತಗಡಿನ ಶೆಡ್ ನಿರ್ಮಿಸಿದ್ರೆ, ಮತ್ತೆ ಕೆಲವರು ಕಟ್ಟಡಗಳನ್ನು ನಿರ್ಮಾಣ ಮಾಡಿ ರಸ್ತೆ ಅತಿಕ್ರಮಣ ಮಾಡಿಕೊಂಡಿದ್ದರು.

ರಸ್ತೆಯಲ್ಲಿ ಅತಿಕ್ರಮಣ ಮಾಡಲಾದ ಸ್ಥಳ ಸ್ವಯಂ ತೆರವುಗೊಳಿಸಬೇಕು ಎಂದು ಅಂಗಡಿ ಮಾಲೀಕರಿಗೆ ನಗರ ಸಭೆಯಿಂದ ನೋಟಿಸ್ ನೀಡಲಾಗಿತ್ತು. ಆದರೂ ತೆರವುಗೊಳಿಸದ ಕಾರಣ, ನಗರಸಭೆ ಪೌರಾಯುಕ್ತೆ ಮೀನಾಕುಮಾರಿ ಬೋರಾಳಕರ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಚರಣೆ ನಡೆಸಿತು. ಜೆಸಿಬಿಗಳ ಮೂಲಕ ರಸ್ತೆಯಲ್ಲಿದ್ದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿದರು.

ಜೆಸಿಬಿಗಳಿಂದ ರಸ್ತೆ ಅತಿಕ್ರಮಣ ತೆರವು..

ನಗರಸಭೆಯಿಂದ ತೆರವು ಕಾರ್ಯ ಆರಂಭವಾಗುತ್ತಿದ್ದಂತೆ ಎಚ್ಚೆತ್ತ ಕೆಲ ಅಂಗಡಿಗಳ ಮಾಲೀಕರು ಸ್ವಯಂ ತೆರವುಗೊಳಿಸುವುದಾಗಿ ಕೆಲ ಗಂಟೆಗಳ ಕಾಲ ಸಮಯಾವಕಾಶ ಕೋರಿ, ಅಕ್ರಮ ಸ್ಥಳ ತೆರವುಗೊಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.