ETV Bharat / state

ಬಸವಕಲ್ಯಾಣದಲ್ಲಿ ಕಾಳ ಸಂತೆಗೆ ಸಾಗಿಸುತ್ತಿದ್ದ 26 ಟನ್ ಪಡಿತರ ಅಕ್ಕಿ ಜಪ್ತಿ

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದ ವೇಳೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಲಾರಿ ಸಹಿತ 7.80 ಲಕ್ಷ ರೂ. ಮೌಲ್ಯದ 26 ಟನ್​ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

Rice seized
ಲಾರಿ ಜಪ್ತಿ
author img

By

Published : Dec 18, 2019, 10:34 PM IST

ಬಸವಕಲ್ಯಾಣ(ಬೀದರ್): ಅನ್ನ ಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಾರಲು ಸಾಗಿಸುತ್ತಿದ್ದ ವೇಳೆ ಲಾರಿ ಸಹಿತ 7.80 ಲಕ್ಷ ರೂ. ಮೌಲ್ಯದ 26 ಟನ್​ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ

ಹೈದರಾಬಾದ್ ಮುಂಬೈ ಮಾರ್ಗದ ರಾಷ್ಟ್ರೀಯ ಹೆದ್ದಾರಿ-65ರಿಂದ ಹುಮನಾಬಾದ ಕಡೆಯಿಂದ ಲಾರಿಯಲ್ಲಿ ಅಕ್ಕಿ ಸಾಗಿಸುವಾಗ ತಡೋಳಾ ಸಮೀಪ ಅಧಿಕಾರಿಗಳ ತಂಡ ದಾಳಿ ನಡೆಸಿ 26 ಟನ್ ಅಕ್ಕಿಯನ್ನು ಜಪ್ತಿ ಮಾಡಿಕೊಂಡಿದ್ದು, ಲಾರಿ ಚಾಲಕ ನಾಪತ್ತೆಯಾಗಿದ್ದಾನೆ.

ತಹಶಿಲ್ದಾರ್​ ಸಾವಿತ್ರಿ ಸಲಗರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳಾದ ನೀಲಮ್ಮ ಗಾಯಕವಾಡ, ರಾಮರತನ ದೇಗಲೆ ನೇತೃತ್ವದ ತಂಡ ದಾಳಿ ನಡೆಸಿದೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣ ಬಯಲು: ತಡೋಳಾ ಸಮೀಪ ಅಧಿಕಾರಿಗಳ ತಂಡ ದಾಳಿ ನಡೆಸಿದ ಬಳಿಕ ಮಧ್ಯಾಹ್ನ 26 ಟನ್ ಅಕ್ಕಿ ತುಂಬಿದ ಮತ್ತೊಂದು ಲಾರಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಒಂದೇ ದಿನದಲ್ಲಿ ಎರಡು ಲಾರಿ ಅಕ್ಕಿ ವಶಪಡಿಸಿಕೊಳ್ಳುವ ಮೂಲಕ ಆಹಾರ ಇಲಾಖೆ ಅಧಿಕಾರಿಗಳ ತಂಡ ಕಾಳ ಸಂತೆಯ ಕರಾಳ ಮುಖವನ್ನು ಬಯಲಿಗೆಳೆದಿದೆ.

Intro:
೨ ವಿಡಿಯೊ ಕಳಿಸಲಾಗಿದೆ

ಬಸವಕಲ್ಯಾಣ: ಅನ್ನ ಭಾಗ್ಯ ಯೋಜನೆಯಡಿ ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತಿದ್ದ ಲಾರಿ ಸಹಿತ ೭.೮೦ ಲಕ್ಷ ರೂ. ಮೌಲ್ಯದ ೨೬೦ ಕ್ವಿಂಟಾಲ್ (೨೬ಟನ್) ಅಕ್ಕಿಯನ್ನು ಇಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ ಘಟನೆ ಮಂಗಳವಾರ ನಡೆದಿದೆ.
ಹೈದ್ರಾಬಾದ್ ಮುಂಬೈ ಮಾರ್ಗದ ರಾಷ್ಟಿçÃಯ ಹೆದ್ದಾರಿ-೬೫ರಿಂದ ಹುಮನಾಬಾದ ಕಡೆಯಿಂದ ಲಾರಿಯಲ್ಲಿ ಅಕ್ಕಿ ಸಾಗಿಸುವಾಗ ಇಲ್ಲಿಯ ತಡೋಳಾ ಸಮಿಪ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳ ತಂಡ, ಅಕ್ಕಿ ತುಂಬಿದ ಲಾರಿ ಸಹಿತ ೨೬ ಟನ್ ಪಡಿತರ ಅಕ್ಕಿ ಜಪ್ತಿ ಮಾಡಿಕೊಂಡಿದ್ದು, ಲಾರಿ ಚಾಲಕ ನಾಪತ್ತೆಯಾಗಿದ್ದಾನೆ ಎಂದು ತಿಳಿಸಿದೆ.
ತಹಶೀಲ್ದಾರ ಸಾವಿತ್ರಿ ಸಲಗರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳಾದ ನೀಲಮ್ಮ ಗಾಯಕವಾಡ, ರಾಮರತನ ದೇಗಲೆ ನೇತೃತ್ವದ ತಂಡ ದಾಳಿ ನಡೆಸಿದೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣ: ಆಹಾರ ಇಲಾಖೆ ಅಧಿಕಾರಿಗಳ ತಂಡ ಇಲ್ಲಿಯ ರಾಷ್ಟಿçÃಯ ಹೆದ್ದಾರಿ ೬೫ರಲ್ಲಿಯ ತಾಲೂಕಿನ ತಡೋಳಾ ಸಮಿಪ ಮಂಗಳವಾರ ಬೆಳಗ್ಗೆ ಅಕ್ರಮವಾಗಿ ಸಾಗಿಸುತಿದ್ದ ವೇಳೆ ದಾಳಿಸಿ ನಡೆಸಿ, ಲಾರಿ ಸಹಿತ ೯ ಲಕ್ಷ ರು. ಮೌಲ್ಯದ ೩೦ ಟನ್ ಪಡಿತರ ಅಕ್ಕಿ ವಶಪಡಿಸಿಕೊಂಡು ಲಾರಿ ಚಾಲಕನನ್ನು ಬಂಧಿಸಿತ್ತು. ಇದಾದ ಬಳಿಕ ಮಧ್ಯಾಹ್ನ ೨೬ ಟನ್ ಅಕ್ಕಿ ತುಂಬಿದ ಮತ್ತೊಂದು ಲಾರಿ ವಶಪಡಿಸಿಕೊಂಡಿದ್ದು, ಒಂದೇ ದಿನದಲ್ಲಿ ಎರಡು ಲಾರಿ ಅಕ್ಕಿ ವಶ ಪಡಿಸಿಕೊಳ್ಳುವ ಮೂಲಕ ಆಹಾರ ಇಲಾಖೆ ಅಧಿಕಾರಿಗಳ ತಂಡ ಕಾಳ ಸಂತೆ ಕರಾಳ ಮುಖ ಬಯಲಿಗೆಳೆದಿದೆ.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.