ಬಸವಕಲ್ಯಾಣ: ತಾಲೂಕಿನ ಮದರವಾಡಿಯಲ್ಲಿ ಮತದಾನ ಬೂತ್ ಮಂಜೂರು ಮಾಡಲು ಕ್ರಮ ಕೈಗೊಳ್ಳವಂತೆ ವಾಡಿಯ ಪ್ರಮುಖರು ಮನವಿ ಮಾಡಿದ್ದಾರೆ.
ಗ್ರಾಮದ ಪ್ರಮುಖರ ನಿಯೋಗದಿಂದ ಸೋಮವಾರ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ಸಹಾಯಕ ಆಯುಕ್ತ ಭಂವರ್‌ಸಿಂಗ್ ಮೀನಾ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.
ಮದರವಾಡಿ ಗ್ರಾಮದಲ್ಲಿ 280 ಜನ ಮತದಾರರಿದ್ದಾರೆ. ಚುನಾವಣೆ ವೇಳೆ 6-7 ಕಿಲೋ ಮೀಟರ್ ದೂರದಲ್ಲಿ ನವಚಂದ ವಾಡಿಗೆ ತೆರಳಿ ಮತದಾನ ಮಾಡಬೇಕಾಗುತ್ತಿದೆ. ವಯೋವೃದ್ಧರಿಗೆ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಮದರವಾಡಿಯಲ್ಲಿ ಮತದಾನ ಕೇಂದ್ರ ಮಂಜೂರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಧೋಂಡಿಬಾ ಬೋಕ್ಕೆ, ರಾಮದಾಸ, ಲಕ್ಷಣ ಬೊಕ್ಕೆ, ಮಹಾದೇವ, ಭಾನುದಾಸ, ರಾಜಾ ಬೊಕ್ಕೆ ನಿಯೋಗದಲ್ಲಿದ್ದರು.